ಜೂಮ್ ಮಾಡಿ ನೋಡಬಹುದು ; ಈ ಫೋಟೋದಲ್ಲಿ ಎರಡು ಬೇರೆ ಬೇರೆ ಜೀವಿಗಳಿವೆ ; ಎರಡನೆಯ ಪ್ರಾಣಿ ಯಾವುದು ಹೇಳಿ ನೋಡೋಣ…
ಸೋಶಿಯಲ್ ಮೀಡಿಯಾದಲ್ಲಿ ಪಜಲ್ ಫೋಟೋಗಳು ಆಗಾಗ ತುಂಬಾ ವೈರಲ್ ಆಗುತ್ತಿರುತ್ತವೆ. ಈ ಫೋಟೋಗಳಲ್ಲಿ ಏನಾದರೂ ರಹಸ್ಯ ಅಡಗಿರುತ್ತದೆ. ಆ ರಹಸ್ಯ ಸುಮ್ಮನೆ ನೋಡಿದಾಗ ತಿಳಿದುಬರುವುದಿಲ್ಲ ಅಥವಾ ಕಂಡುಬರುವುದಿಲ್ಲ. ಅದಕ್ಕಾಗಿ ಕಣ್ಣುಗಳಿಗೆ ಸ್ವಲ್ಪ ಒತ್ತು ನೀಡಬೇಕಾಗುತ್ತದೆ. ಈ ರೀತಿಯ ಚಿತ್ರಗಳಿಗೆ ಒಪ್ಟಿಕಲ್ ಇಲ್ಯೂಜನ್ ಚಿತ್ರಗಳೆಂದು ಕರೆಯುತ್ತಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಈ ರೀತಿಯ ಚಿತ್ರಗಳು ನೇಟಿಜನ್ಸ್ ಗಳಿಗೆ ತುಂಬಾ ಹಿಡಿಸುತ್ತಿವೆ. ಕಾರಣ ನೇಟಿಜನ್ಸ್ ಗಳಿಗೆ ಈ ಚಿತ್ರಗಳಲ್ಲಿ ಅಡಗಿರುವ ರಹಸ್ಯವನ್ನು ಶೋಧಿಸುವದು ತುಂಬಾ ಚಾಲೆಂಜ್ ಮತ್ತು ಇಂಟರೆಸ್ಟ್ ಆಗಿರುತ್ತದೆ. ಈಗ ಇದೇ ರೀತಿಯ ಒಂದು ಬೇರೆ ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಹರಿದಾಡಿ ನೇಟಿಜನ್ಸ್ ಗಳ ತಲೆ ತಿನ್ನುತ್ತಿದೆ.
ಈಗ ನೋಡುವ ಈ ಫೋಟೋ ತುಂಬಾ ಬ್ರಮೆ ನಿರ್ಮಾಣಮಾಡುವ ಫೋಟೋ ಆಗಿದೆ. ಸಹಜವಾಗಿ ನೋಡಲು ಈ ಫೋಟೋದಲ್ಲಿ ಅಂಥದ್ದೇನು ಅಡಗಿದೆ ಎಂಬ ಪ್ರಶ್ನೆ ಮೂಡುತ್ತದೆ. ಆದರೆ ಪ್ರಸ್ತುತ ಚಿತ್ರದಲ್ಲಿ ಎರಡು ಪ್ರಾಣಿಗಳು ಅವಿತುಕೊಂಡಿವೆ. ಅದು ಅಷ್ಟೊಂದು ಸಹಜವಾಗಿ ಕಣ್ಣಿಗೆ ಗೋಚರಿಸುವುದಿಲ್ಲ. ಏಕೆಂದರೆ ಅದಕ್ಕಾಗಿ ಸಂಯಮ ಮತ್ತು ಶೋಧಿಸುವ ಸೂಕ್ಷ್ಮ ಕಣ್ಣುಗಳು ಬೇಕು.

ಈ ಫೋಟೋದಲ್ಲಿ ಒಂದು ಪ್ರಾಣಿ ಮತ್ತು ಇನ್ನೊಂದು ಪಕ್ಷಿ ಇದೆ. ಪಕ್ಷಿಯು ಸಹಜವಾಗಿ ಕಂಡುಬರುತ್ತದೆ. ಆದರೆ ಇಲ್ಲಿರುವ ಎರಡನೆಯ ಪ್ರಾಣಿ ಮಾತ್ರ ಅಷ್ಟೊಂದು ಸಹಜವಾಗಿ ಕಂಡುಬರುವುದಿಲ್ಲ.
ಈ ಚಿತ್ರವನ್ನು 1900 ರಲ್ಲಿ ಅಮೆರಿಕೆಯ ಮಾನಸಶಾಸ್ತ್ರಜ್ಞ ಜೋಸೆಫ್ ಜಾಸ್ಟ್ರೋ ಮೊಟ್ಟಮೊದಲ ಬಾರಿಗೆ ಪ್ರಸ್ತುತ ಪಡಿಸಿದ್ದರು. 2011ರಲ್ಲಿ ಪ್ರಕಟಗೊಂಡ ಒಂದು ರಿಸರ್ಚಿನಲ್ಲಿ, ಈ ಚಿತ್ರದಲ್ಲಿ ಅಡಗಿರುವ ಮೊಲ ಮತ್ತು ಬಾತುಕೋಳಿಯನ್ನು ಯಾರು, ಎಷ್ಟು ಬೇಗ ಕಂಡುಹಿಡಿಯುತ್ತಾರೋ ಅವರು ತುಂಬಾ ಕ್ರಿಯೇಟಿವ್ ವ್ಯಕ್ತಿಯಾಗಿರುತ್ತಾರೆ ಎಂದು ಹೇಳಲಾಗಿದೆ. ಯಾಕೆಂದರೆ ಈ ರಿಸರ್ಚನಲ್ಲಿ ಮನುಷ್ಯನ ಮನಸ್ಸು ಈ ಚಿತ್ರದಲ್ಲಿರುವ ಎರಡು ಪ್ರಾಣಿಗಳನ್ನು ಹುಡುಕುವುದರಲ್ಲಿ ಎಷ್ಟು ಬೇಗ ಸ್ವಿಚ್ ಆಗುತ್ತದೆ ಎಂಬುದರ ಬಗ್ಗೆ ಅಭ್ಯಾಸ ಮಾಡಲಾಗಿತ್ತು.