ಝೂಮ್ ಮಾಡಿ ಉತ್ತರ ಹೇಳಿ ನೋಡೋಣ; ಈ ಚಿತ್ರದಲ್ಲಿ ಎಷ್ಟು ಆನೆಗಳು ಕಂಡುಬರುತ್ತಿವೆ?

ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವಿಶೇಷವಾದ ಫೋಟೋ ಒಂದು ವೈರಲ್ ಆಗುತ್ತಿದೆ. ಈ ಫೋಟೋ ಅನೇಕ ನೇಟಿಜನ್ಸ್ ಗಳ ತಲೆ ತಿನ್ನುತ್ತಿದೆ. ಇದೊಂದು ಕ್ವಿಜ್ ಎಂದೇ ಹೇಳಬಹುದು.

ಈ ವೈರಲ್ ಆಗುತ್ತಿರುವ ಫೋಟೋದಲ್ಲಿ ಅನೇಕ ಆನೆಗಳು ಕಂಡುಬರುತ್ತಿವೆ. ಆದರೆ ನಿಮಗೆ ಹೇಳಬೇಕಾಗಿರುವುದು ಈ ಚಿತ್ರದಲ್ಲಿ ಕಂಡುಬರುತ್ತಿರುವ ಆನೆಗಳು ಸಂಖ್ಯೆ ಎಷ್ಟು ಎಂದು. ಈ ಫೋಟೋ ನೇಟಿಜನ್ಸ್ ಗಳ ತಲೆ ತಿನ್ನುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈಲ್ಡ್ ಲೆನ್ಸ್ ಇಕೋ ಫೌಂಡೇಶನ್ ಹೆಸರಿನಿಂದ ಫೋಟೋವೊಂದನ್ನು ಟ್ವಿಟರ್ ನಲ್ಲಿ ಶೇರ್ ಮಾಡಲಾಗಿದೆ. ಶೇರ್ ಮಾಡಿದ ಈ ಫೋಟೋ ಬಗ್ಗೆ ಕ್ಯಾಪ್ಷನ್ ನಲ್ಲಿ ಮಾಹಿತಿ ನೀಡಿದ್ದಾರೆ. ಈ ಫೋಟೋ ಸರಿಯಾದ ಪದ್ಧತಿಯಲ್ಲಿ ಕ್ಯಾಪ್ಚರ್ ಮಾಡುವ ಸಲುವಾಗಿ ಒಟ್ಟು 1400 ಫೋಟೋಗಳನ್ನು ಕ್ಲಿಕ್ ಮಾಡಲಾಯಿತು. ಫೋಟೋದಲ್ಲಿ ಕಾಣುವ ಹಾಗೆ ಏಳು ಆನೆಗಳು ನೀರು ಕುಡಿಯುತ್ತಿವೆ. ಈ ಫ್ರೆಮ್ ನಲ್ಲಿ ನೀವು ಏಳು ಆನೆಗಳನ್ನು ನೋಡುತ್ತಿದ್ದೀರಾ? ಎಂಬ ಪ್ರಶ್ನೆ ಕೇಳಲಾಗಿದೆ. ಈ ಪ್ರಶ್ನೆಗೆ ಅನೇಕ ನೇಟಿಜನ್ಸ್ ಗಳು ಉತ್ತರ ನೀಡಲು ಪ್ರಯತ್ನಿಸಿದ್ದಾರೆ.

ಈ ಆನೆಗಳ ಫೋಟೋ ಅನೇಕ ನೇಟಿಜನ್ಸ್ ಗಳು ರಿಟ್ವೀಟ್ ಸಹ ಮಾಡಿದ್ದಾರೆ. ಕೆಲವರು ಈ ಫೋಟೋದಲ್ಲಿ ಕೇವಲ ನಾಲ್ಕೇ ಆನೆಗಳು ಇವೆ ಎಂದು ಕಾಮೆಂಟ್ ಮಾಡಿದ್ದಾರೆ. ಆನೆಗಳ ಈ ಫೋಟೋ ನೋಡಿ ನೇಟಿಜನ್ಸ್ ಗಳು ನಿಜಕ್ಕೂ ತಲೆಕೆಡಿಸಿಕೊಂಡಿದ್ದಾರೆ. ಫ್ರೆಂಡ್ಸ್ ಈಗ ನೀವು ಹೇಳಿ ಈ ಚಿತ್ರದಲ್ಲಿ ಎಷ್ಟು ಆನೆಗಳು ಕಂಡುಬರುತ್ತಿವೆ ಅಂತ.