ಜನವರಿಯಿಂದ ಇಲ್ಲಿಯ ವರೆಗೆ ಭಾರತೀಯ ಸೇನೆ ಹೊಡೆದು ಉರುಳಿಸಿದೆ 64 ಉಗ್ರರನ್ನು! ಬಿರಿಯಾನಿ ತಿನಿಸೋ ಕಾಲ ಹೋಯಿತು!

ಭಾರತದ ಸೈನಿಕರು ಜನೇವರಿ ದಿಂದ ಇಂದಿನ ವರೆಗೆ ನಡೆಸಿದ ಭಯೋತ್ಪಾದಕ ಆಪರೇಷನ್ ನಲ್ಲಿ ಸುಮಾರು 64 ಕ್ಕಿಂತ ಹೆಚ್ಚು ಭಯೋತ್ಪಾದಕರನ್ನು ಮಟ್ಟಿ ಹಾಕಲು ಯಶಸ್ಸು ದೊರೆತಿದೆ. ಅದರಲ್ಲಿ ಮುಖ್ಯವಾಗಿ ಭಯೋತ್ಪಾದಕ ಗುಂಪಿನ ಮುಖ್ಯಸ್ಥರ ಸಮಾವೇಶವಿದೆ. ಅವರಲ್ಲಿ , ಜೇಐಎಂ ನ ಮುಖ್ಯಸ್ಥ ಯಾಶೀರ್, ಅನ್ಸಾರ ಗಜವತ್ ಉಲ್ ಹಿಂದ್(ಎಜಿಎಚ್) ನ ಮುಖ್ಯಸ್ಥ ಬುರಹಾನ್ ಕೋಕಾ, ಮತ್ತು ಹಿಜಬುಲ್ ಮುಖ್ಯಸ್ಥ ರಿಯಾಜ್ ನಾಯಿಕ್ ಮುಜಾಹಿದೀನ್ ಈ ಮೂವರು ಸಮಾವೇಶ ವಾಗಿದ್ದರೆ. ಈ ವರ್ಷದ ಜನೇವರಿ ತಿಂಗಳಲ್ಲಿ ಸುರಕ್ಷಾ ರಕ್ಷಕ ಬಲದಿಂದ ನಡೆಸಿರುವ 27 ಭಯೋತ್ಪಾದಕ ವಿರೋಧ ಅಭಿಯಾನದಲ್ಲಿ ಸುಮಾರು 64 ಭಯೋತ್ಪಾದಕರನ್ನು ಹೊಡೆದು ಹಾಕಿದ್ದಾರೆ.

ಕಾಶ್ಮೀರದ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಐಜಿಪಿ) ವಿಜಯ್ ಕುಮಾರ್ ಗುರುವಾರ ಶ್ರೀನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
“ಈ ಅವಧಿಯಲ್ಲಿ 25 ಸಕ್ರಿಯ ಭಯೋತ್ಪಾದಕರು ಮತ್ತು 125 ಕ್ಕೂ ಹೆಚ್ಚು ಭಯೋತ್ಪಾದಕರ ಭೂ ಕಾರ್ಯಕರ್ತರನ್ನು ಬಂಧಿಸಲಾಗಿದೆ’ ಎಂದು ಅವರು ಹೇಳಿದರು.

ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ರಿಯಾಜ್ ನಾಯಕ್ ಅವರನ್ನು ಬುಧವಾರ ಹತ್ಯೆ ಮಾಡಿರುವುದು ಭದ್ರತಾ ಪಡೆಗಳಿಗೆ ದೊಡ್ಡ ಯಶಸ್ಸು ಎಂದು ಅವರು ಹೇಳಿದರು, ‘ಭದ್ರತಾ ಪಡೆಗಳು ಕಳೆದ ಆರು ತಿಂಗಳಿನಿಂದ ಅವರ ಚಲನವಲನಗಳ ಮೇಲೆ ನಿಗಾ ವಹಿಸಿ ಅವರ ಸ್ಥಳವನ್ನು ತಿಳಿದುಕೊಂಡು ಈ ಆಪರೇಶನ್ ಯಶಸ್ಸುಗೊಳಿಸಿದ್ದೇವೆ ಎಂದು ತಿಳಿಸಿದ್ದಾರೆ.

ನಾಯಿಕ್ ಅವರು ಪ್ರತಿ ತಿಂಗಳು ಅಥವಾ ಎರಡು ತಿಂಗಳಿಗೊಮ್ಮೆ ವೀಡಿಯೊಗಳನ್ನು ಬಿಡುಗಡೆ ಮಾಡುವ ಮೂಲಕ ಯುವಕರನ್ನು ಬಂಡಾಯಕ್ಕೆ ಸೇರಲು ಪ್ರೇರೇಪಿಸುತ್ತಿದ್ದೆ ‘ಎಂದು ಅವರು ಹೇಳಿದರು. ನಾಯಕು ಅವರ ಹತ್ಯೆಯ ನಂತರ, ಈ ಪ್ರದೇಶದಲ್ಲಿ ಹೊಡೆದಾಟ ಮತ್ತು ಕಲ್ಲು ತೂರಾಟದ ಘಟನೆಗಳು ಕಂಡು ಬಂದವು ಆದರೆ ಅವು ಸ್ಥಳೀಯ ಸ್ವರೂಪದ್ದಾಗಿವೆ ಎಂದು ಐಜಿಪಿ ಹೇಳಿದರು.

“ಆಗಸ್ಟ್ 5 ರ ನಂತರ ಮೊದಲ ಬಾರಿಗೆ, ಭಯೋತ್ಪಾದಕನ ಹತ್ಯೆಯ ನಂತರ ಎನ್ಕೌಂಟರ್ ಸೈಟ್ ಬಳಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಕಂಡು ಬಂದಿದ್ದು” ಎಂದು ಅವರು ಹೇಳಿದರು. ‘ಇದು ಸ್ಥಳೀಯ ಪ್ರಕರಣವಾಗಿದ್ದು, ಇದರಲ್ಲಿ ಕೆಲವರು ಗಾಯಗೊಂಡಿದ್ದಾರೆ; ಅಲ್ಲದೆ ಕೆಲವರಿಗೆ ಬುಲೆಟ್ ಸಹ ತಗಲಿದೆ.

ನಾಯ್ಕು ಹತ್ಯೆಯ ನಂತರ ಕಾಶ್ಮೀರದಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ಫೋನ್ಗಳ ನಿಷೇಧವು ಕಾನೂನು ಸುವ್ಯವಸ್ಥೆ ಕಾಪಾಡಲು ಅತ್ಯಗತ್ಯ ಕ್ರಮವಾಗಿತ್ತು ಮತ್ತು ಪರಿಸ್ಥಿತಿ ಸುಧಾರಿಸಿದ ನಂತರ ನಿರ್ಧಾರವನ್ನು ಪರಿಶೀಲಿಸಲಾಗುವುದು ಎಂದು ಅವರು ಹೇಳಿದರು.

ಸಂವಹನ ಕಾಪಾಡುವದು ಮುಖ್ಯವಾಗಿದೆ, ಇಲ್ಲದಿದ್ದರೆ ವದಂತಿಯನ್ನು ಹರಡಬಹುದು, ಜನರನ್ನು ಪ್ರಚೋದಿಸಲು ಹಳೆಯ ವೀಡಿಯೊಗಳನ್ನು ಪೋಸ್ಟ್ ಮಾಡಿರಬಹುದು, ಪರಿಸ್ಥಿತಿ ನಿಯಂತ್ರಣಕ್ಕೆ ಬಂದಾಗ ಸಂಚಾರ ಬಂದಿ ತೆಗೆದುಹಾಕಲಾಗುತ್ತದೆ. ‘ ಎಂದು ತಿಳಿಸಿದ್ದಾರೆ.