ಜಿಂಕೆಯ ಚಾಣಾಕ್ಷತೆಯ ಮುಂದೆ ಹುಲಿಯ ಶಕ್ತಿ ಮಣ್ಣುಗೂಡಿ ಹೋಯಿತು! ನೋಡಿ ಈ ವೈರಲ್ ವಿಡಿಯೋ!
ಶಕ್ತಿ ಒಂದು ನಶೆ ಇದ್ದ ಹಾಗೆ. ಈ ನಶೆಯಲ್ಲಿ ಎಷ್ಟೋ ಜನ ಹಾಳಾಗಿ ಹೋಗಿದ್ದಾರೆ. ಎಲ್ಲರಿಗೂ ಪಾವರ್ ಫುಲ್ ಆಗಬೇಕೆನಿಸುತ್ತದೆ. ಇದರಲ್ಲಿ ಕೆಲವರು ಶಾರೀರಿಕವಾಗಿ ವಿಚಾರ ಮಾಡಿದರೆ ಕೆಲವರು ಬೌದ್ಧಿಕವಾಗಿ ಶಕ್ತಿಯುತವಾಗಲು ಇಚ್ಚಿಸುತ್ತಾರೆ. ಇದರಲ್ಲಿ ಶಕ್ತಿ ಒಂದು ಸ್ಟಿಯರಿಂಗ್ ಇದ್ದ ಹಾಗೆ, ಯಾವಾಗ ಅದರ ಮೇಲಿನ ಹಿಡಿತ ತಪ್ಪುವದು ಆಗ ಮಾತ್ರ ಜೀವನ ಬೇರೆಯೇ ತಿರುವು ತೆಗೆದುಕೊಳ್ಳುವದು.
ಹೇಗೆ ಅಂತೀರಾ? ಇದನ್ನು ತಿಳಿಯಲು ಕೆಳಗಿನ ವೀಡಿಯೊವನ್ನು ನೋಡಿ, ಇದನ್ನು ಆಯ್ಎಫ್ಎಸ್ ಸುಶಾಂತ್ ನಂದಾ ಅವರು ಶೇರ್ ಮಾಡಿದ್ದಾರೆ.

ಈ ವೀಡಿಯೋವನ್ನು ಸುಶಾಂತ್ ಅವರು ಜೂನ್ 13 ರಂದು ಶೇರ್ ಮಾಡಿದ್ದರು. ಈ ಲೇಖನ ಬರೆಯುವ ಹೊತ್ತಿಗೆ ಸುಮಾರು 2 ಲಕ್ಷ ಜನರು ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. 13 ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳು ಬಂದಿವೆ.
ಶಿಕಾರಿಯಿಂದ ತಪ್ಪಿಸಿಕೊಳ್ಳೊ ಐಡಿಯಾ ಅಂದ್ರೆ ಇದು! ಜಿಂಕೆ ಇಲ್ಲಿ ಯಾವ ಟ್ರಿಕ್ ಅನುಸರಿಸಿದೆ ನೋಡಿ..
What is power without control🙂 pic.twitter.com/uec2uFkRvB
— Susanta Nanda (@susantananda3) June 13, 2020
ಈ ವೀಡಿಯೋದಲ್ಲಿ ಒಂದು ಜಿಂಕೆ ಕೆರೆಯಲ್ಲಿ ನೀರು ಕುಡಿಯುತ್ತಿರುತ್ತದೆ. ಆಕಸ್ಮಿಕವಾಗಿ ಹುಲಿ ಅದರ ಮೇಲೆ ದಾಳಿ ಮಾಡುತ್ತದೆ. ವೇಗವಾಗಿ ಬರುತ್ತಿದ್ದ ಹುಲಿಯಿಂದ ಜಿಂಕೆ ಇಷ್ಟೊಂದು ಸರಳವಾಗಿ ತಪ್ಪಿಸಿಕೊಳ್ಳುತ್ತದೆ ಎಂದರೆ ನೋಡುವವರಿಗೆ ಶೋಯೆಬ್ ಅಕ್ತರ್ ಮತ್ತು ರಾಹುಲ್ ದ್ರಾವಿಡ್ ಅವರ ನೆನಪು ಬರುತ್ತದೆ. ಯಾಕೆಂದರೆ ಜಿಂಕೆಯ ಚಪಲತೆಯಿಂದ ಹುಲಿಯ ಶರವೇಗವೆಲ್ಲ ಮಣ್ಣುಗೂಡಿ ಹೋಯಿತು.
