ಜಗತ್ತಿನ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ! ಈಗ ಎಷ್ಟಿದೆ ಅವರ ಒಟ್ಟು ಸಂಪತ್ತು?

ಫೋರ್ಬ್ಸ್ ನ್ ರಿಯಲ್ ಟೈಮ್ ಅಬ್ಜಾಧೀಶರ ಅನುಕ್ರಮ ನಂಬರ್ ಜಾಹೀರು ಮಾಡಲಾಯಿತು. ಅದರಲ್ಲಿ ಭಾರತದ ಸಿರಿವಂತ ಮುಕೇಶ್ ಅಂಬಾನಿಯವರ ಹೆಸರು ಸಮಾವೇಶವಾಗಿದೆ. ಇದರಲ್ಲಿ ಒಟ್ಟು ಆಸ್ತಿಯ ಮೂಲ್ಯವನ್ನು ಅವರು ಹೊಂದಿರುವ ಶೇರ್ಸ್ ಗಳ ಬೆಲೆಯ ಆಧಾರದ ಮೇಲೆ ಮಾಡಲಾಗುತ್ತದೆ. ಇದು ಪ್ರತಿ ಐದು ನಿಮಿಷಗಳಿಗೊಮ್ಮೆ ಅಪಡೆಟ್ ಮಾಡಲಾಗುತ್ತದೆ. ರಿಲಾಯನ್ಸ್ ಇಂಡಸ್ತ್ರೀಜ್ ನಲ್ಲಿ ಅಂಬಾನಿಯವರ ಭಾಗ 42 ಪ್ರತಿಶತವಿದೆ. ರಿಲಾಯನ್ಸ್ ಇದು ದೇಶದ ಮೊದಲ 11 ಲಕ್ಷ ಕೋಟಿಗಳ ಮಾರ್ಕೆಟ್ ಕ್ಯಾಪ್ ಕಂಪನಿ ಇದೆ.

ಫೋರ್ಬ್ಸ್ ದ ಈ ಪಟ್ಟಿಯಲ್ಲಿ ಅಮೆಜಾನ್ ಕಂಪನಿಯ ಪ್ರಮುಖರಾದ ಜೆಫ್ ಬೆಜೋಸ್ ಮೊದಲ ಕ್ರಮಾಂಕದಲ್ಲಿದ್ದಾರೆ. ಅವರ ಒಟ್ಟು ಆಸ್ತಿ 160.2 ಅಬ್ಜ ಡಾಲರ್ಸ್ ಇದೆ. ಕೊರೊನ ಲಾಕ್ ಡೌನ್ ನಂತರ ಇ-ಕಾಮರ್ಸ್ ಮಾರ್ಕೆಟ್ ಶರವೇಗದಲ್ಲಿ ನಡೆದಿದೆ. ಜಾಸ್ತಿ ಜನ ಆನ್ ಲೈನ್ ಶಾಪಿಂಗ್ ಗೆ ಪ್ರಾಧಾನ್ಯ ಕೊಡುತ್ತಿದ್ದಾರೆ.

ಎರಡನೆಯ ಕ್ರಮಾಂಕದಲ್ಲಿ ಮೈಕ್ರೊಸಾಫ್ಟ ಸಂಸ್ಥಾಪಕ ಬಿಲ್ ಗೇಟ್ಸ್ ಇದ್ದಾರೆ. ಇವರ ಸಂಪತ್ತು 109.3 ಅಬ್ಜ ಡಾಲರ್ಸ್ ಇದೆ. ಈ ಮೇಲಿನ ಇಬ್ಬರೂ ಶ್ರೀಮಂತರು ಅಮೆರಿಕೆಯವರಿದ್ದಾರೆ.

ಮೂರನೆಯ ಕ್ರಮಾಂಕದಲ್ಲಿ ಬರ್ನಾರ್ಡ್ ಅರ್ನಾಲ್ಟ್ ಮತ್ತು ಅವರ ಕುಟುಂಬವಿದೆ. ಇವರ ಒಟ್ಟು ಆಸ್ತಿಮೌಲ್ಯ 103.2 ಅಬ್ಜ ಡಾಲರ್ಸ್ ಇದೆ. ಇವರು ಫ್ರಾನ್ಸಿನವರು.

ನಾಲ್ಕನೆಯ ಕ್ರಮಾಂಕದಲ್ಲಿ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜೂಕರ್ ಬರ್ಗ್ ಇದ್ದಾರೆ. ಇವರ ಒಟ್ಟು ಆಸ್ತಿ 87.8 ಅಬ್ಜ ಡಾಲರ್ಸ್ ಇದ್ದು ಜಿಯೋ ಪ್ಲಾಟ್ ಫಾರ್ಮ್ ಮೇಲೆ ಫೇಸ್ಬುಕ್ 9.99 ℅ ಭಾಗವನ್ನು ಸುಮಾರು 44 ಸಾವಿರ ಕೋಟಿ ರೂಪಾಯಿಗಳಲ್ಲಿ ಖರೀದಿಸಿದ್ದಾರೆ. ಹೀಗಾಗಿ ಜಿಯೋದಲ್ಲಿ ಹೂಡಿಕೆದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ.

ಐದನೆಯ ಸ್ಥಾನದಲ್ಲಿ ಬರ್ಕಶಯರ್ ಹೆತ್ ವೇ ಪ್ರಮುಖ ವಾರೆನ್ ಬಫೆಟ್ ಇದ್ದಾರೆ. ಇವರ ಒಟ್ಟು ಸ್ವತ್ತು 71.2 ಅಬ್ಜ ಡಾಲರ್ ಇದೆ. ಬಫೆಟ್ ಇವರು ಜಗತ್ತಿನ ಅತೀ ದೊಡ್ಡ ಹೂಡಿಕೆದಾರರಾಗಿದ್ದಾರೆ. ಕೊರೊನದ ಪ್ರಭಾವ ಪ್ರತಿಯೊಂದು ಉದ್ಯೋಗದ ಮೇಲೆ ಆಗಿದೆ. ಇದೇ ಕಾರಣದಿಂದ ಇವರ ಹೂಡಿಕೆಯ ಮೌಲ್ಯ ಕಡಿಮೆಯಾಗಿದೆ.

ಆರನೆಯ ಸ್ಥಾನದಲ್ಲಿ ಮೈಕ್ರೋಸಾಫ್ಟ್ ದ ಮಾಜಿ ಮುಖ್ಯ ಕಾರ್ಯಕಾರಿ ಅಧಿಕಾರಿ ಸ್ಟೀವ್ ವಾಲ್ಮರ್ ಇದ್ದಾರೆ. ಇವರ ಒಟ್ಟು ಆಸ್ತಿ 69.4 ಅಬ್ಜ ಡಾಲರ್ಸ್ ಇದೆ.

ಏಳನೆಯ ಕ್ರಮಾಂಕದಲ್ಲಿ ಒರೆಕಲ್ ಸಂಸ್ಥಾಪಕ ಲ್ಯಾರಿ ಎಲಿಸನ್ ಇದ್ದು ಅವರ ಒಟ್ಟು ಗಳಿಕೆ 67.9 ಅಬ್ಜ ಡಾಲರ್ಸ್ ಇದೆ.

ಎಂಟನೆಯ ಸ್ಥಾನದಲ್ಲಿ ಸ್ಪೇನ್ ದ ಅಮಾನಸಿವೋ ಆರ್ಟಿಗಾ ಇದ್ದಾರೆ. ಇವರ ಒಟ್ಟು ಆಸ್ತಿಯು 65.8 ಅಬ್ಜ ಡಾಲರ್ ಇದೆ. ಇವರು ಬಟ್ಟೆಗಳ ಕಂಪನಿ ಝಾರಾ ಬ್ರ್ಯಾಂಡ್ ಮಾಲೀಕರಿದ್ದಾರೆ.

64.6 ಅಬ್ಜ ಡಾಲರ್ಸ್ ಸಂಪತ್ತನ್ನು ಹೊಂದಿರುವ ನಮ್ಮ ದೇಶದ ಮುಕೇಶ್ ಅಂಬಾನಿ ಇವರು ಒಂಭತ್ತನೆಯ ಸ್ಥಾನದಲ್ಲಿ ರಾರಾಜಿಸುತ್ತಿದ್ದಾರೆ. ಇವರು ರಿಲಾಯನ್ಸ್ ಇಂಡಸ್ತ್ರೀಜ್ ನ ಅಧ್ಯಕ್ಷರಾಗಿದ್ದಾರೆ. ಬರುವ ಮಾರ್ಚ್ 2021 ರ ವರೆಗೆ ಕಂಪನಿಗೆ ಸಾಲಮುಕ್ತರನ್ನಾಗಿಸುವ ಗುರಿ ಇಟ್ಟಿದ್ದರು. ಆದರೆ ಅದಕ್ಕಿಂತ ಮೊದಲೇ ಕಂಪನಿ ಸಾಲಮುಕ್ತವಾಗಿದೆ.

ಫೋರ್ಬ್ಸ್ ದ ಪಟ್ಟಿಯ 10 ನೇ ಸ್ಥಾನದಲ್ಲಿ ಗೂಗಲ್ ದ ಲ್ಯಾರಿ ಪೇಜ್ ಇದ್ದಾರೆ. ಇವರ ಒಟ್ಟು ಸಂಪತ್ತು 64.5 ಅಬ್ಜ ಡಾಲರ್ಸ್ ಇದೆ.

ಫೋರ್ಬ್ಸ್ ಪ್ರಕಟಿಸಿದ ಟಾಪ್ ಟೆನ್ ಶ್ರೀಮಂತರ ಪಟ್ಟಿ ಈ ಮೇಲಿನಂತಿದೆ. ಇನ್ನು ನೂರರ ಪಟ್ಟಿಯಲ್ಲಿ ಭಾರತದ ಇನ್ನೊಬ್ಬ ಶ್ರೀಮಂತರಿದ್ದಾರೆ.

ಫೋರ್ಬ್ಸ್ ಪ್ರಕಟಿಸಿದ ಶ್ರೀಮಂತರ ಪಟ್ಟಿಯಲ್ಲಿ ಭಾರತದ ಎರಡನೆಯ ಶ್ರೀಮಂತರಾದ ಡಿ ಮಾರ್ಟ್ ಸಂಸ್ಥಾಪಕ ರಾಧಾಕಿಶನ್ ದಮಾನಿಯವರ ಹೆಸರೂ ಇದೆ. ಗ್ಲೋಬಲ್ ಲಿಸ್ಟ್ ನಲ್ಲಿ ಇವರ ಕ್ರಮಾಂಕ 84 ನೇಯದಾಗಿದೆ. ಇವರ ಒಟ್ಟು ಆಸ್ತಿ 16.2 ಅಬ್ಜ ಡಾಲರ್ಸ್ ಇದೆ.