ಜಗತ್ತಿನ ಎಲ್ಲಕ್ಕೂ ಪುಟ್ಟ ಹಸುವನ್ನು ನೋಡಿದ್ದೀರಾ? ಜನರಂತಿದ್ದಾರೆ how cute! ನೋಡಿ ಈ ವಿಡಿಯೋ

ಸೋಶಿಯಲ್ ಮೀಡಿಯಾ ಗಳಲ್ಲಿ ದಿನವೊಂದಕ್ಕೆ ನೂರಾರು ವಿಡಿಯೋಗಳು ಜನರ ಮುಂದೆ ಬರುತ್ತವೆ. ಅವುಗಳಲ್ಲಿ ಸೆಲೆಬ್ರಿಟಿಗಳ ವಿಡಿಯೋಗಳ ಹೊರತಾಗಿ ಒಂದಷ್ಟು ವಿಶೇಷ ವಿಡಿಯೋಗಳು ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತವೆ. ಈ ವಿಡಿಯೋ ಗಳಲ್ಲಿನ ವಿಶೇಷವಾದ ದೃಶ್ಯಗಳಿಂದ, ಅದ್ಭುತವೆನಿಸುವ ಮಾಹಿತಿಗಳಿಂದ ಹಾಗೂ ಆಶ್ಚರ್ಯ ಪಡಿಸುವ ವಿಶೇಷಣಗಳಿಂದ ಬಹಳಷ್ಟು ಜನರ ಗಮನವನ್ನು ಸೆಳೆಯುತ್ತದೆ. ಕಳೆದ ಕೆಲವು ದಿನಗಳಿಂದಲೂ ಸಹಾ ಸೋಶಿಯಲ್ ಮೀಡಿಯಾ ಗಳಲ್ಲಿ ಬಾಂಗ್ಲಾದೇಶದ ಹಸುವೊಂದರ ವಿಡಿಯೋ ಬಹಳ ಪ್ರಚಾರವನ್ನು ಪಡೆದುಕೊಂಡಿದೆ. ಈ ಹಸು ಸಹಾ ಒಂದರ್ಥದಲ್ಲಿ ಒಬ್ಬ ಸೆಲೆಬ್ರಿಟಿ ಎನ್ನುವಂತೆ ಅದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳ ವಿವಿಧ ಪ್ಲಾಟ್ ಫಾರ್ಮ್ ಗಳಲ್ಲಿ ಹರಿದಾಡುತ್ತಿವೆ. ಹಾಗಿದ್ದರೆ ಈ ಹಸುವಿನ ವಿಶೇಷತೆ ಏನು ಎನ್ನುವುದನ್ನು ನಾವು ಸ್ವಲ್ಪ ತಿಳಿದುಕೊಳ್ಳೋಣ.

ಬಾಂಗ್ಲಾದೇಶಕ್ಕೆ ಸೇರಿದ ಈ ಹಸು ಸಾಮಾನ್ಯ ಹಸುಗಳಂತೆ ಇದ್ದಿದ್ದರೆ ಬಹುಶಃ ಇಷ್ಟೊಂದು ಸುದ್ದಿಯಾಗುತ್ತಿರಲಿಲ್ಲ. ಈ ಹಸುವಿನ ಅಸಮಾನ್ಯ ಸಂಗತಿಯೊಂದು ಇದೀಗ ಅದನ್ನು ಜಗತ್ಪ್ರಸಿದ್ಧ ಮಾಡಿದೆ. ಹಾಗಿದ್ದರೆ ಏನು ಹಸುವಿನಲ್ಲಿರುವ ವಿಶಿಷ್ಟತೆ? ಯಾವುದು ಅದರಲ್ಲಿನ ಅಸಾಮಾನ್ಯ ಗುಣ? ಎನ್ನುವುದಾದರೆ ಅದು ಆ ಹಸುವಿನ ಎತ್ತರವಾಗಿದೆ. ಸಾಮಾನ್ಯವಾಗಿ ಹಸು ಎಂದಾಗ ನಮ್ಮ ಸುತ್ತಮುತ್ತ ನಾವು ನೋಡಿರುವ ಹಸುಗಳು ಅಥವಾ ಅನ್ಯದೇಶದ ಭಾರಿ ಗಾತ್ರದ ಹಸುಗಳು ನಮ್ಮ ಕಣ್ಣಮುಂದೆ ಮೂಡುತ್ತವೆ. ಆದರೆ ಬಾಂಗ್ಲಾ ದೇಶದ ಈ ಹಸು ತನ್ನ ಕುಬ್ಜತೆಯಿಂದಾಗಿ ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ.

ಹೌದು, ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ ಸ್ವಲ್ಪ ದೂರದಲ್ಲಿ ಒಂದು ಫಾರ್ಮ್ ಹೌಸ್ ನಲ್ಲಿ ಈ ಹಸುವಿದ್ದು, ಅದಕ್ಕೆ ರಾಣಿ ಎಂದು ಹೆಸರಿಡಲಾಗಿದೆ. ಈ ಹಸು ಬಹಳ ಕುಬ್ಜವಾಗಿದ್ದು, ಇದರ ಎತ್ತರ ಕೇವಲ 20 ಇಂಚುಗಳಾಗಿದೆ, ಇದರ ಉದ್ದ 26 ಇಂಚುಗಳು ಹಾಗೂ ಇದರ ತೂಕ ಕೇವಲ 26 ಕೆಜಿ ಗಳು ಮಾತ್ರವೇ ಇದೆ. ಫಾರ್ಮ್ ಹೌಸ್ ನ ಮ್ಯಾನೇಜರ್ ಈ ಮುದ್ದಾದ ಹಸಿವೆಗೆ ರಾಣಿ ಎನ್ನುವ ಹೆಸರನ್ನು ಇಟ್ಟಿದ್ದಾರೆ. ಈ ಕುಬ್ಜ ಗಾತ್ರದ ಹಸು ಬಹಳ ಮುದ್ದಾಗಿದ್ದು, ಇದನ್ನು ನೋಡುವುದಕ್ಕಾಗಿ ಜನ ದೂರ ದೂರದ ಊರುಗಳಿಂದ ಬರುತ್ತಿದ್ದು, ಹಸುವಿನ ಫೋಟೋ ತೆಗೆದುಕೊಂಡು, ಅದರ ಚಲನವಲನಗಳನ್ನು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ವಿಡಿಯೋ ನೋಡಿ

ವಿಶ್ವಮಟ್ಟದ ಮಾಧ್ಯಮವಾದ ಬಿಬಿಸಿ ಈ ಕುಬ್ಜ ಹಸುವಿನ ಕುರಿತಾಗಿ ಬಂದ ವರದಿಯನ್ನು ಪ್ರಸಾರ ಮಾಡಿದೆ. ರಾಣಿ ಸಾಮಾನ್ಯ ಹಸುಗಳಿಗಿಂತ ಭಿನ್ನವಾಗಿದ್ದು, ಇದರ ಗಾತ್ರ, ಎತ್ತರ ಮತ್ತು ತೂಕ ಈಗ ಚರ್ಚೆಯ ವಿಷಯವಾಗಿದೆ. ಫಾರ್ಮ್ ಹೌಸ್ ಮ್ಯಾನೇಜರ್ ಈ ಹಸು ಜಗತ್ತಿನಲ್ಲೇ ಅತ್ಯಂತ ಕಿರಿಯ ಗಾತ್ರದ ಹಸು ಎಂದು ಹೇಳಿದ್ದಾರೆ. ಅಲ್ಲದೇ ಹಸುವಿನ ಮಾಲೀಕರು ಈಗಾಗಲೇ ಅದರ ಹೆಸರನ್ನು ಗಿನ್ನಿಸ್ ವಿಶ್ವದಾಖಲೆಗೆ ಕಳುಹಿಸಿದ್ದಾರೆ. ಗಿನ್ನಿಸ್ ವಿಶ್ವದಾಖಲೆಯಲ್ಲಿ ಹಸು ಸ್ಥಾನ ಪಡೆಯಲು, ಗಿನ್ನಿಸ್ ನ ತಂಡ ಇಲ್ಲಿಗೆ ಬರುವ ಹಾಗೂ ಹಸುವಿನ ಕುರಿತಾಗಿ ಮಾಹಿತಿಯನ್ನು ಪಡೆಯುವ ಸಾಧ್ಯತೆಗಳು ದಟ್ಟವಾಗಿವೆ.