‘ಜಿನೆ ಮೇರಾ ದಿಲ್ ಲುಟೆಯಾ’ ಹಾಡಿಗೆ ಭರ್ಜರಿ ಡಾನ್ಸ್ ಮಾಡಿದ ಚಹಲ್ ಪತ್ನಿ ಧನಶ್ರೀ! ಫ್ಯಾನ್ಸ್ ಫುಲ್ ಖುಷ್! Viral Video
ಜನಪ್ರಿಯ ಯೂಟ್ಯೂಬರ್ ಮತ್ತು ಡಾನ್ಸರ್ ಧನಾಶ್ರೀ ವರ್ಮಾ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ತನ್ನ ಡಾನ್ಸ್ ನಿಂದಾಗಿಯೇ ಸಿಕ್ಕಾಪಟ್ಟೆ ಸುದ್ದಿಯಾಗಿರುವುದು ಮಾತ್ರವೇ ಅಲ್ಲದೇ ಧನಾಶ್ರೀ ಅವರ ಡಾನ್ಸ್ ವೀಡಿಯೋಗಳು ಎಲ್ಲೆಲ್ಲೂ ಹರಿದಾಡುತ್ತಿದೆ. ಧನಾಶ್ರೀ ಡಾನ್ಸ್ ವೀಡಿಯೋಗಳಿಂದಾಗಿಯೇ ಪ್ರಸ್ತುತ ಭರ್ಜರಿ ಜನಪ್ರಿಯತೆಯನ್ನು ತನ್ನದಾಗಿಸಿಕೊಂಡು ಆಕೆಯ ಅಭಿಮಾನಿಗಳ ಸಂಖ್ಯೆ ಕೂಡಾ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಧನಾಶ್ರೀ ವರ್ಮಾ ಅವರ ವೀಡಿಯೋಗಳಂತೂ ಸೋಶಿಯಲ್ ಮೀಡಿಯಾಗಳಲ್ಲಿ ಆಗುತ್ತಿರುವ ವೈರಲ್ ನೋಡಿದ್ದರೆ ಆಶ್ಚರ್ಯ ಹಾಗೂ ವಿಸ್ಮಯವನ್ನು ಹುಟ್ಟಿಸುವಂತೆ ಇದೆ.
ಈಗ ಧನಾಶ್ರೀ ಅವರ ಹೊಸ ವೀಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಧನಾಶ್ರೀ ಅವರು ಭರ್ಜರಿಯಾಗಿ ಕುಣಿದಿರುವ ಈ ವೀಡಿಯೋ ನೋಡಿ ಅಭಿಮಾನಿಗಳು ಕೂಡಾ ಹುಚ್ಚೆದ್ದು ಕುಣಿಯುವಂತಾಗಿದೆ. ಜೀನೆ ಮೇರೆ ದಿಲ್ ಲುಟಿಯಾ ಎನ್ನುವ ಸೂಪರ್ ಹಾಡಿಗೆ ಡಾನ್ಸ್ ಮಾಡಿದ್ದಾರೆ ಧನಾಶ್ರೀ ವರ್ಮಾ. ಹಾಡಿಗೆ ತಕ್ಕಂತೆ ಧನಾಶ್ರೀ ಹಾಕಿರುವ ಸ್ಟೆಪ್ ಗಳು ಮತ್ತು ಡಾನ್ಸ್ ಮೂಮೆಂಟ್ ಗಳು ನೋಡಿದ ಅಭಿಮಾನಿಗಳು ಕೂಡಾ ಸಖತ್ ಎಂಜಾಯ್ ಮಾಡುತ್ತಿದ್ದಾರೆ, ಧನಾಶ್ರೀ ಅವರ ಡಾನ್ಸ್ ನೋಡಿ ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಈ ಹಾಡಿನ ಡಾನ್ಸ್ ಗೆ ಧನಾಶ್ರೀ ಮೆರೂನ್ ಬಣ್ಣದ ಕ್ರಾಪ್ ಟಾಪ್ ಧರಿಸಿದ್ದು, ಅದರ ಜೊತೆಗೆ ಧರಿಸಿರುವ ಜೀನ್ಸ್ ಅದಕ್ಕೆ ಪಕ್ಕಾ ಸೂಟ್ ಆಗಿದ್ದು ನೋಡುಗರ ಗಮನವನ್ನು ಸೆಳೆಯುತ್ತಿದೆ. ಧೂಳೆಬ್ಬಿಸುವ ಈ ನೃತ್ಯವನ್ನು ನೋಡಿದ ಅಭಿಮಾನಿಗಳು ಹಾಗೂ ನೆಟ್ಟಿಗರು ಕೂಡಾ ಭರ್ಜರಿಯಾಗಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.. ಧನಾಶ್ರೀ ವರ್ಮಾ ಭಾರತ ಕ್ರಿಕೆಟ್ ನ ಆಟಗಾರ ಸ್ಪಿನ್ ಬೌಲರ್ ಯಜ್ವೇಂದ್ರ ಚಹಲ್ ಅವರ ಭಾವೀ ಪತ್ನಿ ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಆದರೆ ಇದೇ ವಿಷಯ ಎಂದರೆ ಯಜ್ವೇಂದ್ರ ಚಹಲ್ ಧನಾಶ್ರೀ ವರ್ಮಾ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಫೋಟೋ ಶೇರ್ ಮಾಡಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದರು.
ವಿಡಿಯೋ ನೋಡಿ….
ಒಂದೆಡೆ ಯಜ್ವೇಂದ್ರ ಚಹಲ್ ಅವರು ಕ್ರಿಕೆಟ್ ನಲ್ಲಿ ಹೆಸರು ಮಾಡುತ್ತಿದ್ದರೆ ಇನ್ನೊಂದೆಡೆ ಧನಾಶ್ರೀ ವರ್ಮಾ ಸೋಶಿಯಲ್ ಮೀಡಿಯಾಗಳಲ್ಲಿ ಸಂಚಲನವನ್ನು ಸೃಷ್ಟಿಸಿದ್ದಾರೆ. ಧನಾಶ್ರೀ ವರ್ಮಾ ವೀಡಿಯೋಗಳು ಇತ್ತೀಚಿನ ದಿನಗಳಲ್ಲಿ ಡಾನ್ಸ್ ಪ್ರಿಯರ ಫೇವರಿಟ್ ಆಗಿದೆ ಎಂದರೆ ಕೂಡಾ ತಪ್ಪಾಗುವುದಿಲ್ಲ. ಧನಾಶ್ರೀ ಅವರು ಒಬ್ಬ ಡಾಕ್ಟರ್ ಎನ್ನುವುದು ಹಲವರಿಗೆ ತಿಳಿದೇ ಇಲ್ಲ. ಆಕೆ ವೃತ್ತಿಯಿಂದ ವೈದ್ಯೆ ಆಗಿದ್ದರೂ ಕೂಡಾ ಹೆಸರು ಮಾಡಿರುವುದು ಮಾತ್ರ ಒಬ್ಬ ಡಾನ್ಸರ್ ಮತ್ತು ಯೂಟ್ಯೂಬರ್ ಆಗಿ. ಇನ್ಸ್ಟಾಗ್ರಾಂ ನಲ್ಲಿ ಧನಾಶ್ರೀ ಅವರಿಗೆ ಹನ್ನೊಂದು ಲಕ್ಷಕ್ಕೂ ಮೀರಿದ ಫಾಲೋಯರ್ಸ್ ಇದ್ದು, ದಿನ ಪ್ರತಿದಿನ ಎಂಬಂತೆ ಧನಾಶ್ರೀ ಅವರ ವೀಡಿಯೋಗಳು ಭರ್ಜರಿ ಹಿಟ್ ಆಗುತ್ತಿವೆ.