ಜಗತ್ತಿನ ಅತಿದೊಡ್ಡ ವಿಮಾನವು ಹಾರಾಟಕ್ಕೆ ಸಿದ್ಧ! ಏನಿದರ ವಿಶೇಷತೆಗಳು…? ನೋಡಿಲ್ಲಿ.

ಜಗತ್ತಿನ ಅತಿ ದೊಡ್ಡ ವಿಮಾನ Roc ಮತ್ತೊಮ್ಮೆ ಗಗನದಲ್ಲಿ ಹಾರಾಟಕ್ಕೆ ಸಿದ್ಧವಾಗಿ ನಿಂತಿದೆ. ನಿನ್ನೆ ರವಿವಾರ ವಿಮಾನವು ಟೆಸ್ಟಿಂಗ್ ಸಲುವಾಗಿ ಎಂಟು ತಿಂಗಳುಗಳ ನಂತರ ಆಕಾಶದಲ್ಲಿ ಹಾರಾಡಿತು. ವಿಶೇಷವೆಂದರೆ, ಇದು ಆಕಾರದಲ್ಲಿ ಒಂದು ಫುಟ್ಬಾಲ್ ಮೈದಾನಕ್ಕಿಂತಲೂ ದೊಡ್ಡದಾಗಿದೆ. ಈ ವಿಮಾನವು ಹಾರಾಟಕ್ಕೆ ಮುನ್ನ ಎಲ್ಲರ ಗಮನ ತನ್ನ ಕಡೆಗೆ ಸೆಳೆದುಕೊಂಡಿತ್ತು. ಈ ವಿಮಾನವು 4 ಗಂಟೆ 23 ನಿಮಿಷಗಳವರೆಗೆ ಆಕಾಶದಲ್ಲಿದ್ದು ತನ್ನ ಕ್ಷಮತೆಯನ್ನು ತೋರಿಸಿಕೊಟ್ಟಿತು. ಏತನ್ಮದ್ಯೆ ಈ ವಿಮಾನದ ಮುಖಾಂತರ ಎತ್ತರವಾದ ಪರ್ವತ ಶ್ರೇಣಿಗಳ ಮಧ್ಯದಿಂದಲೂ ಪ್ರವಾಸ ಮಾಡಲಾಯಿತು.

ಈ ವಿಮಾನವು ಆಕಾಶದಲ್ಲಿ 23500 ಅಡಿ ಎತ್ತರದವರೆಗೆ ಹಾರಾಟ ಮಾಡಿದೆ ಎಂದು ವಿಮಾನ ಕಂಪನಿಯಾದ ‘ಸ್ಟ್ರೇಟೋಲಾಂಚ್’ ಹೇಳಿದೆ. ವಿಮಾನದ ಈ ಹಾರಾಟ ಇಲ್ಲಿಯವರೆಗೆ ಎಲ್ಲಕ್ಕೂ ದಾಖಲೆಯ ಎತ್ತರದ ಹಾರಾಟವಾಗಿದೆ ಎಂದು ಕಂಪನಿ ಹೇಳಿದೆ. ಹಿಂದಿನ ಬಾರಿ ವಿಮಾನವು 17 ಸಾವಿರ ಅಡಿ ಎತ್ತರದವರೆಗೆ ಹಾರಾಟ ಮಾಡಿತ್ತು. ಇದಲ್ಲದೆ ಈ ವಿಮಾನವು 35 ಸಾವಿರ ಅಡಿ ಎತ್ತರದವರೆಗೆ ಹಾರಾಟ ಮಾಡಲು ಸಮರ್ಥವಾಗಿದೆ ಎಂದು ಕಂಪನಿಯು ವಿಶ್ವಾಸ ವ್ಯಕ್ತಪಡಿಸಿದೆ.

ವಿಮಾನದ ಈ ಟೆಸ್ಟ್ ವಿಮಾನದ ಕ್ಷಮತೆಯ ಪ್ರತೀಕವಾಗಿದೆ ಎಂದು ಕಂಪನಿಯ ಸಿಇಒ ಹೇಳಿದ್ದಾರೆ. ಈ ವಿಮಾನದಲ್ಲಿ ಬೋಯಿಂಗ್ 747 ದ 6 ಎಂಜಿನ್ ಗಳಿಂದ ಚಾಲಿತವಾಗಿದ್ದು ಅದರ ಸಹಾಯದಿಂದ ಹೈಪರ್ಸಾನಿಕ್ ವಿಮಾನ ಆಕಾಶದಲ್ಲಿ ಉಡಾವಣೆ ಮಾಡಲು ಸಾಧ್ಯವಿದೆ.

ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿಯ ವಿಮಾನ ನಿಲ್ದಾಣದಿಂದ ಈ ಉಡಾವಣೆ ಮಾಡಲಾಗಿದೆ. ಪ್ರಸ್ತುತ ವಿಮಾನವು ಸೂಪರ್ ಸಾನಿಕ್ ವಾಹನಗಳಿಗೆ ಆಕಾಶದಲ್ಲಿ ಒಯ್ಯಲು ಸಮರ್ಥವಾಗಿದೆ. ಈ ವಿಮಾನದಲ್ಲಿ ಅಳವಡಿಸಲಾದ ಶಕ್ತಿಶಾಲಿಯಾದ 6 ಎಂಜಿನ್ ಗಳು ಆಕಾಶದಲ್ಲಿ ಸುಮಾರು 249475.804 ಕೆಜಿ ಭಾರವನ್ನು 35 ಸಾವಿರ ಅಡಿ ಎತ್ತರದವರೆಗೆ ತೆಗೆದುಕೊಂಡು ಹೋಗಲು ಸಮರ್ಥವಾಗಿವೆ. ಈ ಒಂದು ಕಾನ್ಸೆಪ್ಟ್ ಏರ್ ಕ್ರಾಫ್ಟ್ ಇದ್ದು ಒಂದು ನಿರ್ಧಿಷ್ಟವಾದ ಎತ್ತರದ ಮೇಲಿಂದ ರಾಕೆಟ್ ಸಹ ಉಡಾವಣೆ ಮಾಡಬಹುದಾಗಿದೆ.

ವೀಡಿಯೋ ನೋಡಿ

ಈ ವಿಮಾನಗಳಿಂದ ಭವಿಷ್ಯದಲ್ಲಿ ಉಪಗ್ರಹಗಳನ್ನು ಸಹ ಉಡಾವಣೆ ಮಾಡಲು ಸಹಾಯವಾಗಲಿದೆ.

ಸ್ಟ್ರೇಟೋಲಾಂಚ್ ಕಂಪನಿಯ ಸ್ಥಾಪನೆ ಮೈಕ್ರೋಸಾಫ್ಟ್ ನ ಸಹ ಸಂಸ್ಥಾಪಕರಾದ ಪಾಲ್ ಎಲೆನ್ ಅವರು 2011ರಲ್ಲಿ ಮಾಡಿದ್ದರು. ಉಪಗ್ರಹವೊಂದನ್ನು ಅವಕಾಶದಿಂದಲೇ ಸಹಜವಾಗಿಯೇ ಉಡಾಯಿಸಲು ಬರುವ ಉದ್ದೇಶವನ್ನು ಮುಂದಿಟ್ಟು ವಿಮಾನವನ್ನು ತಯಾರಿಸಲಾಗಿದೆ. 2018 ರಲ್ಲಿ ಪಾಲ್ ಎಲೇನ್ ಅವರು ತೀರಿಕೊಂಡ ನಂತರ ಕಂಪನಿಯು ಮಾರಾಟವಾಯಿತು. ಕಂಪನಿಯ ನೂತನ ಮಾಲೀಕರು ಈ ವಿಮಾನದ ಮುಖಾಂತರ ಶಬ್ದ ಕ್ಕಿಂತಲೂ ಐದು ಪಟ್ಟು ವೇಗದಲ್ಲಿ ಹೈಪರ್ ಸಾನಿಕ್ ರಾಕೆಟ್ ಉಡಾಯಿಸುವ ಗುರಿಯನ್ನು ಇಟ್ಟಿದ್ದಾರೆ.