ಟಾಟಾ ಅವರ ಕಡಿಮೆ ಬಜೆಟ್ಟಿನ ಮತ್ತು ಸುಂದರ CNG ಕಾರು; ಬುಕ್ ಮಾಡಿ ಬರೀ 5000 ₹ ಗಳಲ್ಲಿ!
ಟಾಟಾ CNG ಕಾರು:- ಪೆಟ್ರೋಲ್ ಮತ್ತು ಡೀಸೆಲ್ ಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಭವಿಷ್ಯದಲ್ಲಿ ಹೆಚ್ಚುತ್ತಿರುವ ಇಂಧನ ಬೆಲೆಯಿಂದಾಗಿ ವಾಹನ ಚಲಾಯಿಸುವುದು ಆರ್ಥಿಕವಾಗಿ ಕಷ್ಟವಾಗಲಿದೆ. ಏಕೆಂದರೆ ಇದರಿಂದ ಸರ್ವಸಾಮಾನ್ಯ ವಾಹನ ಚಾಲಕರ ಬಜೆಟ್ ದಾರಿ ತಪ್ಪಿದೆ. ಈ ಎಲ್ಲ ಕಾರಣಗಳಿಂದಾಗಿ ಇನ್ನು ಮುಂದೆ ಭವಿಷ್ಯದಲ್ಲಿ ಎಲೆಕ್ಟ್ರಿಕ್ ಮತ್ತು CNG ಮೇಲೆ ನಡೆಯುವ ಕಾರುಗಳನ್ನು ಖರೀದಿಸುವುದರ ಕಡೆಗೆ ಜನರ ಒಲವು ಕಂಡು ಬರುತ್ತಿದೆ. ಇತ್ತಿತ್ತಲಾಗಿ CNG ಕಾರುಗಳ ಡಿಮಾಂಡ್ ಹೆಚ್ಚುತ್ತಲಿದೆ.
ದೇಶದ ಅನೇಕ ದೊಡ್ಡ ಕಾರು ಕಂಪನಿಗಳು ಗ್ರಾಹಕರ ಅವಶ್ಯಕತೆಯನ್ನು ಗುರುತಿಸಿ CNG ವರ್ಜಿನ್ ಲ್ಲಿ ತಮ್ಮ ಕಾರುಗಳನ್ನು ಮಾರಾಟಕ್ಕೆ ಇಳಿಸುತ್ತಿವೆ. ದೇಶದ ದೊಡ್ಡ ಮತ್ತು ಪ್ರಮುಖ ಆಟೋ ಕಂಪನಿಯಾದ ಟಾಟಾ ಮೋಟಾರ್ಸ್ ತಮ್ಮ ಬೆಸ್ಟ್ ಸೆಲಿಂಗ್ ಹೆಚ್ ಬ್ಯಾಕ್ ಕಾರಾದ ಟಿಯಾಗೋ ಅತಿ ಶೀಘ್ರದಲ್ಲಿ CNG ವರ್ಜಿನ್ ನಲ್ಲಿ ಲಾಂಚ್ ಮಾಡುವ ತಯಾರಿಯಲ್ಲಿದೆ. ಇದಕ್ಕೂ ಮೊದಲು ಕಂಪನಿಯು ಹೊಸದಾದ Tiago CNG ಸಲುವಾಗಿ ಬುಕಿಂಗ್ ಗಳನ್ನು ಸ್ವೀಕರಿಸುವ ಕೆಲಸ ಪ್ರಾರಂಭಿಸಿದೆ. ಕೇವಲ 5 ಸಾವಿರ ರೂಪಾಯಿಗಳಲ್ಲಿ ಗ್ರಾಹಕರಿಗೆ ಬುಕಿಂಗ್ ಮಾಡಲು ಸಾಧ್ಯವಿದೆ. ಮುಂಬರುವ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಟಾಟಾ ಮೋಟರ್ಸ್ ನವರು ಟಿಯಾಗೋ CNG ಲಾಂಚ್ ಮಾಡುವ ಸಾಧ್ಯತೆ ಇದೆ.

ಈ ಕಾರಿನಲ್ಲಿರುವ ವಿವಿಧ ವೈಶಿಷ್ಟಗಳು ಹೀಗಿವೆ….
ಕೆಲವೇ ದಿವಸಗಳ ಹಿಂದೆ ಟಾಟಾ ಮೋಟರ್ಸ್ ನವರ ನೂತನ ಟಿಯಾಗೋ CNG ಕಾರು ಟೆಸ್ಟಿಂಗ್ ಸಂದರ್ಭದಲ್ಲಿ ಕಂಡುಬಂತು. ಆಗ Tata Tiago CNG ಕಾರಿನ ಫೀಚರ್ಸ್ ಮತ್ತು ಸ್ಪೆಸಿಫಿಕೇಶನ್ ಬಗ್ಗೆ ಮಾಹಿತಿ ಲೀಕ್ ಆಯ್ತು. ಆ ಪ್ರಕಾರ ಕಂಪನಿಯು ಈ ನೂತನ CNG ಕಾರು ಸದ್ಯದ ಟಿಯಾಗೋ ಕಾರಿಗಿಂತಲೂ ಬೇರೆಯಾಗಿ ಕಾಣಬೇಕೆಂದು ಹೊಚ್ಚ ಹೊಸತಾದ ಬಂಪರ್, ಕ್ರೋಮ್ ಸಹಿತ ಹೊಸದಾದ ಫ್ರಂಟ್ ಗ್ರಿಲ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಎಲ್ಇಡಿ ಡಿ ಆರ್ ಎಲ್ (LED DRL) ಮತ್ತು ಆಕರ್ಷಕ ಎಲ್ಇಡಿ ಟೇಲ್ ಲೈಟ್ಸ್ ಗಳ ಫೀಚರ್ಸ್ ಗಳನ್ನು ಕೊಟ್ಟಿದ್ದಾರೆ.
ಅದರ ಜೊತೆಗೆ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆಗೆ ಕನೆಕ್ಟ್ ಆಗುವ ಟಚ್ ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಮ್, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್, ವೈಪರ್ ಜೊತೆಗೆ ರಿಯಲ್ ಡಿಫಾಗರ್ ಹೀಗೆ ವೈಶಿಷ್ಟಗಳನ್ನು ಈ ಕಾರಿನಲ್ಲಿ ನೀಡಿದ್ದಾರೆ.
ದೊರೆತ ಮೂಲಗಳ ಪ್ರಕಾರ ಟಾಟಾ ಟಿಯಾಗೋ CNG ಯಲ್ಲಿ (Tata Tiago CNG) 1.2 ಲೀಟರ್ ಪೆಟ್ರೋಲ್ ಇಂಜಿನ್ ನೀಡುವ ಸಾಧ್ಯತೆ ಇದೆ. ಈ ಇಂಜಿನ್ 85 BHP ಪವರ್ ಮತ್ತು 113 ಎನ್ಎಂ ಟಾರ್ಕ್ ಜನರೇಟ್ ಮಾಡುತ್ತದೆ. ಇಂಜಿನ್ ಜೊತೆಗೆ 5 ಸ್ಪೀಡ್ ಮ್ಯಾನುಅಲ್ ಮತ್ತು 5 ಸ್ಪೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಪ್ಶನ್ ನೀಡಲಾಗಿದೆ. ಮಾರ್ಕೆಟ್ ನಲ್ಲಿ ಸದ್ಯ ಮಾರಾಟವಾಗುತ್ತಿರುವ ಟಿಯಾಗೋ ಈ ಸೆಗ್ಮೆಂಟ್ ನಲ್ಲಿಯ ಎಲ್ಲಕ್ಕೂ ಹೆಚ್ಚು ಸುರಕ್ಷಿತವಾದ ಕಾರ್ ಆಗಿದೆಯೆಂದು ಕಂಪನಿಯು ದಾವೆ ಮಾಡಿದೆ.

ಮಾರ್ಕೆಟ್ ನಲ್ಲಿ ಮಾರಾಟವಾಗುತ್ತಿರುವ Tata Tiago ಕಾರಿಗೆ NCAP ಗ್ಲೋಬಲ್ ಕ್ರಾಸ್ ಟೆಸ್ಟಿಂಗ್ ನಲ್ಲಿ ಈ ಕಾರಿಗೆ 4 ಸ್ಟಾರ್ ರೇಟಿಂಗ್ ಸಿಕ್ಕಿದೆ. ಈ ಕಾರಿನಲ್ಲಿ ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ (EBD) ಮತ್ತು ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ (ABS), ರಿಅರ್ ಪಾರ್ಕಿಂಗ್ ಸೆನ್ಸರ್, ಡುಯಲ್ ಫ್ರಂಟ್ ಏರ್ಬ್ಯಾಗ್, ಸ್ಪೀಡ್ ಅಲರ್ಟ್ ಸಿಸ್ಟಮ್ ಮತ್ತು ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್ ರೀತಿಯ ಅನೇಕ ವೈಶಿಷ್ಟ್ಯಗಳನ್ನು ಕೊಟ್ಟಿದ್ದಾರೆ.