ಜಾಹ್ನವಿ ಕಪೂರ್ ಗೆ ‘ಕಿಸ್’ ಕೇಳಿದ ಅಭಿಮಾನಿ; ನಟಿ ಕೊಟ್ಟ ಉತ್ತರಕ್ಕೆ ನೆಟ್ಟಿಗರು ಫುಲ್ ಫಿದಾ!

ಪ್ರಸಿದ್ಧ ನಟಿ ಶ್ರೀದೇವಿ ಅವರ ಮಗಳಾದ ಜಾಹ್ನವಿ ಕಪೂರ್ ಅತೀ ಕಡಿಮೆ ಸಮಯದಲ್ಲಿಯೇ ತಮ್ಮ ಅಭಿನಯದಿಂದ ಬಾಲಿವುಡ್ ನಲ್ಲಿ ತಮ್ಮನ್ನು ಗುರುತಿಸಿಕೊಂಡರು. ಸದ್ಯಕ್ಕೆ ಅವರ ಫ್ಯಾನ್ ವರ್ಗ ಸಹ ತುಂಬಾ ದೊಡ್ಡದಿದೆ. ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಆಕ್ಟಿವ್ ಇರುವುದರ ಜೊತೆಗೆ ಇವರು ತಮ್ಮ ಅಭಿಮಾನಿಗಳ ಜೊತೆಗೆ ಸಂಪರ್ಕವಿಟ್ಟುಕೊಂಡಿದ್ದಾರೆ. ಇವರು ಯಾವಾಗಲೂ ವಿವಿಧ ರೀತಿಯ ವಿಡಿಯೋ ಮತ್ತು ಫೋಟೋಗಳನ್ನು ತಮ್ಮ ಅಕೌಂಟ್ ನಿಂದ ಶೇರ್ ಮಾಡುತ್ತಿರುತ್ತಾರೆ. ಎಷ್ಟೋ ಸಲ ಅಭಿಮಾನಿಗಳಿಗಾಗಿ ಮೀಡಿಯಾದಲ್ಲಿ ಲೈವ್ ಸಹ ಬಂದಿದ್ದಾರೆ.

ಈ ಬಾರಿ ಜಾಹ್ನವಿ ಕಪೂರ್ ಅವರು ಇನ್ಸ್ಟಾಗ್ರಾಮ್ ನಲ್ಲಿ ‘ಆಸ್ಕ್ ಮೀ ಎನಿಥಿಂಗ್’ ಸೇಶನ್ ನಲ್ಲಿ ಅಭಿಮಾನಿಗಳು ಜಾಹ್ನವಿ ಅವರಿಗೆ ಅನೇಕ ಪ್ರಶ್ನೆಗಳನ್ನು ಕೇಳಿದರು. ಅನೇಕ ಅಭಿಮಾನಿಗಳು ಅವರನ್ನು ಅಷ್ಟೇ ಹೊಗಳಿದರೂ ಸಹ. ಇದೇ ಸಂದರ್ಭದಲ್ಲಿ ಒಬ್ಬ ಅಭಿಮಾನಿಯ ಪ್ರಶ್ನೆಗೆ ಜಾಹ್ನವಿ ಕಪೂರ್ ಅವರು ನೀಡಿದ ಉತ್ತರ ತುಂಬಾ ಚರ್ಚೆಗೆ ಈಡಾಗಿದೆ. ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬನು ಜಾಹ್ನವಿ ಕಪೂರ್ ಅವರಿಗೆ ಕಿಸ್ ಕೊಡುವ ಇಚ್ಛೆ ವ್ಯಕ್ತ ಮಾಡಿದ್ದಾನೆ. ಈ ಪ್ರಶ್ನೆಗೆ ಉತ್ತರವಾಗಿ ಜಾಹ್ನವಿ ಕಪೂರ್ ಅವರು ಮಾಸ್ಕ್ ಧರಿಸಿದ ತಮ್ಮದೇ ಆದ ಒಂದು ಫೋಟೋ ಶೇರ್ ಮಾಡಿ ಅದಕ್ಕೆ ನೋ ಎಂದು ಕ್ಯಾಪ್ಷನ್ ನೀಡಿದ್ದಾರೆ.

ಜಾಹ್ನವಿ ಕಪೂರ್ ಅವರು ನೀಡಿದ ಭರ್ಜರಿ ಉತ್ತರವು ಎಲ್ಲರಿಂದಲೂ ಹೋಗಳಿಕೆಗೆ ಪಾತ್ರವಾಗಿದೆ. ವಿಶೇಷವಾಗಿ ಜಾಹ್ನವಿ ಕಪೂರ್ ಅವರ ಅಭಿಮಾನಿಗಳಿಗಂತೂ ಈ ಉತ್ತರ ತುಂಬಾ ಇಷ್ಟವಾಗಿದೆ. ಜಾಹ್ನವಿ ಅವರ ಇತ್ತೀಚಿನ ಕೊನೆಯ ಚಿತ್ರ ‘ರೂಹಿ’ ತೆರೆಕಂಡಿತ್ತು. ಸದ್ಯದಲ್ಲಿ ಅವರು ಮುಂಬರುವ ‘ಗುಡ್ ಲಕ್ ಜೇರಿ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.