ಜೀವನವು ತುಂಬಾ ಸುಂದರವಾಗಿದೆ, ಅದನ್ನು ಈ ಆನೆಯ ಮರಿಯ ತರ ಆನಂದಿಸಬೇಕಷ್ಟೇ.! ನೋಡಿ ಈ ವೈರಲ್ ವಿಡಿಯೋ!
ಮಕ್ಕಳು ಆಡುವ ವಿವಿಧ ಆಟಗಳು ಎಲ್ಲರಿಗೂ ತುಂಬಾ ಮನರಂಜನೆಯನ್ನು ನೀಡುತ್ತವೆ. ಅದೇ ತರ ಕಾಡಲ್ಲಿಯ ಪ್ರಾಣಿಗಳೂ ಸಹಿತ ತುಂಬಾ ಮೋಜು ಮಾಡುವದುಂಟು. ಈ ತರದ ಅನೇಕ ವಿಡಿಯೋಗಳು ಸೋಶಿಯಲ್ ಮಿಡಿಯಾದಲ್ಲಿ ಯಾವತ್ತೂ ವೈರಲ್ ಆಗುತ್ತಲೇ ಇರುತ್ತವೆ.
ಇಲ್ಲಿ ಅಂಥದ್ದೇ ಫನ್ನಿ ವೈರಲ್ ವಿಡಿಯೋ ಒಂದು ನಾವು ನಿಮಗಾಗಿ ತಂದಿದ್ದೇವೆ. ನಿಜಕ್ಕೂ ಮೋಜು ಮಾಡುವ ಗುಣಗಳು ಭೂಮಂಡಲ ಅನೇಕ ಜೀವಿಗಳಲ್ಲಿ ಕಂಡು ಬರುತ್ತವೆ. ಸದ್ಯಕ್ಕೆ ಕ್ಯಾಮೆರಾ (ಮೊಬೈಲ್) ಏಲ್ಲಿ ಬೇಕಾದರೂ ಉಪಲಬ್ಧವಿರುವದರಿಂದ ಪ್ರಾಣಿಗಳ ಇಂಥ ಮೋಜಿನ ಪ್ರಸಂಗದ ವಿಡಿಯೋಗಳು ತುಂಬಾ ದೊರೆಯುತ್ತಿವೆ.
ಈ ವಿಡಿಯೋದಲ್ಲಿ ಆನೆಯ ಪುಟ್ಟ ಮರಿಯು ಒಂದು ಚಿಕ್ಕ ಬೆಟ್ಟದ ಮೇಲಿಂದ ಅಥವಾ ಏರಿಯ ಮೇಲಿಂದ ಕೆಳಗೆ ಹೋಗಲು ಅನುಸರಿಸಿದ ರೀತಿ ತುಂಬಾ ಮೋಜಿನದ್ದಾಗಿದೆ. ಚಿಕ್ಕ ಮಕ್ಕಳು ಕೆಸರಿನಲ್ಲಿ ಆಟ ಆಡುವಾಗ ಜಾರುಬಂಡೆಯ ಮೇಲಿಂದ ಜಾರುತ್ತ ಹೋಗುವ ಹಾಗೆ ಈ ಪುಟ್ಟ ಮರಿಯೂ ಸಹಿತ ಇಳಿಜಾರಲ್ಲಿ ಸುಯ್ ಅಂತ ಜಾರುತ್ತ ಹೋಗಿದೆ. ಈ ದೃಶ್ಯ ವಿಶೇಷವಾಗಿ ಪ್ರಾಣಿ ಪ್ರಿಯರಿಗೆ ತುಂಬಾ ಮಜವನ್ನು ನೀಡುತ್ತದೆ.
ವಿಡಿಯೋ ನೋಡಿ…
ऊँचे परबत…लंबा रस्ता…
— Sonal Goel (@sonalgoelias) August 8, 2020
चलो चलते हैं सैर पर।
Let's not forget to appreciate life's little pleasures 😊
Find joy in your journey ! pic.twitter.com/c6kTFvl2BJ
ನಿಜಕ್ಕೂ ಈ ಆನೆ ಮರಿಯು ಕಾಡಿನಲ್ಲಿ ಎಷ್ಟೊಂದು ಜಾಲಿಯಾಗಿ ಸಂಚರಿಸಿದೆ ಅಲ್ವಾ?
ಪ್ರಸ್ತುತ ವೀಡಿಯೊವನ್ನು @sonalgoelias ಹೆಸರಿನಿಂದ ಶೇರ್ ಮಾಡಿದ್ದಾರೆ. ಅದಕ್ಕೆ ಒಂದು ಒಳ್ಳೆಯ ಕ್ಯಾಪ್ಶನ್ ಸಹ ಕೊಟ್ಟಿದ್ದಾರೆ. ಜೀವನದಲ್ಲಿಯ ಚಿಕ್ಕಪುಟ್ಟ ಸಂತೋಷಗಳನ್ನು ನಾವು ಎಂದಿಗೂ ಮರೆಯದೆ ಅವುಗಳ ಆನಂದವನ್ನು ಸವಿಯುತ್ತ ಹೋಗಬೇಕು. ಅಂದಾಗಲೇ ಜೀವನಕ್ಕೆ ಮಧುರ ರುಚಿ, ಟೆಸ್ಟ್ ಬರುವದು.