ಜಾಬ್ ಸಿಕ್ಕ ನಂತರ ಆಫೀಸ್ ಹೊರಗಡೆ ಬಂದು ಭರ್ಜರಿ ಡಾನ್ಸ್ ಮಾಡಿದ ಹುಡುಗಿ; ಸಂಪೂರ್ಣ ಘಟನೆ CCTV ನಲ್ಲಿ ಸೆರೆ!

ಸೋಶಿಯಲ್ ಮೀಡಿಯಾಗಳಲ್ಲಿ ಯಾವಾಗ ಯಾವ ವೀಡಿಯೋ ವೈರಲ್ ಆಗುತ್ತೆ ಅನ್ನೋದನ್ನು ಯಾರೊಬ್ಬರೂ ಕೂಡಾ ಊಹೆ ಮಾಡೋಕೆ ಆಗಲ್ಲ. ದಿನ ಪ್ರತಿದಿನವೂ ಕೂಡಾ ಒಂದಲ್ಲಾ ಒಂದು ವೀಡಿಯೋ ಸಂಚಲನವನ್ನು ಸೃಷ್ಟಿಸುತ್ತಲೇ ಇರುತ್ತದೆ. ವಿಶೇಷ ಅಥವಾ ವಿಚಿತ್ರ ಅಥವಾ ಕೆಲವೊಂದು ಸಲ ಅದೃಷ್ಟ ಅನ್ನೋ ತರ ಹೀಗೆ ವೀಡಿಯೋ ವೈರಲ್ ಆದ ನಂತರ ಕೆಲವರು ಸೆಲೆಬ್ರಿಟಿಗಳಾದರೆ, ಇನ್ನೂ ಕೆಲವರ ಲೈಫೇ ಬದಲಾಗಿ ಹೋದ ಘಟನೆಗಳ ನಿದರ್ಶನಗಳು ಕೂಡಾ ಸಾಕಷ್ಟು ಇವೆ ಎಂದು ಹೇಳಬಹುದು. ‌ನಿನ್ನೆಯವರೆಗೆ ಯಾರೂ ಎಂದೂ ಕೂಡಾ ತಿಳಿಯದವರು ಇಂದು ಇಡೀ ದೇಶದ ಗಮನವನ್ನು ಕೂಡಾ ಸೆಳೆದು ಬಿಟ್ಟಿರುತ್ತಾರೆ ಎಂದೇ ನಾವು ಹೇಳಬಹುದು. ಸೋಶಿಯಲ್ ಮೀಡಿಯಾಗಳಿಂದಾಗಿ ಅನೇಕರು ಸ್ಟಾರ್ ಗಳಾಗಿದ್ದಾರೆ ಕೂಡಾ.

ಈಗ ಇಂತಹುದೇ ಒಂದು ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಒಂದು ವೀಡಿಯೋ ಸಖತ್ ವೈರಲ್ ಆಗುತ್ತಿದೆ. ಈ ವೀಡಿಯೋ ನೋಡಿದಾಗ ಒಮ್ಮೆ ನಮಗೂ ಕೂಡಾ ಅರೆರೆ ಎಷ್ಟೋ ಜನ ತಮ್ಮ ಮನಸ್ಸಿನ ಸಂತೋಷವನ್ನು ವ್ಯಕ್ತಪಡಿಸಲು ಕೂಡಾ ಆಲೋಚನೆ ಮಾಡುತ್ತಾರೆ. ಆದರೆ ಕೆಲವರು ಎಷ್ಟು ಮುಕ್ತವಾಗಿ ತಮ್ಮ ಭಾವನೆಗಳನ್ನು ಯಾವುದೇ ಮುಜುಗರವಿಲ್ಲದೇ ಬಿಂದಾಸ್ ಆಗಿ ವ್ಯಕ್ತಪಡಿಸುವವರೂ ಕೂಡಾ ಇದ್ದಾರೆ ಎಂದು ಅರ್ಥವಾಗುತ್ತದೆ. ಸಂತೋಷವಾದಾಗ ಕುಣಿದು ಕುಪ್ಪಳಿಸುವುದು, ಆನಂದ ಪಡುವುದು ಕೇವಲ ಸಿನಿಮಾ ತೆರೆಯ ಮೇಲೆ ಮಾತ್ರವಲ್ಲ ನಿಜ ಜೀವನದಲ್ಲಿ ಕೂಡಾ ನಡೆಯುತ್ತದೆ ಎಂದು ಸ್ಪಷ್ಟವಾಗುವಂತೆ ಇದೆ ಈ ವೀಡಿಯೋ ನೋಡಿದಾಗ.

ವೈರಲ್ ಆಗಿರುವ ವೀಡಿಯೋದಲ್ಲಿ ಯುವತಿಯೊಬ್ಬಳು ತನಗೆ ಜಾಬ್ ಸಿಕ್ಕಿದ ಖುಷಿಯನ್ನು ತಡೆಯಲಾರದೆ, ತನಗೆ ಕೆಲಸ ಸಿಕ್ಕ ಆಫೀಸಿನಿಂದ ಹೊರ ಬಂದ ಮೇಲೆ ಜಬರ್ದಸ್ತ್ ಡಾನ್ಸ್ ಮಾಡಿದ್ದಾಳೆ.‌ ರಸ್ತೆಯಲ್ಲಿ ಡಾನ್ಸ್ ಮಾಡಿದ ಯುವತಿಯು ತನ್ನ ಖುಷಿ ಯನ್ನು ವ್ಯಕ್ತಪಡಿಸಿದ ರೀತಿ
ಆಕೆಯ ಪ್ರತಿಕ್ರಿಯೆಯನ್ನು ನೋಡಿದ ಜನರಿಗೆ ಕೂಡಾ ಅದು ಬಹಳ ಮೆಚ್ಚುಗೆಯಾಗಿದೆ. ರಸ್ತೆಯಲ್ಲಿ ಕೆಲವರು ಆ ಯುವತಿಯ ಡಾನ್ಸ್ ಅನ್ನು ವೀಡಿಯೋ ಮಾಡಿದ್ದಾರೆ. ಅನಂತರ ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿದ್ದಾರೆ. ಶೇರ್ ಆಗಿದ್ದೇ ತಡ ಯುವತಿಯ ಆ ವೀಡಿಯೋ ಒಬ್ಬರಿಂದ ಮತ್ತೊಬ್ಬರಿಗೆ ಶೇರ್ ಆಗುತ್ತಾ ಸಾಗಿ ವೈರಲ್ ಆಗಿದೆ.

ಯುವತಿಯ ಡಾನ್ಸ್ ನ ಈ ವೀಡಿಯೋ ವನ್ನು ಡಕಾರ ಸ್ಪೆನ್ಸ್ ಎನ್ನುವ ಇನ್ಸ್ಟಾಗ್ರಾಂ ಖಾತೆಯ ಬಳಕೆದಾರರು ಶೇರ್ ಮಾಡಿಕೊಂಡಿದ್ದಾರೆ. ವೀಡಿಯೋ ಜೊತೆಗೆ ಅವರು ಕ್ಯಾಪ್ಷನ್ ಹಾಕಿ ನಾನು ಈ ಯುವತಿಗೆ ಜಾಬ್ ಫೈನಲ್ ಮಾಡಿದೆ. ಹೊರಗೆ ಹೋದ ಮೇಲೆ ಆ ಯುವತಿಯ ರಿಯಾಕ್ಷನ್ ನೋಡಿ ಎಂದು ಬರೆದು ಕೊಂಡಿದ್ದಾರೆ. ವೀಡಿಯೋದಲ್ಲಿ ಯುವತಿಯು ಪಾರ್ಕಿಂಗ್ ಜಾಗದಲ್ಲಿ ಹೋಗಿ ಕುಣಿದು ತನ್ನ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಯುವತಿ ಆಫೀಸಿನಿಂದ ಹೊರಗೆ ಪಾರ್ಕಿಂಗ್ ಬಳಿ ಬರುತ್ತಾರೆ. ಅಲ್ಲಿ ಅತ್ತ ಇತ್ತ ನೋಡಿ ಯಾರೂ ಇಲ್ಲದಿರುವುದನ್ನು ಗಮನಿಸಿದ್ದಾಳೆ.

ವಿಡಿಯೋ ನೋಡಿ….

ಅನಂತರ ಯಾರೂ ಇಲ್ಲವೆಂದು ಖಚಿತಪಡಿಸಿಕೊಂಡು ತಾನು ಅಷ್ಟು ಹೊತ್ತು ಮನಸ್ಸಿನಲ್ಲೇ ಬಚ್ಚಿಟ್ಟುಕೊಂಡಿದ್ದ ಖುಷಿಯನ್ನು ಭರ್ಜರಿಯಾಗಿ ಡಾನ್ಸ್ ಮಾಡಿ ಹೊರಹಾಕಿರುವುದು ಕಾಣುತ್ತದೆ. ಕೆಲವು ಸೆಕೆಂಡ್ ಗಳ ಕಾಲ ಡಾನ್ಸ್ ಮಾಡಿದ ನಂತರ ಯುವತಿ ಸೈಲೆಂಟಾಗಿ ಅಲ್ಲಿಂದ ಹೊರಟು ಹೋಗುತ್ತಾಳೆ. ಆದರೆ ಈಗ ಆಕೆ ಯಾರಿಗೂ ತಿಳಿಯದೇ ಮಾಡಿದ ಡಾನ್ಸ್ ಈಗ ದೇಶದಾದ್ಯಂತ ವೈರಲ್ ಆಗುತ್ತಿದೆ.