ಜಗತ್ತಿನ ಅಪರೂಪದ ತೆಳ್ಳಗೆ, ಚೂಪು ಮುಖದ ಈ ಉದ್ದನೆಯ ಚಾಬುಕ್ ಹಾವನ್ನು ನೋಡಿದ್ದಿರಾ? ಇಲ್ಲವಾದರೆ ಇಲ್ಲಿ ನೋಡಿ.

ಹಾವು ನೋಡಿದರೆ ಸಾಕು, ದೊಡ್ಡ ಗಂಡಾಂತರ ಕಾದಿದೆ ಎಂದು ತಿಳಿದುಕೊಳ್ಳುವ ಜನರು ಸಾಕಷ್ಟು ಇದ್ದಾರೆ. ಹಾವು ನೋಡಿ ಭಯಗೊಳ್ಳುವವರೂ ನಮ್ಮಲ್ಲಿ ಹೆಚ್ಚು. ಅಲ್ಲದೇ, ಸುಖಾ ಸುಮ್ಮನೆ ಹಾವುಗಳಿಗೆ ಹಾನಿ ಮಾಡುವವರೂ ನಮ್ಮಲ್ಲೇನೂ ಕಮ್ಮಿ ಇಲ್ಲ.

ನಮ್ಮ ರಾಜ್ಯದಲ್ಲಿ 48 ಜಾತಿಯ ಹಾವುಗಳಿದ್ದು, ವಿಶೇಷವೆಂದರೆ ಕಾಡು ಹೊಂದಿರುವ ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಕಾಳಿಂಗ ಸರ್ಪ, ನಾಗರ ಹಾವು, ಗೂಳಿ ಮಂಡಲ, ಕೊಳಕ ಮಂಡಲ, ಬಿದಿರು ಗೂಳಿ ಮಂಡಲ ಹಾವುಗಳು ಕಾಣಸಿಗುತ್ತವೆ. ಈ ಹಾವುಗಳು ಹೆಚ್ಚು ವಿಷ ಹೊಂದಿರುತ್ತವೆ.

ಆದರೆ ಇಂದಿನ ಈ ಲೇಖನದಲ್ಲಿ ನೋಡುವ ಹಾವು ತುಂಬಾ ವಿಚಿತ್ರವಾಗಿದೆ. ಇದು ಹೆಚ್ಚಾಗಿ ಶ್ರೀಲಂಕಾದಲ್ಲಿ ಉತ್ಪತ್ತಿಯಾಗುವ ಪ್ರಜಾತಿಯಾಗಿದೆ. ಇದಕ್ಕೆ ಇಂಗ್ಲಿಷಿನಲ್ಲಿ green vine snake ಅಥವಾ long-nosed whip snake ಎಂತಲೂ ಕರೆಯುತ್ತಾರೆ. ಇದು ಹೆಚ್ಚಾಗಿ ಗಿಡದಲ್ಲಿಯೇ ಅಥವಾ ಗಿಡಗಳ ಎಲೆಗಳಲ್ಲಿ ವಾಸಿಸುವ ಹಾವಾಗಿದೆ. ಇದಕ್ಕೆ ಹಸಿರು ಬಳ್ಳಿಯಲ್ಲಿ ವಾಸಿಸುವ ಹಾವು ಅಥವಾ ಚಾಬುಕ್ ಹಾವು ಎಂದು ಕರೆಯುತ್ತಾರೆ. ಇದರ ಉದ್ದಳತೆ ಸುಮಾರು ಎರಡರಿಂದ ಎರಡೂವರೆ ಮೀಟರ್ ವರೆಗೆ ಇರುತ್ತದೆ.

ನೋಡಿ ಈ ಹಾವು…

ಪ್ರಸ್ತುತ ಈ ಹಾವಿನ ವಿಡಿಯೋವನ್ನು ಸ್ನೇಕ್ ಆಫ್ ಇಂಡಿಯಾ ಹೆಸರಿನ ಐಡಿಯಿಂದ ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 8.7 ಮಿಲಿಯನ್ ವೀಕ್ಷಣೆ ಪಡೆದಿದ್ದಲ್ಲದೆ ಸುಮಾರು 5 ಲಕ್ಷ 33 ಸಾವಿರ ನೆಟ್ಟಿಗರು ಲೈಕ್ ಮಾಡಿದ್ದಾರೆ. ನೋಡಿ ಈ ವಿಶೇಷ ವಿಡಿಯೋ.