ಜೂಹಿ ಚಾವ್ಲಾ ದುಡ್ಡಿಗಾಗಿ ಮುದುಕನ ಮದುವೆಯಾದರೆಂದು ಟೀಕಿಸಿದ್ದರು ಜನ: ಆದರೆ ಅಸಲೀ ಕಥೆ ಬೇರೆಯೇ ಇತ್ತು!
ಕನ್ನಡದ ಪ್ರೇಮಲೋಕ, ಕಿಂದರಜೋಗಿ, ಶಾಂತಿ ಕ್ರಾಂತಿ ಸಿನಿಮಾಗಳಲ್ಲಿ ನಟಿಸಿ ಸ್ಯಾಂಡಲ್ ವುಡ್ ನಲ್ಲಿ ಮಿಂಚಿದ ಬಾಲಿವುಡ್ ನಟಿ ಜೂಹಿ ಚಾವ್ಲಾ ಬಾಲಿವುಡ್ ನ ಅತ್ಯಂತ ಸುಂದರವಾದ ಹೀರೋಯಿನ್ ಗಳಲ್ಲಿ ಒಬ್ಬರು ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ. 90ರ ದಶಕದಲ್ಲಿ ಬಾಲಿವುಡ್ ಸಿನಿಮಾ ಅಂಗಳದಲ್ಲಿ ದೊಡ್ಡ ಸದ್ದನ್ನು ಮಾಡಿದ್ದ ಬಹು ಬೇಡಿಕೆಯ ನಟಿಯಾಗಿದ್ದವರು ಜೂಹಿ. ಜೂಹಿ ಚಾವ್ಲಾ 1984 ರಲ್ಲಿ ಮಿಸ್ ಇಂಡಿಯಾ ಟೈಟಲ್ ಗೆದ್ದು ಬೀಗಿದ್ದರು. ಇದಾದ ನಂತರ ಲಕ್ಷಾಂತರ ಜನರು ಜೂಹಿ ಚಾವ್ಲಾ ಅವರ ಮುಗುಳುನಗೆಯನ್ನು ನೋಡಿ ಹುಚ್ಚರಾಗುತ್ತಿದ್ದರು. 1988 ರಲ್ಲಿ ಜೂಹಿ ಚಾವ್ಲಾ ಬಾಲಿವುಡ್ ನಟ ಅಮೀರ್ ಖಾನ್ ಜೊತೆಗೆ ಖಯಾಮತ್ ಸೆ ಖಯಾಮತ್ ತಕ್ ಸಿನಿಮಾದಲ್ಲಿ ನಟಿಸಿ ಬೆಳ್ಳಿತೆರೆಯು ತನ್ನನ್ನು ಮೋಹಿಸು ವಂತೆ ಮಾಡಿಬಿಟ್ಟರು.
ಸಿನಿಮಾಗಳಲ್ಲಿ ಹೆಜ್ಜೆ ಇಟ್ಟ ಮೇಲೆ ಜೂಹಿ ಚಾವ್ಲಾ ಬಾಲಿವುಡ್ ನ ಸ್ಟಾರ್ ನಟಿಯಾಗಿ ಮಿಂಚಿದರು. 1995 ರಲ್ಲಿ ತನ್ನ ವೃತ್ತಿಜೀವನದ ಅತ್ಯುನ್ನತ ಸ್ಥಾನದಲ್ಲಿ ಬಾಲಿವುಡ್ ನ ಬಹು ಬೇಡಿಕೆಯ ನಟಿಯಾಗಿ ಇರುವಾಗಲೇ ಜೂಹಿ ಚಾವ್ಲಾ ಉದ್ಯಮಿ ಜಯ್ ಮೆಹತಾ ಅವರ ಜೊತೆಗೆ ಸಪ್ತಪದಿ ತುಳಿದು ವಿವಾಹ ಜೀವನಕ್ಕೆ ಅಡಿಯಿರಿಸಿದರು. ಆಗ ಜಯ್ ಮೆಹ್ತಾ ಅವರಿಗೆ 33 ವರ್ಷ ಆಯಸ್ಸು ಹಾಗೂ ಜೂಹಿ ಚಾವ್ಲಾ ಅವರಿಗೆ 28 ವರ್ಷ ವಯಸ್ಸಾಗಿತ್ತು. ಜೂಹಿ ಚಾವ್ಲಾ ಹಾಗೂ ಜಯ್ ಮೆಹತಾ ಅವರ ಮದುವೆ ಬಾಲಿವುಡ್ ಮಂದಿಗೆ ಹಾಗೂ ಅಭಿಮಾನಿಗಳಿಗೆ ಕೂಡಾ ದೊಡ್ಡ ಶಾ ಕ್ ನೀಡಿತ್ತು. ಇದಕ್ಕೆ ಕಾರಣ ಇವರಿಬ್ಬರ ನಡುವೆ ಇದ್ದ ಅಫೇರ್ ಬಗ್ಗೆ ಅಥವಾ ಅವರಿಬ್ಬರ ಮದುವೆಯ ಬಗ್ಗೆ ಆಗಲಿ ಯಾರೂ ಊಹೆ ಮಾಡಿರಲಿಲ್ಲ.

ಹೀಗೆ ಸೀಕ್ರೆಟ್ ವೆಡ್ಡಿಂಗ್ ಆದ ಮೇಲೆ ಜೂಹಿ ಚಾವ್ಲಾ ಮತ್ತು ಜಯ್ ಮೆಹತಾ ಅವರ ಫೋಟೋಗಳು ಮೊದಲ ಬಾರಿಗೆ ಬಹಿರಂಗವಾದಾಗ, ಅದರ ಬಗ್ಗೆ ಜನರು ಬಗೆ ಬಗೆಯಾಗಿ ಮಾತನಾಡಿಕೊಳ್ಳಲು ಆರಂಭಿಸಿದರು. ಮನುಷ್ಯನ ವ್ಯಕ್ತಿತ್ವವನ್ನು ಅವನ ಬಣ್ಣ ಹಾಗೂ ರೂಪದಿಂದ ನಿರ್ಧರಿಸುವ ಜನರು ಈ ಮದುವೆಯ ವಿಷಯವಾಗಿ ಸಾಕಷ್ಟು ಅ ವ ಹೇ ಳ ನ ವನ್ನು ಮಾಡಿದರು. ಜಯ್ ಮೆಹತಾ ಅವರ ತಲೆಯಲ್ಲಿ ಕೂದಲು ಕಡಿಮೆ ಇದ್ದ ಕಾರಣ ಅವರನ್ನು ಬುಡ್ಡಾ ( ತಾತಾ ) ಎಂದು ಕರೆದು ಹಿಯಾಳಿಸಿದರು. ಅಲ್ಲದೆ ನಟಿ ಜೂಹಿ ಚಾವ್ಲಾ ಹಣದ ಆಸೆಯಿಂದ ವಯಸ್ಸಾದ ಮುದುಕನನ್ನು ಮದುವೆಯಾರೆಂದು ಟೀ ಕೆ ಮಾಡಿದರು. ಜೂಹಿ ಚಾವ್ಲಾ ಹಾಗೂ ಜೈ ಮೆಹತಾ ನಡುವೆ ಇದ್ದಂತಹ ಪ್ರೀತಿಯ ಬಗ್ಗೆ ಯಾರೂ ಮಾತನಾಡಲಿಲ್ಲ.
ಅವರಿಬ್ಬರೂ ಯಾವ ಪರಿಸ್ಥಿತಿಗಳನ್ನು ದಾಟಿ ಬಂದರು, ಹೇಗೆ ಸಮಸ್ಯೆಗಳನ್ನು ಒಟ್ಟಾಗಿ ಎದುರಿಸಿದರು ಎನ್ನುವ ವಿಷಯಗಳನ್ನು ಮಾತ್ರ ಎಂದಿಗೂ ಬಹಿರಂಗವಾಗಿ ಮಾತನಾಡಲಿಲ್ಲ. ಜಯ್ ಮೆಹತಾ ಮುಂಬೈ ನಗರದ ಒಬ್ಬ ಜನಪ್ರಿಯ ಉದ್ಯಮಿಯಾಗಿದ್ದಾರೆ. ಇವರು ಮೆಹತಾ ಗ್ರೂಪ್ ಆಫ್ ಕಂಪನೀಸ್ ನ ಮಾಲೀಕರಾಗಿದ್ದಾರೆ. ಇವರ ಕಂಪನಿ ಸಿಮೆಂಟ್ ಉತ್ಪಾದನೆಯಿಂದ ಹಿಡಿದು ಸಕ್ಕರೆ ಉತ್ಪಾದನೆಯ ವರೆಗೂ ತನ್ನ ವ್ಯಾಪ್ತಿಯನ್ನು ಹೊಂದಿದೆ. ಜಯ್ ಮೆಹತಾ ಅವರ ಮೊದಲ ಮದುವೆ ಬಿರ್ಲಾ ಕುಟುಂಬದ ಯುವತಿಯ ಜೊತೆ ಆಗಿತ್ತು. ಇವರು ಯಶ್ ಬಿರ್ಲಾ ಅವರ ಸಹೋದರಿ ಸುಜಾತಾ ಬಿರ್ಲಾ ಅವರನ್ನು ವಿವಾಹವಾಗಿದ್ದರು.

ದುರಾದೃಷ್ಟವಶಾತ್ 1990 ರಲ್ಲಿ ಬೆಂಗಳೂರಿನಲ್ಲಿ ನಡೆದ ವಿಮಾನ ದು ರಂ ತದಲ್ಲಿ ಸುಜಾತಾ ಬಿರ್ಲಾ ಅವರ ಮ ರ ಣ ಹೊಂದಿದರು. ಈ ಘಟನೆಯ ನಂತರ ಜಯ್ ಮೆಹತಾ ಸಾಕಷ್ಟು ದುಃಖದಲ್ಲಿ ಮುಳುಗಿ ಹೋದರು, ಮಾನಸಿಕವಾಗಿ ಕುಗ್ಗಿ ಹೋದರು. ಜಯ್ ಹೆತ್ತವರಿಗೆ ಸಿನಿಮಾ ಮಂದಿಯೊಡನೆ ಅಷ್ಟಾಗಿ ಯಾವುದೇ ರೀತಿಯ ಸಂಪರ್ಕ ಇರಲಿಲ್ಲ. ಆದರೆ 90ರ ದಶಕದಲ್ಲಿ ಅವರ ಗೆಳೆಯ ರಾಕೇಶ್ ರೋಷನ್ ನಿರ್ದೇಶನ ಮಾಡುತ್ತಿದ್ದ ಕಾರೋಬಾರ್ ಸಿನಿಮಾದ ಚಿತ್ರೀಕರಣದ ವೇಳೆಯಲ್ಲಿ ನಿರ್ದೇಶಕ ರಾಕೇಶ್ ರೋಷನ್ ಜೂಹಿ ಚಾವ್ಲಾ ಅವರನ್ನು ಜಯ್ ಮೆಹತಾ ಅವರಿಗೆ ಪರಿಚಯಿಸಿದರು.
ಜೂಹಿ ಚಾವ್ಲಾ ನಟನೆಯ ಈ ಸಿನಿಮಾ ಸೋತಿದ್ದಾರೆ ಅವರ ಮತ್ತು ಜಯ್ ಮೆಹತಾ ಅವರ ಪರಿಚಯ ಮಾತ್ರ ಸೂಪರ್ ಹಿಟ್ ಆಯಿತು. ಜಯ್ ಮೆಹತ ಅವರ ಪತ್ನಿಯ ನಿಧನದ ನಂತರ ನೋವಿನಲ್ಲಿ ಮುಳುಗಿದ್ದ ಜಯ್ ಅವರಿಗೆ ಉತ್ತಮ ಸ್ನೇಹಿತೆಯಾಗಿ ಜೂಹಿ ಚಾವ್ಲಾ ಅವರ ಜೊತೆ ನಿಂತಿದ್ದು ಮಾತ್ರವಲ್ಲದೆ, ಅವರಿಗೆ ಧೈರ್ಯ ತುಂಬಿದರು. ದಿನ ಕಳೆದಂತೆ ಅವರ ಸ್ನೇಹವು ಪ್ರೀತಿಯಾಗಿ ಬದಲಾಯಿತು. ಆದರೆ ಅದನ್ನು ಅವರು ಹೇಳಿಕೊಂಡಿರಲಿಲ್ಲ. ದಿನಕಳೆದಂತೆ ಇಬ್ಬರು ಜೊತೆಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಸಿನಿಮಾ ಮಂದಿ ಕೂಡ ಅವರಿಬ್ಬರನ್ನು ಅತ್ಯುತ್ತಮ ಸ್ನೇಹಿತರು ಎಂದೇ ಕರೆಯುತ್ತಿದ್ದರು. ಅತ್ಯುತ್ತಮ ಸ್ನೇಹಿತರಂತೆ ಒಬ್ಬರು ಇನ್ನೊಬ್ಬರ ನೋವಿಗೆ ಮಿಡಿಯುತ್ತಿದ್ದರು.

ಇನ್ನು ಜಯ್ ಮೆಹತಾ ತನ್ನ ಪ್ರೇಮದ ವಿಚಾರವನ್ನು, ತಮ್ಮ ಮನಸ್ಸಿನ ಮಾತನ್ನು ಜೂಹಿಗೆ ಹೇಳುವ ವೇಳೆಗೆ ಅ ಪ ಘಾ ತವೊಂದರಲ್ಲಿ ಜೂಹಿ ತಮ್ಮ ತಾಯಿಯನ್ನು ಕಳೆದುಕೊಂಡರು. ಜೂಹಿ ಆ ನೋ ವಿನಲ್ಲಿ ಕೊರಗಿದರು. ಆಗ ಜಯ್ ಮೆಹ್ತಾ ಜೂಹಿ ಅವರ ಜೊತೆಯಲ್ಲಿ ನಿಂತು ಅವರಿಗೆ ಸಮಾಧಾನ ಮಾಡಿದರು. ಜೂಹಿಗೆ ದೈರ್ಯವನ್ನು ತುಂಬಿದರು, ಹೀಗೆ ಒಬ್ಬರ ನೋವಿನಲ್ಲಿ ಮತ್ತೊಬ್ಬರು ಹೆಗಲಾಗಿದ್ದರು. ಇದೆಲ್ಲವುಗಳ ನಂತರ ಇಬ್ಬರೂ ವಿವಾಹ ಜೀವನಕ್ಕೆ ಕಾಲಿರಿಸಿದರು. ಆದರೆ ಜೂಹಿಚಾವ್ಲಾ ಜೀವನದಲ್ಲಿ ಇನ್ನೂ ಕಷ್ಟಗಳು ಹರಿದಿರಲಿಲ್ಲ.

2002ರಲ್ಲಿ ಅವರ ಸಹೋದರಿ ಸೋನಿಯಾ ಕ್ಯಾನ್ಸರ್ಗೆ ಬ ಲಿ ಯಾದರು. ಅದಾದ ನಂತರ ಜೂಹಿ ಯವರ ಸಹೋದರ ಬಾಬಿ ಚಾವ್ಲಾ ಅವರಿಗೆ ಸ್ಟ್ರೋಕ್ ಆಗಿ ಕೆಲವು ವರ್ಷಗಳ ಕಾಲ ಹಾಸಿಗೆ ಹಿಡಿದರು. ಕಡೆಗೆ 2014ರಲ್ಲಿ ಅವರು ಕೂಡ ನಿಧನರಾದರು. ಹೀಗೆ ಜೂಹಿ ತಮ್ಮ ಆಪ್ತರನ್ನು ಒಬ್ಬೊಬ್ಬರನ್ನಾಗಿ ಕಳೆದುಕೊಂಡರು. ಆದರೆ ಇವೆಲ್ಲವುಗಳ ಹೊರತಾಗಿ ಜೂಹಿಯವರ ಜೀವನದಲ್ಲಿ ಅವರ ಮಗಳು ಜಾಹ್ನವಿ ಹಾಗೂ ಮಗ ಅರ್ಜುನ್ ಆಗಮನ ಅವರಿಗೆ ತನ್ನ ನೋವನ್ನು ಮರೆಯಲು ಕಾರಣವಾದರು. ಜೂಹಿ ಜೀವನಕ್ಕೆ ಹೊಸ ಸಂತೋಷವನ್ನು ನೀಡಿದರು.