ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ‘ಈ’ ತಿಂಗಳುಗಳಲ್ಲಿ ಜನಿಸಿದ ಹೆಣ್ಣು ಮಕ್ಕಳು ಇರುತ್ತಾರೆ ಸಾಕ್ಷಾತ ಲಕ್ಷ್ಮಿಯ ರೂಪ! ಹುಟ್ಟಿನಿಂದಲೇ ರಾಜಯೋಗ ಹೊಂದಿರುತ್ತಾರೆ!

ಒಂದು ಸಮಯದಲ್ಲಿ ಪೋಷಕರು ಬರಿ ಗಂಡು ಮಗುವಿಗಾಗಿಯೇ ಪರಿತಪಿಸುತ್ತಿದ್ದರು. ಕಾಲ ಬದಲಾದಂತೆ ವ್ಯಕ್ತಿಯ ವಿಚಾರಗಳು ಸಹ ಬದಲಾಗುತ್ತಾ ಬಂದವು. ಆಗ ಹೆಚ್ಚಿನ ಪ್ರತಿಶತ ಪೋಷಕರು ತಮ್ಮ ವಂಶ ಅಥವಾ ಕುಲವನ್ನು ಮುಂದೆ ಒಯ್ಯಲು ವಂಶೋದ್ಧಾರಕನಿಗಾಗಿ ಅನೇಕ ವ್ರತಗಳನ್ನು ಸಹ ಮಾಡುತ್ತಿದ್ದರು.

ಅವಿಭಕ್ತ ಕುಟುಂಬದಲ್ಲಿ ಅಂತೂ ಅತ್ತೆ ಮಾವಂದಿರು ತಮ್ಮ ಸೊಸೆಯಿಂದ ಗಂಡು ಮಗುವನ್ನೇ ಆಶಿಸುತ್ತಿದ್ದರು. ಒಂದು ವೇಳೆ ಹೆಣ್ಣು ಮಗು ಆದರೆ ಸೊಸೆಗೆ ತುಂಬಾ ಪೀಡಿಸುತ್ತಿದ್ದರು. ಎಲ್ಲಿಯವರೆಗೆ ಗಂಡುಮಗು ಹುಟ್ಟುವುದಿಲ್ಲ ಅಲ್ಲಿಯವರೆಗೆ ಗರ್ಭಿಣಿಯಾಗುತ್ತಲೇ ಇರುವ ಕಷ್ಟಕರ ಪ್ರಸಂಗ ಎಷ್ಟೋ ಜನ ಮಹಿಳೆಯರು ಅನುಭವಿಸಿದ್ದಾರೆ.

ಅದಕ್ಕೆ ಹೋಲಿಸಿದಾಗ ಸದ್ಯ ಸುಶಿಕ್ಷಿತ ಕುಟುಂಬಗಳಲ್ಲಿ ಈ ವಿಚಾರಗಳಲ್ಲಿ ಬದಲಾವಣೆ ಕಂಡುಬರುತ್ತಿದೆ. ಆದರೂ ಸಹ ಪರಿಪೂರ್ಣವಾಗಿ ಜನರ ವಿಚಾರ ಇನ್ನು ಬದಲಾಗಬೇಕಿದೆ.

ಹುಡುಗಿಯರು ಹುಟ್ಟಿದರೆ ಮನೆಗೆ ಸಾಕ್ಷಾತ್ ಲಕ್ಷ್ಮಿಯೆ ಬಂದಿದ್ದಾಳೆಂದು ತಿಳಿದುಕೊಳ್ಳುವ ಪೋಷಕರು ಸಹ ನಮ್ಮ ಸಮಾಜದಲ್ಲಿದ್ದಾರೆ. ಎಷ್ಟೋ ಜನರು ಹುಡುಗಿಯನ್ನು ಹೆತ್ತುವ ಸಲುವಾಗಿ ಗಂಡುಮಕ್ಕಳನ್ನು ಹೆತ್ತಿರುವ ಉದಾಹರಣೆ ಕೇಳಿದ್ದೇವೆ. ತಂದೆ ತಾಯಿಗೆ ಗಂಡು ಮಕ್ಕಳಿಗಿಂತ ಹೆಣ್ಣು ಹುಡುಗಿಯರು ಹೆಚ್ಚು ಪ್ರೀತಿ ಮತ್ತು ಒಲವನ್ನು ತೋರಿಸುತ್ತಾರೆ.

ಹೀಗಾಗಿ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷ ಸ್ಥಾನವಿದೆ. ಹೆಣ್ಣು ಹುಡುಗಿ ಜನಿಸಿದರೆ ಸಾಕ್ಷಾತ್ ಲಕ್ಷ್ಮಿಯಂತೆ ಭಾವಿಸುತ್ತಾರೆ, ಮತ್ತು ಅವರು ಹಾಗೆ ಇರುತ್ತಾರೆಯೂ ಸಹ. ಕೆಲವು ಹೆಣ್ಣು ಮಕ್ಕಳು ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕೆಲವೊಂದು ವಿಶೇಷ ತಿಂಗಳುಗಳಲ್ಲಿ ಜನಿಸಿದರೆ ಅವರ ಭಾಗ್ಯ ಇನ್ನಷ್ಟು, ಮತ್ತಷ್ಟು ಮಿನುಗುತ್ತದೆ. ಅವರು ಹುಟ್ಟಿನಿಂದಲೇ ರಾಜಯೋಗವನ್ನು ಪಡೆದುಕೊಂಡು ಬಂದಿರುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಪ್ರತಿಯೊಂದು ವ್ಯಕ್ತಿಗೆ ಬೇರೆ ಬೇರೆ ವಿಷಯಗಳಲ್ಲಿ ಅಭಿರುಚಿಗಳು ಇರುತ್ತವೆ. ಹಾಗೆ ಬೇರೆ ಬೇರೆ ಶಾಸ್ತ್ರಗಳಲ್ಲಿ ಅಭಿರುಚಿ ಇರುತ್ತದೆ. ಜ್ಯೋತಿಷ್ಯಶಾಸ್ತ್ರದಲ್ಲಿ ಅನೇಕರು ವಿಶ್ವಾಸವುಳ್ಳವರಾಗಿರುತ್ತಾರೆ. ತಮ್ಮ ಜೀವನದ ಪ್ರತಿಯೊಂದು ಏರಿಳಿತಗಳನ್ನು ಜ್ಯೋತಿಷ್ಯದ ಮುಖಾಂತರವೇ ತಿಳಿದುಕೊಳ್ಳಲು ಯತ್ನಿಸುತ್ತಿರುತ್ತಾರೆ. ಮಕ್ಕಳ ಜನ್ಮ ವಾಗುವುದು ಸಾಮಾನ್ಯ. ಆದರೆ ಹುಡುಗಿಯರು ಈ ವಿಶೇಷವಾದ ತಿಂಗಳುಗಳಲ್ಲಿ ಹುಟ್ಟಿದರೆ ಅವರು ಭವಿಷ್ಯದಲ್ಲಿ ತುಂಬಾ ಮುಂದೆ ಹೋಗುತ್ತಾರೆ ಅಥವಾ ರಾಜಯೋಗ ಪಡೆದವರಾಗಿರುತ್ತಾರೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಯಾವ ಯಾವ ತಿಂಗಳುಗಳಲ್ಲಿ ಹುಡುಗಿಯು ಹುಟ್ಟಿದರೆ ಲಾಭ ಎಂಬುದನ್ನು ನೋಡಿ.

ಫೆಬ್ರುವರಿ:- ಫೆಬ್ರವರಿ ತಿಂಗಳಲ್ಲಿ ಜನಿಸಿದ ಹೆಣ್ಣು ಮಗು ಸಾಕ್ಷಾತ್ ಲಕ್ಷ್ಮಿಯ ರೂಪ ಆಗಿರುತ್ತಾಳೆ. ಏಕೆಂದರೆ ಈ ಸಮಯದಲ್ಲಿ ಗ್ರಹಗಳ ಗತಿ ಹುಡುಗಿಯ ಜೀವನದಲ್ಲಿ ರಾಜಯೋಗವನ್ನು ತರುತ್ತದೆ. ಹೀಗಾಗಿ ಈ ತಿಂಗಳಲ್ಲಿ ಹುಟ್ಟಿದ ಹುಡುಗಿಯರು ತುಂಬಾ ಭಾಗ್ಯವಂತರು ಇರುತ್ತಾರೆ. ಅಷ್ಟೇ ಅಲ್ಲ ಮದುವೆಯ ನಂತರವೂ ಇವರ ಜೀವನದಲ್ಲಿ ಸುಖ ಸಮೃದ್ಧಿ ಯಾವತ್ತು ತುಂಬಿರುತ್ತದೆ.

ಎಪ್ರಿಲ್:- ಈ ತಿಂಗಳಲ್ಲಿ ಜನಿಸಿದ ಹುಡುಗಿಯರ ಕುಂಡಲಿಯಲ್ಲಿಯ ಗ್ರಹಗಳ ಗತಿ ಆ ಹುಡುಗಿಯ ಜೀವನದ ಭಾಗ್ಯೋದಯದ ಕಿರಣಗಳನ್ನು ತರುತ್ತವೆ. ಹೀಗಾಗಿ ಇವರ ಜೀವನದಲ್ಲಿ ಯಾವತ್ತು ಹಣಕ್ಕೆ ಬರ ಇರುವದಿಲ್ಲ. ಸಂಗಾತಿಯ ಜೊತೆಗೆ ಮದುವೆಯಾದ ನಂತರ ಗಂಡನ ಮನೆಯು ಸಹಿತ ಬೆಳೆಯುತ್ತ ಹೋಗುತ್ತದೆ.

ಜೂನ್:- ಜ್ಯೋತಿಷ್ಯಶಾಸ್ತ್ರದ ಪ್ರಕಾರ ಜೂನ್ ತಿಂಗಳಲ್ಲಿ ಹುಟ್ಟುವ ಹುಡುಗಿಯ ಅದೃಷ್ಟವು ಸಂಪತ್ತಿನಿಂದ ಕೂಡಿರುತ್ತದೆ. ಯಾರ ಮನೆಯಲ್ಲಿ ಈ ಸಮಯದಲ್ಲಿ ಹುಡುಗಿಯ ಜನ್ಮವಾಗುತ್ತದೆಯೋ ಆ ಮನೆ ಮೇಲೆ ಲಕ್ಷ್ಮಿಯ ಕೃಪಾ ಕಟಾಕ್ಷ ಸದಾ ಇರುತ್ತದೆ. ಹೀಗಾಗಿ ಈ ತಿಂಗಳಲ್ಲಿ ಯಾರ ಮನೆಯಲ್ಲಿ ಹುಡುಗಿಯ ಜನ್ಮವಾಗುತ್ತೋ ಆ ಮನೆ ಹುಣ್ಣಿಮೆಯ ಚಂದ್ರನಂತೆ ಏರುತ್ತಲೇ ಹೋಗುತ್ತದೆ. ಅಷ್ಟೇ ಅಲ್ಲ ಈ ಹುಡುಗಿಯರು ತುಂಬಾ ಪ್ರಯತ್ನಶೀಲರು ಆಗಿರುತ್ತಾರೆ.

ಸಪ್ಟೆಂಬರ್:- ಈ ತಿಂಗಳಲ್ಲಿ ಜನಿಸಿದ ಹುಡುಗಿಯ ಕುಂಡಲಿಯಲ್ಲಿ ಚಂದ್ರ ಬುಧ ಮತ್ತು ಶುಕ್ರ ಮೂರು ಗ್ರಹಗಳ ಮಿಲನವಾಗಿರುತ್ತದೆ. ಈ ಕಾರಣದಿಂದಾಗಿ ಈ ತಿಂಗಳಲ್ಲಿ ಹುಟ್ಟಿದ ಹುಡುಗಿಯರು ತುಂಬಾ ಭಾಗ್ಯಶಾಲಿ ಮತ್ತು ಶ್ರೀಮಂತರಾಗಿರುತ್ತಾರೆ. ಈ ಹುಡುಗಿಯರಿಗೆ ಯಾವುದೇ ರೀತಿಯ ಅಭಾವವಿರುವುದಿಲ್ಲ. ಇವರ ಮದುವೆಯೂ ಐಶ್ವರ್ಯದಿಂದ ತುಂಬಿ ತುಳುಕುವ ಮನೆಯಲ್ಲಿಯೇ ಆಗುತ್ತದೆ.

ಪ್ರಸ್ತುತ ಮಾಹಿತಿಯನ್ನು ಯಾವುದೇ ರೀತಿಯ ಅಂಧಶ್ರದ್ಧೆಯನ್ನು ಬೆಳೆಸಲು ಅಥವಾ ಅದನ್ನು ಪೋಷಿಸಲು ಹಾಗೂ ಪಸರಿಸುವ ಸಲುವಾಗಿ ನೀಡಿಲ್ಲ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕಂಡುಬಂದ ಮಾಹಿತಿಯನ್ನು ನಿಮಗೆ ಪರಿಚಯಿಸುತ್ತಿದ್ದೇವೆ ಅಷ್ಟೇ. ಹಾಗಾಗಿ ಈ ಲೇಖನದಲ್ಲಿ ನೀಡಿದ ಈ ಮಾಹಿತಿಯ ಬಗ್ಗೆ ದಯವಿಟ್ಟು ಯಾರೂ ಅಪಾರ್ಥ ಮಾಡಿಕೊಳ್ಳಬಾರದು.