ಜಾಕಿ ಚಾನ್: 900 ಕೋಟಿಗಿಂತಲೂ ಅಧಿಕ ಸಂಪತ್ತಿನ ಒಡೆಯ, ಆದರೂ ಇಟ್ಟುಕೊಂಡಿಲ್ಲ ಡ್ರೈವರ್, ಬಾಡಿಗಾರ್ಡ್!
ಚೈನಿಜ್ ಚಿತ್ರಗಳ ದಂತಕಥೆ ಜಾಕಿ ಚಾನ್ ಬಗ್ಗೆ ನಿಮಗೆ ಗೊತ್ತಿರಬಹುದು. ಚೈನಿಜ್ ಮತ್ತು ಹಾಲಿವುಡ್ ಚಿತ್ರಗಳಲ್ಲಿಯ ದೊಡ್ಡ ಹೆಸರೇ ಜಾಕಿ ಚಾನ್. ಇವರು ತಮ್ಮ ಚಿತ್ರಗಳಲ್ಲಿ ಹೇಗೆ ಸ್ಟಂಟ್ ಮಾಡುತ್ತಾರೋ ಹಾಗೆಯೇ ಕಾಮಿಡಿಗಾಗಿಯೂ ಪ್ರಸಿದ್ಧರಾಗಿದ್ದಾರೆ. ಇದೇ ಕಾರಣದಿಂದ ಇವರು ಜಗತ್ತಿನಲ್ಲಿ ತುಂಬಾ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಜೊತೆಗೆ ಜಗತ್ತಿನ ತುಂಬಾ ಅನಂತ ಅಭಿಮಾನಿಗಳನ್ನು ಹೊಂದಿದ್ದಾರೆ.
ಇವರ ಪ್ರತಿಯೊಂದು ಚಿತ್ರದಲ್ಲಿ ಏನಾದರೂ ಹೊಸದೊಂದನ್ನು ನೋಡಲು ದೊರೆಯುತ್ತದೆ. ಅಭಿನಯ ಕ್ಷೇತ್ರದಲ್ಲಿ ಜಾಕಿ ಚಾನ್ 1970 ರಿಂದ ಸಕ್ರಿಯರಾಗಿದ್ದಾರೆ. ಇಲ್ಲಿಯವರೆಗೆ 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ನಿಜಜೀವನದ ಜಾಕಿ ಹೇಗಿದ್ದಾರೆ, ಅವರ ಸ್ವಭಾವ ಹೇಗಿದೆ ಎಂಬುದರ ಬಗ್ಗೆ ಬಹಳ ಕಡಿಮೆ ಜನರಿಗೆ ಗೊತ್ತಿದೆ. ಆದ್ದರಿಂದ ಅವರ ಜೀವನದ ನಿಜವಾದ ಮುಖಗಳನ್ನು ಈ ಲೇಖನದಲ್ಲಿ ನಾವು ನಿಮಗಾಗಿ ತಂದಿದ್ದೇವೆ.
ಇವರು ಸ್ವಭಾವದಿಂದ ತುಂಬಾ ಕರುಣಾಳು ವ್ಯಕ್ತಿಯಾಗಿದ್ದಾರೆ. ಸಾವಿರಾರು ಕೋಟಿ ರೂಪಾಯಿಗಳ ಮಾಲೀಕರಾಗಿದ್ದರೂ ಆ ಸಂಪತ್ತಿನ ಎಳ್ಳಷ್ಟೂ ಗರ್ವ ಇವರು ಹೊಂದಿಲ್ಲ. ಇವರ ಇನ್ನೊಂದು ವಿಶೇಷವೇನೆಂದರೆ ತಮ್ಮ ಸಂಪತ್ತಿನಲ್ಲಿಯ ಒಂದೇ ಒಂದು ಪೈಸೆಯೂ ತನ್ನ ಮಗನಿಗೆ ನೀಡುವವರಿಲ್ಲ.

ಒಂದು ಸಂದರ್ಶನದಲ್ಲಿ ಜಾಕಿ ಚಾನ್ ಅವರು ಹೀಗೆ ಹೇಳುತ್ತಾರೆ. ನಾನು ನನ್ನ ಎಲ್ಲ ಸಂಪತ್ತನ್ನು ದಾನ ಮಾಡುವವನಿದ್ದೇನೆ. ನನ್ನ ಮಗ ಸ್ವತಃ ಹಣವನ್ನು ಗಳಿಸಿ ತೋರಿಸಬೇಕು. ಅಂದಾಗಲೇ ಆತನಿಗೆ ಹಣದ ಮಹತ್ವ ತಿಳಿಯುತ್ತದೆ. ಇಂಥ ಕಾರಣಗಳಿಂದಲೇ ಜಾಕಿ ಚಾನ್ ಅವರು ಜಗತ್ತಿನ ದೊಡ್ಡ ದೊಡ್ಡ ಸಮಾಜಸೇವಕರಲ್ಲಿ ಒಬ್ಬರಾಗಿದ್ದಾರೆ.
ಅವರು ತಮ್ಮ ಎಲ್ಲ ಸಂಪತ್ತನ್ನು ಒಳ್ಳೆಯ ಕೆಲಸಕ್ಕಾಗಿ ಉಪಯೋಗಿಸುತ್ತಾರಂತೆ. ಜಗತ್ತಿನ ಬಡ ಮಕ್ಕಳಿಗಾಗಿ ಮತ್ತು ಯುವಕರಿಗಾಗಿ ಶಾಲೆ ಮತ್ತು ಕಾಲೇಜ್ ಈಗಾಗಲೇ ತೆಗೆದಿದ್ದಾರೆ. ಇವರು ಯುನಿಸೆಫ್ ಸಂಸ್ಥೆಯ ಜೊತೆಗೂ ಕೈಜೋಡಿಸಿದ್ದಾರೆ.
ಸಮಯ ಸಮಯಕ್ಕೆ ಚಾರಿಟಿ ಇವೆಂಟ್ ಗಳನ್ನು ಆಯೋಜನೆ ಮಾಡುತ್ತಾರೆ. ಅದರ ಮುಖಾಂತರವು ನಿರ್ಗತಿಕರಿಗೆ ಹಣ ಜಮೆ ಮಾಡುತ್ತಾರೆ. ಇವರಿಗೆ ಐತಿಹಾಸಿಕ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸವಿದೆ. ಕೆಲವು ರಿಪೋರ್ಟ್ ಗಳ ಪ್ರಕಾರ ಜಾಕಿ ಚಾನ್ ಹತ್ತಿರ ಅನೇಕ ಅಪರೂಪದ ವಸ್ತುಗಳು ಇವೆಯಂತೆ. 2000 ಸಾವಿರ ವರ್ಷಗಳ ಹಿಂದಿನ ಬಾಗಿಲು ಒಂದು ಇವರ ಹತ್ತಿರ ಇದೆ.
ಇವರು ಜಗತ್ತಿನ ಮೂಲೆ ಮೂಲೆಗಳಲ್ಲಿ ಐಷಾರಾಮಿ ಮನೆಗಳನ್ನು ಹೊಂದಿದ್ದಾರೆ. ಇದರಲ್ಲಿ ಹಾಂಗ್ ಕಾಂಗ್, ಸಿಂಗಾಪುರ್, ಆಸ್ಟ್ರೇಲಿಯಾ ದೇಶಗಳ ಸಮಾವೇಶವಿದೆ. ಹಾಗೆ ನೋಡಲಾಗಿ ಶ್ರೀಮಂತ ವ್ಯಕ್ತಿಗಳಿಗೆ ಸಹಜವಾಗಿಯೇ ತುಂಬಾ ಜನ ಬಾಡಿಗಾರ್ಡ್ ಮತ್ತು ಡ್ರೈವರ್ ಗಳು ಇರುತ್ತಾರೆ. ಆದರೆ ಜಾಕಿ ಚಾನ್ ಮಾತ್ರ ಯಾವತ್ತೂ ಬಾಡಿಗಾರ್ಡ್ ಹಾಗೂ ಡ್ರೈವರ್ ಗಳನ್ನು ಇಟ್ಟುಕೊಂಡಿಲ್ಲ.
ಮುಖ್ಯವಾಗಿ ಇದೆಲ್ಲ ಅವರಿಗೆ ಇಷ್ಟವಾಗುವದಿಲ್ಲವಂತೆ. ಅವರು ಎಲ್ಲಿಯೇ ಹೋಗಲಿ ಸ್ವತಃ ವಾಹನವನ್ನು ನಡೆಸುತ್ತಾರೆ. ತಮ್ಮ ವಾಹನವನ್ನು ತಾವೇ ಪಾರ್ಕ್ ಮಾಡುತ್ತಾರೆ. ಚಿತ್ರಗಳಲ್ಲಿಯೂ ತಮ್ಮ ಸ್ಟಂಟ್ ಗಳನ್ನು ತಾವೇ ಮಾಡುತ್ತಾರೆ. ಇಂಥ ವಿಶೇಷ ಗುಣಗಳನ್ನು ಹೊಂದಿದ ನಟ ಸಂಪೂರ್ಣ ಜಗತ್ತಿನಲ್ಲಿ ಎಲ್ಲಿ ಹುಡುಕಿದರೂ ದೊರೆಯುವುದಿಲ್ಲ. ತಮ್ಮ ಸ್ಟಂಟ್ ಗಳನ್ನು ತಾವೇ ಮಾಡುವಾಗ ಅನೇಕ ಸಲ ಗಾಯ ಹೊಂದಿದ್ದಾರೆ. ಇವರಿಗೆ ಅನೇಕ ಚಿತ್ರಗಳಿಗಾಗಿ ಆಸ್ಕರ್ ಪ್ರಶಸ್ತಿ ದೊರಕಿದೆ. ಅಷ್ಟೇ ಏಕೆ ಇವರು ಬಾಲಿವುಡ್ ನಲ್ಲಿಯೂ ಕೆಲಸ ಮಾಡಿದ್ದಾರೆ.