ಜಾಣ ಜಿಂಕೆಯ ವೈರಲ್ ವಿಡಿಯೋ! ಚಿರತೆ ಮತ್ತು ಹೈನಾ ಎರಡಕ್ಕೂ ಪೆದ್ದನನ್ನಾಗಿ ಮಾಡಿದ ಬಗೆಯನ್ನು ನೋಡಿ ನೆಟ್ಟಿಗರೆಂದರು ಶಬ್ಬಾಷ್!

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸ್ಮಾರ್ಟ್ ಜಿಂಕೆಯ ವಿಡಿಯೋ ಒಂದು ತುಂಬಾ ಸಂಚಲನ ಮೂಡಿಸಿದೆ. ನೆಟ್ಟಿಗರು ಈ ಜಿಂಕೆಯ ಜಾಣತನವನ್ನು ತುಂಬಾ ಮೆಚ್ಚುತ್ತಿದ್ದಾರೆ.

ಕಾಡಿನ ಜೀವನ ನಮಗಿಂತಲೂ ತುಂಬಾ ಬೇರೆಯಾಗಿದೆ. ಇಲ್ಲಿ ಸಸ್ಯಾಹಾರಿ ಪ್ರಾಣಿಗಳಿಗೆ ಮಾಂಸಾಹಾರಿ ಪ್ರಾಣಿಗಳಿಂದ ಕ್ಷಣ ಕ್ಷಣಕ್ಕೆ ಆತಂಕ, ಹೆ#ದರಿಕೆ ಇರುತ್ತದೆ. ಅವು ತಮ್ಮ ಪ್ರತಿಯೊಂದು ಹೆಜ್ಜೆ ತುಂಬಾ ಜಾಗೃತೆಯಿಂದ ಇಡುತ್ತವೆ. ಇಲ್ಲಿ ಬದುಕಲು ಸತತ ಹೋರಾಟ ನಡೆದೇ ಇರುತ್ತದೆ. ಪ್ರಾಣಿಗಳು ತಮ್ಮ ಜೀವ ಉಳಿಸಿಕೊಳ್ಳಲು ಅನೇಕ ನಾಟಕಗಳನ್ನು ಮಾಡಬೇಕಾಗುತ್ತದೆ. ಇಲ್ಲಿ ನೋಡುವ ವಿಡಿಯೋ ಅದರದ್ದೇ ಒಂದು ಸುಂದರ ಉದಾಹರಣೆ ಇದೆ.

ಒಂದು ಜಿಂಕೆ ಶಾರ್ಪ್ ಶೂ#ಟರ್ ಚಿರತೆ ಮತ್ತು ಹೈನಾಗೆ ಸಂಪೂರ್ಣ ಪೆದ್ದನನ್ನಾಗಿ ಮಾಡಿದೆ. ಮುಗ್ಧ ಜಿಂಕೆ ಹೀಗೂ ಮಾಡುತ್ತದೆಯೇ ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡುತ್ತಿದ್ದರೆ ಈ ವಿಡಿಯೋ ನೋಡಿ ನಿಮ್ಮ ಡೌಟ್ ಕ್ಲಿಯರ್ ಆಗುವದು.

ಈ ವಿಡಿಯೋದಲ್ಲಿ ಜಿಂಕೆ ನೆಲದ ಮೇಲೆ ಬಿದ್ದಿದೆ. ಅದನ್ನು ನೋಡಿದಾಗ ಸತ್ತಿದೆ ಎಂದೇ ಎನಿಸುತ್ತದೆ. ಆಗ ಅಲ್ಲಿಗೆ ಚಿರತೆ ಬರುತ್ತದೆ. ಅದು ಜಿಂಕೆಗೆ ಮೂಸಿ ನೋಡುತ್ತದೆ. ಜಿಂಕೆ ಮಾತ್ರ ತನ್ನ ಜಾಗದಿಂದ ಸ್ವಲ್ಪವೂ ಅಲುಗಾಡುವದಿಲ್ಲ. ಅದರ ನಂತರ ಅಲ್ಲಿಗೆ ಒಂದು ಹೈನಾ ಬರುತ್ತದೆ. ಅದು ಸಹಿತ ಜಿಂಕೆಯ ಹತ್ತಿರ ಹೋಗಿ ಅದನ್ನು ಮುಟ್ಟಿ ಅಲುಗಾಡಿಸುತ್ತದೆ. ಆದರೂ ಜಿಂಕೆ ಸ್ತಬ್ಧ, ತನ್ನ ಉಸಿರನ್ನು ಬಿಗಿಹಿಡಿದು ಹಾಗೆ ಮಲಗಿಕೊಳ್ಳುತ್ತದೆ. ಹೈನಾಗೆ ಆಗ ಮನದಟ್ಟಾಗುತ್ತದೆ ಜಿಂಕೆ ಸತ್ತು ಬಿದ್ದಿದೆ ಮತ್ತು ಇದನ್ನು ಆರಾಮಾಗಿ ಇನ್ನು ತಿನ್ನಬಹುದು ಎಂದು. ಆದರೆ ಹೈನಾ ಅಲ್ಲಿ ಒಂದು ತಪ್ಪು ಮಾಡುತ್ತದೆ ಅದೇನೆಂದರೆ ಜಿಂಕೆಯನ್ನು ಸಂಪೂರ್ಣವಾಗಿ ಪಡೆಯಲು ಚಿರತೆಗೆ ಅಲ್ಲಿಂದ ಓಡಿಸಲು ಪ್ರಯತ್ನಿಸುತ್ತದೆ. ಬರೋಬ್ಬರಿ ಅದೇ ಸಮಯಕ್ಕೆ ಸರಿಯಾಗಿ ಜಿಂಕೆ ನಟನೆಯಿಂದ ಎದ್ದು ಕ್ಷಣಾರ್ಧದಲ್ಲಿ ಅಲ್ಲಿಂದ ಪರಾರಿಯಾಗುತ್ತದೆ.ಇದನ್ನು ನೋಡಿ ಹೈನಾಕ್ಕೂ ಸಹಿತ ಆ#ಶ್ಚರ್ಯವಾಗಿದೆ. ಇದಕ್ಕೆ ಅನ್ನೊದು ನೋಡಿ ಅತೀ ಆಸೆ ಗತಿ ಕೇಡು ಅಂತ!

ನೀವು ಸಹ ವಿಡಿಯೋ ನೋಡಿ.

ಈ ವಿಡಿಯೋವನ್ನು contentmint ಎಂಬ ಹೆಸರಿನ ಯುಟ್ಯೂಬರ್ ತಮ್ಮ ಚಾನಲ್ ನಲ್ಲಿ ಶೇರ್ ಮಾಡಿದ್ದಾರೆ. ಇದುವರೆಗೆ ಈ ವಿಡಿಯೋವನ್ನು ಒಂದು ಮಿಲಿಯನ್ ಕ್ಕಿಂತ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಅಷ್ಟೇ ಅಲ್ಲ ಈ ಜಿಂಕೆಯ ಬುದ್ಧಿವಂತಿಕೆಗೆ ನೆಟ್ಟಿಗರು ಹಾಡಿ ಹೊಗಳಿದ್ದಾರೆ.