ಜಗತ್ತಿನ ಶ್ರೀಮಂತ ಹೂಡಿಕೆದಾರರಾದ ವಾರೆನ್ ಬಫೆಟ್ ತಮ್ಮಲ್ಲಿರುವ ಎಲ್ಲ ಚಿನ್ನವನ್ನು ಮಾರಾಟ ಮಾಡಿದ್ದಾರೆ? ಇದರ ಪರಿಣಾಮ ಏನಾಗಬಹುದು?
ಭಾರತೀಯರು ಚಿನ್ನವನ್ನು ಎಷ್ಟೊಂದು ಇಷ್ಟಪಡುತ್ತಾರೆ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಬೇರೆ ಮುಂದುವರೆದ ದೇಶಗಳಲ್ಲಿ ಅಥವಾ ಶ್ರೀಮಂತ ದೇಶಗಳಲ್ಲಿ ಚಿನ್ನಕ್ಕೆ ಅಷ್ಟೊಂದು ಬೆಲೆ ನೀಡುವುದಿಲ್ಲ, ಮತ್ತು ಅಲ್ಲಿಯ ಜನರಿಗೆ ಚಿನ್ನದ ಆಭರಣಗಳನ್ನು ತೊಟ್ಟುಕೊಳ್ಳುವ ಹವ್ಯಾಸ ಭಾರತೀಯರಿಗೆ ಹೋಲಿಸಿದರೆ ತುಂಬಾನೇ ಕಡಿಮೆ ಇದೆ ಎನ್ನಬಹುದು. ಆದರೆ ಜಗತ್ತಿನ ಅತ್ಯಂತ ಶ್ರೀಮಂತ ಹೂಡಿಕೆದಾರ ವಾರೆನ್ ಬಫೆಟ್ ಅವರು ತಮ್ಮಲ್ಲಿರುವ ಎಲ್ಲ ಚಿನ್ನವನ್ನು ಸಂಪೂರ್ಣವಾಗಿ ಮಾರಾಟ ಮಾಡಿದ್ದಾರೆ. ವಾರನ್ ಬಫೆಟ್ ಅವರ ಬಗ್ಗೆ ಹೇಳಬೇಕಾದರೆ, ಇವರು ಶೇರ್ ಮಾರ್ಕೆಟ್ ನಲ್ಲಿ ಜಗತ್ತಿನಲ್ಲಿಯೇ ಎಲ್ಲರಿಗಿಂತ ಯಶಸ್ವಿ ಹೂಡಿಕೆದಾರರಾಗಿದ್ದಾರೆ.
ಇಂಥ ಪರಿಸ್ಥಿತಿಯಲ್ಲಿ ವಾರೆನ್ ಬಫೆಟ್ ಅವರು ತಮ್ಮೆಲ್ಲ ಚಿನ್ನವನ್ನು ಮಾರಾಟ ಮಾಡಿದ್ದಾರೆ ಎಂದರೆ ಉಳಿದವರು ಚಿನ್ನದಲ್ಲಿ ಮತ್ತೆ ಹೂಡಿಕೆ ಮಾಡುವ ಬಗ್ಗೆ ವಿಚಾರ ಮಾಡಬೇಕು. ಇದಲ್ಲದೆ ವಾರೆನ್ ಬಫೆಟ್ ಅವರ ಕಂಪನಿ ಕೆನಡಿಯನ್ ಚಿನ್ನದ ಗಣಿ ಕಂಪನಿಯಾದ ಬೇರಿಕ್ ಗೋಲ್ಡ್ ಕಾರ್ಪೊರೇಷನ್ ನಲ್ಲಿ 31.7 ಕೋಟಿ ಡಾಲರ್ ಶೇರ್ ಗಳ ಮಾರಾಟ ಮಾಡಿದ್ದಾರೆ.
ಕಂಪನಿಯು ಮೂರು ತಿಂಗಳ ಹಿಂದೆ ಈ ಶೇರ್ ಗಳನ್ನು ಖರೀದಿಸಿತ್ತು. ವರ್ಕಶಾಯರ್ ಹ್ಯಾಥ್ ವೆ ಸಿಇಓ ಆದ ವಾರೆನ್ ಬಫೆಟ್ ಅವರು ತಮ್ಮ ಚಿನ್ನವನ್ನು ಮಾರಾಟ ಮಾಡವ ನಿರ್ಣಯವನ್ನು ಯಾಕೆ ತೆಗೆದುಕೊಂಡರು ಹಾಗೂ ಇದು ಯಾವ ಸಂದೇಶವನ್ನು ನೀಡುತ್ತದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ. ಓದಿ ಮತ್ತು ತಿಳಿದುಕೊಳ್ಳಿ.
ವಾರೆನ್ ಬಫೆಟ್ ಅವರು ಹೋಲ್ಡಿಂಗ್ ನಲ್ಲಿರುವ ತಮ್ಮ ಎಲ್ಲ ಚಿನ್ನವನ್ನು ಮಾರಾಟ ಮಾಡುವ ಘೋಷಣೆ ಮಾಡಿದ್ದಾರೆ. ಈ ಸಂಬಂಧದ ಮಾಹಿತಿಯನ್ನು ಅವರು ರೆಗ್ಯುಲೇಟರಿ ಫೈಲಿಂಗ್ ನಲ್ಲಿ ನೀಡಿದ್ದಾರೆ. ಹೀಗಾಗಿ ಅವರ ಕಂಪನಿಯು 2020 ರ ನಾಲ್ಕನೆಯ ತ್ರೈಮಾಸಿಕದಲ್ಲಿ ಚಿನ್ನದ ಮೇಲೆ ಮಾಡಿರುವ ಸಂಪೂರ್ಣ ಹೂಡಿಕೆಯನ್ನು ಮಾರಾಟ ಮಾಡಿದ್ದಾರೆ.

ನಷ್ಟದಲ್ಲಿ ಮಾರಾಟಮಾಡಿದರು ಚಿನ್ನ:- ವಾರೆನ್ ಬಫೆಟ್ ಅವರು ಕಳೆದ ವರ್ಷ ಚಿನ್ನವನ್ನು ಖರೀದಿಸಿದ್ದರು. ಅವರು ಚಿನ್ನವನ್ನು ಖರೀದಿಸುವಾಗ ಅದರ ಬೆಲೆ ಪ್ರತಿ ಔನ್ಸ್ 2065 ಡಾಲರ್ ದರದಲ್ಲಿ ಖರೀದಿಸಿದ್ದರು. ಈಗ ಮಾರಾಟ ಮಾಡುವ ಸಮಯದಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್ 1800 ಡಾಲರ್ ಇದೆ.
ಹೀಗಾಗಿ ಈ ಹೂಡಿಕೆಯಲ್ಲಿ 12.8 ಪ್ರತಿಶತ ನಷ್ಟ ಅನುಭವಿಸಿದ್ದಾರೆ. ಚಿನ್ನದ ಬಗ್ಗೆ ವಾರೆನ್ ಬಫೆಟ್ ಅವರ ವಿಚಾರ ತುಂಬಾ ಋಣಾತ್ಮಕವಾಗಿದೆ. 1998 ರಲ್ಲಿ ವಾರೆನ್ ಬಫೆಟ್ ಅವರ ಚಿನ್ನ ಇದು ನಿರುಪಯೋಗಿ ವಸ್ತುವಾಗಿದೆ ಎಂದು ವರ್ಣಿಸಿದ್ದರು. ಅವರ ಪ್ರಕಾರ ವ್ಯವಹಾರಿಕ ಉಪಯೋಗದಲ್ಲಿ ಚಿನ್ನವು ಉಪಯೋಗವಾಗುವುದಿಲ್ಲ ಎನ್ನುತ್ತಾರೆ.

ಸದ್ಯದ ಸ್ಥಿತಿಯಲ್ಲಿ ಚಿನ್ನದಲ್ಲಿ ಹೂಡಿಕೆ ಕಡಿಮೆಯಾಗುತ್ತಿದೆ:- ಬ್ಲಾಕ್ ರಾಕ್ ರೆಗ್ಯುಲೇಟರಿ ಫೈಲಿಂಗ್ ನಲ್ಲಿ ಸೂಚಿಸಿದ ಪ್ರಕಾರ, ಇನ್ನಿತರ ಅನೇಕ ಕಂಪನಿಗಳು ಸಹಿತ ಗೋಲ್ಡ್ ಪೋಸಿಶನ್ ನಲ್ಲಿ ಹೂಡಿಕೆಯನ್ನು ಕಡಿಮೆ ಮಾಡುತ್ತಿವೆ.