ಜಗತ್ತಿನ ಯಾವೊಬ್ಬ ಓಪನರ್’ಗೂ ಸಾಧಿಸಲಾಗದ ‘ಆ’ ದಾಖಲೆ ರೋಹಿತ್ ಶರ್ಮಾ ಹೆಸರಲ್ಲಿ!

ಅಹಮದಾಬಾದ್:- ಇಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ ಬರೀ ಎರಡೇ ದಿನಗಳಲ್ಲಿ ಭಾರತ ನುಂಗಿ ನೀರು ಕುಡಿಯಿತು. ಈ ಸೋಲು ಇಂಗ್ಲೆಂಡಿನ ಮಾಜಿ ಆಟಗಾರರಿಗೆ ಹಿಡಿಸಿಲ್ಲ. ಅವರು ಎಲ್ಲ ತಪ್ಪನ್ನು ಆಟದ ಮೈದಾನದ ಮೇಲೆ ಹಾಕಿದ್ದಾರೆ.

ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ಬರೀ 205 ರನ್ ಗಳಿಗೆ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂಡಿತು.

ಇಂಗ್ಲೆಂಡ್ 205 ರನ್ ಗಳಿಗೆ ಆಲ್ ಔಟ್ ಆದ ನಂತರ ಭಾರತ ತುಂಬಾ ಜಾಗೃತೆಯಿಂದ ಹೆಜ್ಜೆ ಇಟ್ಟಿತು. ಆದರೂ ಶುಭಮನ್ ಗಿಲ್ ಮೊದಲ ಓವರ್ ನಲ್ಲಿಯೇ ಪೆವಿಲಿಯನ್ ತೆರಳಿದ ನಂತರ ರೋಹಿತ್ ಶರ್ಮಾ ಮತ್ತು ಚೇತೇಶ್ವರ್ ಪೂಜಾರ್ ಇಬ್ಬರೂ ಟೀಮ್ ಇಂಡಿಯಾಗೆ ಬಲ ತುಂಬಿದರು. ಆಟದ ಎರಡನೆಯ ದಿನ 16 ರನ್ ಗಳನ್ನು ಕಲೆ ಹಾಕುವಷ್ಟರಲ್ಲಿಯೆ ಪೂಜಾರ್ ತಮ್ಮ ವಿಕೆಟ್ ಒಪ್ಪಿಸಿದರು. ಆಗ ಒಂದು ಬದಿಯಲ್ಲಿ ರೋಹಿತ್ ಅವರ ಹೋರಾಟ ನಡೆದೇ ಇತ್ತು. ಈ ಪಂದ್ಯದಲ್ಲಿ ರೋಹಿತ್ ಅವರು ಐಸಿಸಿಯ ವಿಶ್ವ ಟೆಸ್ಟ್ ನಲ್ಲಿ 1000 ರನ್ ಗಳನ್ನು ದಾಖಲಿಸಿದ ಮೊದಲ ಓಪನರ್ ಆದರು. WTC ಯಲ್ಲಿ ಅಜಿಂಕ್ಯ ರಹಾಣೆಯವರ ನಂತರ ಈ ದಾಖಲೆಯನ್ನು ಮಾಡಿದ ಎರಡನೆಯ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ವಿಶ್ವ ಟೆಸ್ಟ್ ಟೂರ್ನಿ ಸ್ಪರ್ಧೆಯಲ್ಲಿ ಓಪನರ್ ಆಗಿ ರೋಹಿತ್ ಶರ್ಮಾ ಅವರ ನಂತರ ಅತೀ ಹೆಚ್ಚು ರನ್ ಗಳನ್ನು ಗಳಿಸಿದ ಇನ್ನಿತರ ಆಟಗಾರರು. ರೋಹಿತ್ ಶರ್ಮಾ- 1000
ಡೇವಿಡ್ ವಾರ್ನರ್- 948
ಡಾಮ್ ಸಿಬ್ಲಿ- 841
ಮಯಾಂಕ್ ಅಗ್ರವಾಲ್- 810

ರೋಹಿತ್ ಅವರಿಗೆ ಈ ದಾಖಲೆಯನ್ನು ಮಾಡಲು 16 ಇನ್ನಿಂಗ್ಸ್ ಗಳು ಬೇಕಾದವು.