ಜೆಫ್ ಬೆಜೋಸ್, ರಿಚರ್ಡ್ ಬ್ರೆನ್ಸನ್- ಕೋಟ್ಯಾಧಿಪತಿ ಗಳ ಬಾಹ್ಯಾಕಾಶ ಪ್ರವಾಸ ಭೂಮಿಗೆ ತರಲಿದೆ ಕುತ್ತು!
ಪ್ರವಾಸಿಗರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ ಮಹತ್ವಾಕಾಂಕ್ಷೆಯ ಯೋಜನೆಗಾಗಿ ವಿಶ್ವದ ಇಬ್ಬರು ದಿಗ್ಗಜ ಬಿಲಿಯನೇರ್ ಗಳ ನಡುವೆ ಸ್ಪರ್ಧೆಯೊಂದು ಏರ್ಪಟ್ಟಿದೆ. ಹೌದು ವರ್ಜಿನ್ ಸಮೂಹದ ಸಂಸ್ಥಾಪಕ ಸರ್ ರಿಚರ್ಡ್ ಬ್ರಾನ್ಸನ್ ಮತ್ತು ಅಮೆಜಾನ್ ನ ಸಿಇಓ ಜೆಫ್ ಬೆಜೋಸ್ ನಡುವೆ ಈ ವಿಚಾರವಾಗಿ ತೀವ್ರವಾದ ಪೈಪೋಟಿ ಏರ್ಪಟ್ಟಿದೆ. ರವಿವಾರ 11 ಜುಲೈ ರಂದು ಬ್ರೆನ್ಸನ್ ತಮ್ಮ ವರ್ಜಿನ್ ಗ್ಯಾಲೆಸ್ಟಿಕ್ ವಿಎಸ್ಎಸ್ ಬಾಹ್ಯಾಕಾಶ ವಿಮಾನವು ಅಂತರಿಕ್ಷದ ಅಂಚಿನವರೆಗೂ ತಲುಪಲು ಎಂಬತ್ತು ಕಿಲೋ ಮೀಟರ್ ವರೆಗೂ ಹಾರಿತ್ತು. ಬೆಜೋಸ್ ಅವರ ಸ್ವಾಯತ್ತತೆ ಇರುವ ಬ್ಲೂ ಆರಿಜನ್ ರಾಕೆಟ್ ಅನ್ನು ಅಪೋಲೊ ಜುಲೈ 11 ರಂದು ಚಂದ್ರನ ಮೇಲೆ ಇಳಿದ ವಾರ್ಷಿಕೋತ್ಸವ ಆಚರಿಸಲು ಉಡಾವಣೆ ಮಾಡಲಾಗಿತ್ತು. ಈ ವಿಮಾನಗಳ ಮೂಲಕ ಅತ್ಯಂತ ಶ್ರೀಮಂತರಿಗೆ ಬಾಹ್ಯಾಕಾಶಕ್ಕೆ ಹೋಗುವ ಅವಕಾಶವನ್ನು ಕಲ್ಪಿಸಲಾಗಿತ್ತು.
ಈ ಎರಡೂ ಪ್ರಯಾಣಗಳಲ್ಲಿ ಯಾತ್ರಿಗಳು ಶೂನ್ಯ ಗುರುತ್ವಾಕರ್ಷಣೆ ಮತ್ತು ಅಂತರಿಕ್ಷದಿಂದ ಭೂಮಿಯ ಸುಂದರವಾದ ನೋಟದ ಹತ್ತು ನಿಮಿಷಗಳ ಅತ್ಯದ್ಭುತ ಎನಿಸುವ ಹಾರಾಟವನ್ನು ಅನುಭವಿಸಿದ್ದಾರೆ. ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋದ ಎಲೆನ್ ಮಸ್ಕ್ ಅವರ ಸ್ಪೇಸ್ ಎಕ್ಸ್ 2021 ತನ್ನ ಕ್ರೂ ಡ್ರಾಗನ್ ಕ್ಯಾಪ್ಸೂಲ್ ನ ಮೂಲಕ ನಾಲ್ಕೈದು ದಿನಗಳ ಕಕ್ಷೀಯ ಪ್ರಯಾಣವನ್ನು ನಡೆಸಲಿದೆ ಎನ್ನಲಾಗಿದೆ. ಜೆಫ್ ಬೆಜೋಸ್ ಅವರು ತಮ್ಮ ಬ್ಲೂ ಒರಿಜಿನ್ ರಾಕೆಟ್ ಬ್ರಾನ್ಸನ್ ನ ವಿಎಸ್ಎಸ್ ಯೂನಿಟಿ ಗಿಂತ ಉತ್ತಮವಾಗಿದೆ ಎಂದಿದ್ದಾರೆ. ಬ್ಲೂ ಎಂಜಿನ್ 3 (ಬಿಇ -3) ದ್ರವ ಹೈಡ್ರೋಜನ್ ಮತ್ತು ದ್ರವ ಆಮ್ಲಜನಕ ಪ್ರೊಪೆಲ್ಲೆಂಟ್ಗಳನ್ನು ಬಳಸಲಾಗಿತ್ತು ಎನ್ನಲಾಗಿದೆ.
ವಿಎಸ್ಎಸ್ ಯೂನಿಟಿಯು ತನ್ನ ಉಡ್ಡಯನದಲ್ಲಿ ಘನ ಇಂಗಾಲ-ಆಧಾರಿತ ಇಂಧನ, ಹೈಡ್ರಾಕ್ಸಿಲ್-ಟರ್ಮಿನೇಟೆಡ್ ಪಾಲಿಬುಟಾಡಿನ್ (ಎಚ್ಟಿಪಿಬಿ) ಮತ್ತು ದ್ರವ ಆಕ್ಸಿಡೆಂಟ್, ನೈಟ್ರಸ್ ಆಕ್ಸೈಡ್ (ನಗುವ ಅನಿಲ) ಗಳನ್ನು ಒಳಗೊಂಡಿರುವ ಹೈಬ್ರಿಡ್ ಪ್ರೊಪೆಲ್ಲಂಟ್ ಅನ್ನು ಬಳಸಿತು. ಇನ್ನು ಕ್ರೂ ಡ್ರ್ಯಾಗನ್ ವಿಚಾರಕ್ಕೆ ಬಂದರೆ ಅಲ್ಲಿ ಮರುಬಳಕೆ ಮಾಡಬಹುದಾದ ರಾಕೆಟ್ಗಳ ಸ್ಪೇಸ್ ಎಕ್ಸ್ ಫಾಲ್ಕನ್ ಸರಣಿಯು ಕ್ರೂ ಡ್ರ್ಯಾಗನ್ ಅನ್ನು ಕಕ್ಷೆಗೆ ನೂಕಲು ದ್ರವ ಸೀಮೆಎಣ್ಣೆ ಮತ್ತು ದ್ರವ ಆಮ್ಲಜನಕವನ್ನು ಬಳಸುತ್ತದೆ ಎನ್ನಲಾಗಿದೆ. ಈ ಪ್ರೊಪೆಲ್ಲೆಂಟ್ಗಳು ದಹಿಸುವುದರಿಂದ ಅದು ರಾಕೆಟ್ಗಳನ್ನು ಬಾಹ್ಯಾಕಾಶಕ್ಕೆ ಉಡಾಯಿಸಲು ಬೇಕಾದ ಶಕ್ತಿಯನ್ನು ಒದಗಿಸುತ್ತದೆ ಆದರೆ ಅದೇ ಸಮಯದಲ್ಲಿ ಇದು ಹಸಿರು ಮನೆ ಅನಿಲಗಳು ಮತ್ತು ವಾಯು ಮಾಲಿನ್ಯ ಕಾರಕಗಳನ್ನು ಸಹಾ ಉತ್ಪಾದಿಸುತ್ತದೆ.

ಬಿಇ -3 ಪ್ರೊಪೆಲ್ಲಂಟ್ ಅನ್ನು ಸುಡುವುದರಿಂದ ಹೆಚ್ಚಿನ ಪ್ರಮಾಣದ ಅನಿಲ ಉತ್ಪತ್ತಿಯಾಗುತ್ತದೆ, ಆದರೆ ವಿಎಸ್ಎಸ್ ಯೂನಿಟಿ ಮತ್ತು ಫಾಲ್ಕನ್ ಇಂಧನ ಎರಡರ ದಹನವು CO2, ಮಸಿ ಮತ್ತು ಕೆಲವು ಜಲಾನಿಲಗಳನ್ನು ಉತ್ಪಾದಿಸುತ್ತದೆ ಎನ್ನಲಾಗಿದೆ. ವಿಎಸ್ಎಸ್ ಯೂನಿಟಿ ಬಳಸುವ ಸಾರಜನಕ ಆಧಾರಿತ ಆ್ಯಕ್ದಿಡೆಂಟ್ ಗಳು ಸಾರಜನಕ ಆಕ್ಸೈಡ್ ಗಳನ್ನು ಉತ್ಪಾದಿಸುತ್ತದೆ, ಇದು ಭೂಮಿಯಲ್ಲಿ ವಾಯುಮಾಲಿನ್ಯವನ್ನು ಉಂಟು ಮಾಡುವ ಅನಿಲಗಳಾಗಿವೆ. ಅಲ್ಲದೇ ಸರಿಸುಮಾರು ಮೂರನೇ ಎರಡರಷ್ಟು ಪ್ರೊಪೆಲ್ಲಂಟ್ ಎಕ್ಸಾಸ್ಟ್ ಅನ್ನು ವಾಯುಮಂಡಲಕ್ಕೆ (12 ಕಿಮೀ –50 ಕಿಮೀ) ಮತ್ತು ವಾಯುಮಂಡಲದ ಮೆಸೋಸ್ಪಿಯರ್ (50 ಕಿಮೀ –85 ಕಿಮೀ) ಗೆ ಬಿಡುಗಡೆ ಮಾಡುತ್ತದೆ ಹಾಗೂ ಅದು ಅಲ್ಲಿ ಇದು ಕನಿಷ್ಠ ಎರಡು ಮೂರು ವರ್ಷಗಳವರೆಗೆ ಇರುತ್ತದೆ.
ಅಲ್ಲದೇ ಉಡಾವಣೆ ಸಮಯದಲ್ಲಿ ಹಾಗೂ ಭೂಮಿಗೆ ಹಿಂತಿರುಗುವ ಸಮಯದಲ್ಲಿ ಉಂಟಾಗುವ ಅತಿ ಹೆಚ್ಚಿನ ತಾಪಮಾನವು ಗಾಳಿಯಲ್ಲಿ ಸ್ಥಿರವಾದ ಸಾರಜನಕವನ್ನು ಪ್ರತಿಕ್ರಿಯಾತ್ಮಕ ಸಾರಜನಕವನ್ನಾಗಿ ಪರಿವರ್ತಿಸುತ್ತದೆ. ಈ ಗ್ಯಾಸ್ ಗಳು ಮತ್ತು ಕಣಗಳಿಂದ ವಾತಾವರಣದ ಮೇಲೆ ಬಹಳ ನಕಾರಾತ್ಮಕ ಪರಿಣಾಮಗಳು ಉಂಟಾಗಲಿದೆ ಎನ್ನಲಾಗಿದೆ. ನೀರಾವಿಯ ವಿಘಟನೆಯಿಂದ ರೂಪುಗೊಂಡ ಸಾರಜನಕ ಆಕ್ಸೈಡ್ ಗಳು ಮತ್ತು ರಾಸಾಯನಿಕಗಳು ಓಜೋನ್ ಅನ್ನು ಆಮ್ಲಜನಕವನ್ನಾಗಿ ಪರಿವರ್ತಿಸುತ್ತದೆ. ಇದರಿಂದ ಭೂಮಿಯ ಮೇಲಿನ ಜೀವಿಗಳನ್ನು ನೇರಳಾತೀತ ಕಿರಣಗಳಿಂದ ರಕ್ಷಿಸುವ ಓಜೋನ್ ಪದರದ ಗಾತ್ರ ಕಡಿಮೆಯಾಗಿ, ಭೂಮಿಯ ಮೇಲಿನ ಜೀವಿಗಳ ಜೀವನಕ್ಕೆ ಕುತ್ತು ಸಂಭವಿಸಲಿದೆ. ನೀರಾವಿಯು ವಾಯುಮಂಡಲದಲ್ಲಿ ಮೋಡಗಳನ್ನು ಸೃಷ್ಟಿಸುವುದು ಆದರೆ ಈ ಪ್ರಕ್ರಿಕೆಯಗಳಿಂದ ಅದರ ವೇಗವು ಹೆಚ್ಚುತ್ತದೆ.
ಅಂತರಿಕ್ಷ ಪರ್ಯಟನೆಯಿಂದ ಹವಾಮಾನ ಪರಿವರ್ತನೆಯಿಂದಾಗಿ ಸಿಓ ಟು ನಿಂದಾಗಿ ವಾತಾವರಣದಲ್ಲಿ ಉಷ್ಣತೆ ಏರಿ ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುತ್ತದೆ. ವಾತಾವರಣದಲ್ಲಿ ತಂಪು ಕೂಡಾ ಮೂಡಬಹುದು ಏಕೆಂದರೆ ನೀರಾವಿಯಿಂದ ಉಂಟಾದ ಮೋಡಗಳು ಸೂರ್ಯನ ಶಾಖವನ್ನು ತಡೆದು ಹಿಂದೆ ಕಳುಹಿಸುತ್ತದೆ. ಅಲ್ಲದೇ ಒಂದು ಮಟ್ಟದ ಶಾಖವನ್ನು ಓಜೋನ್ ಹೀರಿಕೊಳ್ಳುತ್ತದೆ. ಅದರಿಂದ ವಾಯುಮಂಡಲ ಬೆಚ್ಚಗಿರುತ್ತದೆ. ರಾಕೆಟ್ ನ ಉಡಾವಣೆ ಯಿಂದ ವಾತಾವರಣದ ಮೇಲೆ ಆಗುವ ಸಮಗ್ರ ಪರಿಣಾಮದ ಕುರಿತಾಗಿ ತಿಳಿಯಲು ಒಂದು ಸಂಕೀರ್ಣವಾದ ಅಧ್ಯಯನದ ಅವಶ್ಯಕತೆ ಇದೆ ಎನ್ನಲಾಗಿದೆ. ಅಲ್ಲದೇ ಇದರಿಂದ ಬಾಹ್ಯಾಕಾಶ ಪ್ರವಾಸೋದ್ಯಮ ಉದ್ಯಮವು ಹೇಗೆ ಅಭಿವೃದ್ಧಿಗೊಳ್ಳುತ್ತದೆ ಎಂಬುದನ್ನು ತಿಳಿದುಕೊಳ್ಳಲು ಸಹಾ ಸಹಕಾರಿಯಾಗಲಿದೆ.
ವರ್ಜಿನ್ ಗ್ಯಾಲಕ್ಟಿಕ್ ನ ಪ್ರತಿವರ್ಷವೂ ವಿಶೇಷ ಅನುಮತಿಯನ್ನು ಪಡೆಯುವ ಹಾಗೂ ಈ ಪ್ರವಾಸದ ಖರ್ಚನ್ನು ಭರಿಸುವ ಸಾಮರ್ಥ್ಯ ಉಳ್ಳವರಿಗಾಗಿ ನಾನೂರು ಬಾಹ್ಯಕಾಶ ವಿಮಾನಗಳನ್ನು ಸಿದ್ಧಪಡಿಸಲಿದ್ದಾರೆ ಎನ್ನಲಾಗಿದೆ. ಬ್ಲೂ ಒರಿಜನ್ ಮತ್ತು ಸ್ಪೇಸ್ ಎಕ್ಸ್ ಮಾತ್ರ ಇನ್ನೂ ತಮ್ಮ ಯೋಜನೆಗಳ ಕುರಿತಾಗಿ ಯಾವುದೇ ಘೋಷಣೆಯನ್ನು ಮಾಡಿಲ್ಲ. ಆದರೆ ವಿಶ್ವ ಮಟ್ಟದಲ್ಲಿ ಪ್ರಸ್ತುತ ವರ್ಷಕ್ಕೆ ನೂರಕ್ಕಿಂತ ಅಧಿಕ ರಾಕೆಟ್ ಗಳ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯ ಇಲ್ಲ ಎನ್ನಲಾಗಿದೆ. ಇದರಿಂದ ವಾತಾವರಣದ ಮೇಲೆ ಆಗುವ ಹಾನಿಕಾರಕ ಪರಿಣಾಮಗಳನ್ನು ತಪ್ಪಿಸಬಹುದಾಗಿದೆ.
ಉಡಾವಣೆಯ ಅವಧಿಯಲ್ಲಿ ರಾಕೆಟ್ ಯುಕೆಯ ಅತಿ ದೊಡ್ಡ ಥರ್ಮಲ್ ವಿದ್ಯುತ್ ಸ್ಥಾವರ ಡ್ರಾಂಕ್ಗೆ ಹೋಲಿಸಿದರೆ ರಾಕೆಟ್ ನಾಲ್ಕರಿಂದ ಹತ್ತು ಹೆಚ್ಚು ನೈಟ್ರೋಜನ್ ಆಕ್ಸೈಡ್ ಅನ್ನು ಹೊರಸೂಸುತ್ತದೆ.
ಬಾಹ್ಯಾಕಾಶ ಪ್ರವಾಸದ ವೇಳೆಯಲ್ಲಿ ನಾಲ್ಕು ಜನ ಪ್ರಯಾಣಿಕರಿಗೆ ದೀರ್ಘಕಾಲದ ಪ್ರಯಾಣದಲ್ಲಿ ಸಿಓ ಟು ಬಿಡುಗಡೆಯು ಪ್ರತಿ ಪ್ರಯಾಣಿಕನಿಗೆ ಒಂದರಿಂದ ಮೂರು ಟನ್ ಪ್ರಮಾಣದಲ್ಲಿ 50 ರಿಂದ 100 ಪಟ್ಟು ಹೆಚ್ಚಾಗಿರುತ್ತದೆ. ಅಂತರರಾಷ್ಟ್ರೀಯ ನಿಯಮಾವಳಿಗಳ ಪ್ರಕಾರ ಹೊಸ ಉದ್ಯಮದ ಜೊತೆಗಿನ ಮಾಲಿನ್ಯವನ್ನು ನಿಯಂತ್ರಣ ಮಾಡುವ ಅಗತ್ಯವಿದೆ ಹಾಗೂ ಶ್ರೀಮಂತರ ಬಾಹ್ಯಾಕಾಶ ಪ್ರವಾಸದಿಂದ ಭೂಮಿ ಹಾಗೂ ವಾತಾವರಣದಲ್ಲಿ ಆಗುವ ದುಷ್ಪರಿಣಾಮ ಗಳ ಬಗ್ಗೆ ಅರ್ಥ ಮಾಡಿಕೊಳ್ಳಬೇಕಾದ ಅಗತ್ಯ ಕೂಡಾ ಇದೆ.