ಜನರ ವೀಕೆಂಡ್ (ರವಿವಾರದ) ಮೂಡ್ ಹೇಗಿರುತ್ತೆ ? 100 % ಕರೆಕ್ಟ್ ಆಗಿ ಹೇಳುತ್ತಿದೆ ಈ ನಾಯಿ…

ಪ್ರಾಣಿಗಳ ವಿಡಿಯೋ ನೋಡಲು ಸಖತ್ ಕ್ಯೂಟ್ ಆಗಿರುತ್ತವೆ. ಅದರಲ್ಲೂ ಪುಟ್ಟ ನಾಯಿ ಮರಿಗಳ ವೀಡಿಯೊಗಳಂತೂ ಸೋಷಿಯಲ್ ಮೀಡಿಯಾದಲ್ಲಿಯ ನೆಟ್ಟಿಗರಿಗೆ ತುಂಬಾ ಮನರಂಜನೆಯನ್ನು ನೀಡುತ್ತದೆ. ಸದ್ಯ ಇದೇ ರೀತಿಯ ಪುಟ್ಟ ನಾಯಿ ಮರಿಯ ಮೋಜಿನ ಪ್ರಸಂಗದ ದೃಶ್ಯ ಒಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಈ ವಿಡಿಯೋದಲ್ಲಿ ಪುಟ್ಟ ನಾಯಿಯ ಮರಿಯೊಂದು ತನ್ನ ಮಾಲೀಕಳ ಕಾಲಿನ ಹತ್ತಿರ ಹೊದ್ದುಕೊಂಡು ಬೆಚ್ಚಗೆ ಮಲಗಿದೆ. ಈ ಸಂದರ್ಭದಲ್ಲಿ ನಾಯಿಯ ಮಾಲೀಕ ನಾಯಿಮರಿಯು ಹೊದ್ದುಕೊಂಡ ಶಾಲನ್ನು ಮೆಲ್ಲಗೆ ಬದಿಗೆ ಸರಿಸುತ್ತಾನೆ. ಆಗ ನಾಯಿಮರಿ ಫಕ್ಕನೆ ಬದಿಗೆ ಸರಿಸಿದ ಶಾಲನ್ನು ತಾನೇ ಹೇಗೆ ಹೊದ್ದುಕೊಂಡು ಮತ್ತೆ ಮಲಗುತ್ತದೆ ನೋಡಿ. ನಿಜಕ್ಕೂ ಈ ವಿಡಿಯೋ ನೋಡಿದಾಗ ತುಂಬಾ ತಮಾಷೆ ಎನಿಸುತ್ತದೆ.

ಈ ವಿಡಿಯೋದಲ್ಲಿ…

https://twitter.com/buitengebieden/status/1591350258080092161?s=20&t=G5dH4SIAHlYGNTXtPZNIcQ

ಈ ಮುದ್ದಾದ ವಿಡಿಯೋವನ್ನು ಟ್ವಿಟರ್ ನಲ್ಲಿ buitengebieden ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ 1.6 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ. ವಿಶೇಷವೆಂದರೆ ಪ್ರಸ್ತುತ ವಿಡಿಯೋ 85,000ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ನಾಯಿಯ ಮರಿಯ ಹೊದ್ದುಕೊಂಡು ಮಲಗುತ್ತಿರುವ ಈ ವಿಡಿಯೋಗೆ ವೀಕೆಂಡ್ ಮೂಡ್ ಎಂದು ಕ್ಯಾಪ್ಶನ್ ನೀಡಿದ್ದಾರೆ.