ಜಗತ್ತಿನ 10 ಶ್ರೀಮಂತ ರಾಷ್ಟ್ರಗಳು ಇವೇ ನೋಡಿ! 4ನೇ ಸ್ಥಾನ ಅಚ್ಚರಿಪಡಿಸಬಹುದು!
ಜಗತ್ತಿನಲ್ಲಿ ಒಟ್ಟು 195 ದೇಶಗಳು ಇವೆ. ಆದರೆ ಈ ಎಲ್ಲಾ ದೇಶಗಳು ಕೂಡಾ ಶ್ರೀಮಂತ ರಾಷ್ಟ್ರಗಳಾಗಿಲ್ಲ. ಅವು ಇನ್ನೂ ಅಭಿವೃದ್ಧಿಯ ಹಾದಿಯಲ್ಲಿ ಇವೆ. ಆದರೆ ಈಗಾಗಲೇ ಅಭಿವೃದ್ಧಿ ಹೊಂದಿರುವ ದೇಶಗಳನ್ನು, ಅಲ್ಲಿನ ಕಣ್ಣು ಕೋರೈಸುವ ಶ್ರೀಮಂತಿಕೆಯನ್ನು ನೋಡಿದಾಗ ಅರೆರೆ, ನಮ್ಮ ದೇಶ ಕೂಡಾ ಹೀಗೆ ಆಗುವುದು ಯಾವಾಗ? ಅನಿಸೋದು ಸಹಜ. ಮುಂದೆ ಆಗಬಹುದು ಅನ್ನೋ ನಂಬಿಕೆ ಇಟ್ಕೊಂಡು ಇವತ್ತು ನಾವು ಜಗತ್ತಿನ ಟಾಪ್ 10 ಶ್ರೀಮಂತ ರಾಷ್ಟ್ರಗಳ ಬಗ್ಗೆ ಒಂದು ನೋಟ ಹರಿಸೋಣ ಬನ್ನಿ.
ಹತ್ತರಿಂದ ಒಂದರ ಕಡೆಗೆ ಹೋಗುವ ಈ ಶ್ರೇಣಿಯಲ್ಲಿ ಯಾವ ಯಾವ ದೇಶಗಳಿವೆ ನೋಡೋಣವಾ.

10) ಹತ್ತನೇ ಸ್ಥಾನದಲ್ಲಿರೋ ದೇಶ ಹಾಂಗ್ ಕಾಂಗ್. ಇದು ವಾಸ್ತವವಾಗಿ ಚೀನಾದ ವಿಶೇಷ ಆಡಳಿತ ಪ್ರದೇಶವಾಗಿದೆ. ಇಲ್ಲಿನ ಆಡಳಿತ ಭಾಷೆ ಕೂಡಾ ಚೀನೀ ಮತ್ತು ಇಂಗ್ಲೀಷ್ ಭಾಷೆಗಳಾಗಿವೆ. ಇಲ್ಲಿನ ಪ್ರಮುಖ ಆದಾಯ ಪ್ರವಾಸಿಗರಿಂದ ಬರುತ್ತದೆ.

9) ಒಂಬತ್ತನೇ ಸ್ಥಾನದಲ್ಲಿರುವ ದೇಶ ಸ್ವಿಟ್ಜರ್ಲೆಂಡ್. ಯೂರೋಪಿನ ಸುಂದರವಾದ ದೇಶ ಇದು. ಜೀವನದಲ್ಲಿನ ಒಮ್ಮೆಯಾದರೂ ಇಲ್ಲಿಗೆ ಭೇಟಿ ನೀಡಬೇಕು ಅನ್ನೋ ಕನಸು ಅನೇಕರದ್ದು. ಸ್ವಿಟ್ಜರ್ಲೆಂಡ್ ದೇಶದಲ್ಲಿ ಸ್ವಿಸ್ ಕರೆನ್ಸಿ ಬಳಕೆಯಲ್ಲಿದ್ದು, ನಿರುದ್ಯೋಗ ಸಮಸ್ಯೆ ಹೆಚ್ಚಾಗಿಲ್ಲ. ಸ್ವಿಸ್ ನ ಪ್ರಮುಖ ಆದಾಯದ ಮೂಲ ಟೂರಿಸಂ ಆಗಿದ್ದು, ಹನಿಮೂನ್ ಜೋಡಿಗಳಿಗೆ ಇದೊಂದು ಕನಸಿನ ತಾಣವೂ ಆಗಿದೆ. ಇಲ್ಲಿನ ಜಿಡಿಪಿ 61,630 ಯುಎಸ್ ಡಾಲರ್ ಗಳಾಗಿದೆ.

8) ಎಂಟನೇ ಸ್ಥಾನದಲ್ಲಿದೆ ಯುಎಇ ದೇಶ. ದುಬೈ ಇಲ್ಲಿನ ಪ್ರಮುಖ ನಗರವಾಗಿದೆ. ಈ ದೇಶದ ಪ್ರಮುಖ ಆದಾಯದ ಮೂಲ ಟೂರಿಸಂ. ಐಶಾರಾಮೀ ಹೋಟೇಲ್ ಗಳ ಮೇಲೆ ವಿಧಿಸುವ ಟ್ಯಾಕ್ಸ್ ಮತ್ತು ಆಲ್ಕೋಹಾಲ್ ಮೇಲಿನ ಟ್ಯಾಕ್ಸ್ ಕೂಡಾ ಪ್ರಮುಖ ಆದಾಯದ ಮೂಲವಾಗಿದ್ದು, ದಿರಾಮ್ಸ್ ಇಲ್ಲಿನ ಕರೆನ್ಸಿ ಆಗಿದೆ.

7) ಏಳನೇ ಸ್ಥಾನದಲ್ಲಿರುವ ದೇಶ ಕುವೈತ್. ಮದ್ಯ ಪ್ರಾಚ್ಯದ ಈ ದೇಶದಲ್ಲಿನ ಜನತೆಯ ಐಶಾರಾಮೀ ಜೀವನ ಜಗತ್ಪ್ರಸಿದ್ದ. ಬಹುತೇಕ ಶ್ರೀಮಂತರೇ ಇರುವ ಇಲ್ಲಿ ಜನರು ಎಲ್ಲಾ ಸೌಲಭ್ಯಗಳು ಪಡೆದು ಐಶಾರಾಮೀ ಜೀವನ ನಡೆಸುತ್ತಿದ್ದಾರೆ. ಇಲ್ಲಿನ ಕರೆನ್ಸಿ ಕುವೈರ್ ದಿನಾರ್ ಆಗಿದ್ದು ಜಿಡಿಪಿ 69,670 $ ಆಗಿದೆ.

6) ಇನ್ನು ವಿಶ್ವದ ಆರನೇ ಶ್ರೀಮಂತ ರಾಷ್ಟ್ರ ಎಂಬ ಹೆಗ್ಗಳಿಕೆ ಪಡೆದಿದೆ ನಾರ್ವೆ. ಯೂರೋಪಿನ ಈ ದೇಶ ತನ್ನ ನಿಸರ್ಗ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಟೂರಿಸಂ ಪ್ರಮುಖ ಆದಾಯದ ಮೂಲ ವಾಗಿರುವ ಇಲ್ಲಿ ಗಾಳಿ ಮಾಲಿನ್ಯ ರಹಿತವಾಗಿರುವುದು ವಿಶೇಷ. ಇಲ್ಲಿ ಜನರ ಜೀವನ ಸರಳ ಹಾಗೂ ಆನಂದದಾಯಕವಾಗಿದೆ. ನಾರ್ವೆಜಿಯನ್ ಕ್ರೋಮ್ ಇಲ್ಲಿನ ಕರೆನ್ಸಿ ಆಗಿದ್ದು, ಇಲ್ಲಿನ ಜಿಡಿಪಿ 70,590$ ಆಗಿದೆ.

5) ಐದನೇ ಶ್ರೀಮಂತ ರಾಷ್ಟ್ರ ಐರ್ಲೆಂಡ್ ಇದು ಕೂಡಾ ಯೂರೋಪ್ ನಲ್ಲೇ ಇದ್ದು ತನ್ನ ಪ್ರಕೃತಿ ಸೌಂದರ್ಯಕ್ಕೆ ಇದು ಜಗತ್ಪ್ರಸಿದ್ಧ. ಅದಕ್ಕೆ ಟೂರಿಸಂ ಪ್ರಮುಖ ಆದಾಯದ ಮೂಲವಾಗಿರುವ ಈ ದೇಶದಲ್ಲಿ ಯೂರೋ ಕರೆನ್ಸಿ ಇದ್ದು, ಇಲ್ಲಿನ ಜಿಡಿಪಿ 72,630 ಗಳಾಗಿದೆ.

4) ನಾಲ್ಕನೇ ಸ್ಥಾನದಲ್ಲಿ ಶ್ರೀಮಂತ ರಾಷ್ಟ್ರ ಎನಿಸಿಕೊಂಡಿದೆ ಬ್ರೂನೈ. ಏಷ್ಯಾದಲ್ಲಿನ ಈ ರಾಷ್ಟ್ರ ಗಾತ್ರದಲ್ಲಿ ಚಿಕ್ಕದಾದರೂ ಇಲ್ಲಿನ ಸುಲ್ತಾನ್ ನ ಐಶಾರಾಮೀ ಜೀವನ ವಿಶ್ವವಿಖ್ಯಾತ. ಜಗತ್ತಿನ ಎಲ್ಲಾ ಲಕ್ಷುರಿ ಕಾರ್ ಗಳನ್ನು ಹೊಂದಿರುವ ಶ್ರೀಮಂತ ಇಲ್ಲಿನ ಸುಲ್ತಾನ್. ಈ ದೇಶದ ಜಿಡಿಪಿ 76,740$ ಗಳಾಗಿದ್ದು, ತೈಲ, ಅನಿಲ ಹಾಗೂ ಟೂರಿಸಂ ಆದಾಯದ ಪ್ರಮುಖ ಮೂಲಗಳಾಗಿದೆ.

3) ಇನ್ನು ಟಾಪ್ ಮೂರನೇ ಸ್ಥಾನದಲ್ಲಿ ಇರುವ ದೇಶ ಸಿಂಗಪೂರ್. ಗಗನ ಚುಂಬಿ ಕಟ್ಟಡಗಳು, ಸ್ವಚ್ಛತೆಗೆ ಇನ್ನೊಂದು ಹೆಸರು ಆಗಿರುವ ಇಲ್ಲಿ ಟೂರಿಸಂ ಮತ್ತು ಬ್ಯಾಂಕ್ ವ್ಯವಹಾರ ಆದಾಯದ ಪ್ರಮುಖ ಮೂಲವಾಗಿದೆ. ಇಲ್ಲಿನ ಜಿಡಿಪಿ 90,530$ ಗಳು.

2) ಟಾಪ್ ಎರಡನೇ ಸ್ಥಾನದಲ್ಲಿದೆ ಲಕ್ಸೆಂಬರ್ಗ್. ಯೂರೋಪಿನ ಈ ರಾಷ್ಟ್ರವಾಗಿದ್ದು, ಇಲ್ಲಿ ಯೂರೋ ಕರೆನ್ಸಿ ಚಲಾವಣೆಯಲ್ಲಿ ಇದೆ. ಇಲ್ಲಿ ನಿರುದ್ಯೋಗ ಕೇವಲ 5% ಇದ್ದು, ತೆರಿಗೆಗಳು ಕೂಡಾ ಕಡಿಮೆ ಇದ್ದು ಜನರು ಸಂತೋಷದ ಜೀವನ ನಡೆಸುತ್ತಿದ್ದಾರೆ. ಇಲ್ಲಿನ ಜಿಡಿಪಿ 10,100,90 $ ಗಳಾಗಿವೆ.

1) ಇನ್ನು ಟಾಪ್ ಒಂದು ಅಂದರೆ ಜಗತ್ತಿನ ಅತ್ಯಂತ ಶ್ರೀಮಂತ ರಾಷ್ಟ್ರ ಕತಾರ್. ಮಧ್ಯಪ್ರಾಚ್ಯದ ಈ ದೇಶ ಶ್ರೀಮಂತಿಕೆಗೆ ಮತ್ತೊಂದು ಹೆಸರು. ತೈಲ ವ್ಯಾಪಾರ ಮತ್ತು ಟೂರಿಸಂ ಪ್ರಮುಖ ಆದಾಯದ ಮೂಲವಾಗಿರುವ ಈ ದೇಶದಲ್ಲಿ ಕತ್ರಿರಿಯಾಲ್ ಕರೆನ್ಸಿ ಚಲಾವಣೆಯಲ್ಲಿದೆ. ಇಲ್ಲಿನ ಜಿಡಿಪಿ 1.24,390 $ ಗಳಾಗಿದೆ. ಜನ ಜೀವನ ಐಶಾರಾಮೀಯಾಗಿದ್ದು ನಿರುದ್ಯೋಗದ ಸಮಸ್ಯೆ ತೀರಾ ಕಡಿಮೆ ಇದೆ.
ಇವೇ ಜಗತ್ತಿನ ಟಾಪ್ ಹತ್ತು ಶ್ರೀಮಂತ ರಾಷ್ಟ್ರಗಳಾಗಿದ್ದು ಒಂದು ರೀತಿಯಲ್ಲಿ ಇವು ನಮಗೆ ಕನಸಿನ ನಗರಗಳಂತೆ ಕಾಣುತ್ತವೆ.