ಟಾಟಾ ಪಂಚ್ ಡೆಲಿವರಿ ಸಂದರ್ಭದಲ್ಲಿ ಆಯಿತು ದೊಡ್ಡ ತಪ್ಪು! ಕ್ಷಣದಲ್ಲಿ ಹೊಸ ಗಾಡಿ ಹೇಗಾಯಿತು ಡಕೋಟ ನೋಡಿ ಈ ವಿಡಿಯೋ…
ಯಾರಿಗೆ ಆಗಲಿ ಕೈಯಲ್ಲಿ ಹೊಸ ಕಾರಿನ ಕೀ ಬಂದರೆ ಆಗುವ ಸಂತೋಷ ಅಷ್ಟಿಷ್ಟಲ್ಲ. ತಮ್ಮ ಹೊಸ ಕಾರಿನ ಡಿಲೆವರಿ ತೆಗೆದುಕೊಳ್ಳುವಾಗ ಗ್ರಾಹಕರು ತುಂಬಾ ಎಕ್ಸೈಟ್ಮೆಂಟ್ ನಲ್ಲಿ ಇರುತ್ತಾರೆ. ಹೀಗಾಗಿ ಅನೇಕ ಸಲ ಅತಿಯಾದ ಎಕ್ಸೈಟ್ಮೆಂಟ್ ನಿಂದ ಅನಿರೀಕ್ಷಿತವಾದ ಘಟನೆಗಳು ನಡೆದು ಹೋಗುತ್ತವೆ. ಇದೇ ರೀತಿಯ ಒಂದು ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬಹುಶಃ ಎಲ್ಲರಿಗೂ ಗೊತ್ತಿರುವ ಹಾಗೆ ಟಾಟಾ ಮೋಟರ್ಸ್ ಕಂಪನಿಯು ಇದೀಗ ಮೈಕ್ರೋ ಎಸ್ ಯು ವಿ ಸೆಗ್ಮೆಂಟ್ ನಲ್ಲಿ ಎಂಟ್ರಿ ಮಾಡಿದೆ. ಪಂಚ್ ಒಂದು ಚಿಕ್ಕ ಕಾಂಪ್ಯಾಕ್ಟ್ ಮತ್ತು ಆಫ್-ರೋಡಿಂಗ್ ಕಾರಾಗಿದೆ. ಗ್ಲೋಬಲ್ ಎನ್ಸಿಎಪಿ ಕ್ರ್ಯಾಷ್ ಟೆಸ್ಟಿಂಗ್ ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದಿದೆ. ಆದರೆ ಈ ಕಾರಿನ ಡಿಲೆವರಿ ಸಂದರ್ಭದಲ್ಲಿ ನಡೆದ ಘಟನೆಯೊಂದು ವೈರಲ್ ಆಗಿದೆ.
ಡೆಲಿವರಿ ಸಂದರ್ಭದಲ್ಲಿ ಏನಾಯಿತು?
ಒಂದು ಶೋರೂಮ್ ನಿಂದ ಟಾಟಾ ಪಂಚ್ ಕಾರನ್ನು ಡಿಲೆವರಿ ತೆಗೆದುಕೊಳ್ಳುವಾಗ ಕಾರಿನ ಮಾಲಿಕ ತಾನು ನಡೆಸುವಾಗ ನಿಯಂತ್ರಣ ತಪ್ಪಿ ಎದುರಿನ ಗೋಡೆಗೆ ಡಿಕ್ಕಿ ಹೊಡೆದಿದ್ದಾನೆ. ಒಬ್ಬ ಯುಜರ್ ಯೂಟ್ಯೂಬ್ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದಾನೆ. ಪ್ರಾರಂಭದಲ್ಲಿ ಕಾರು ಮಾಲೀಕ ಡ್ರೈವರ್ ಸೀಟಿನ ಮೇಲೆ ಕುಳಿತಿದ್ದಾನೆ. ಮತ್ತು ಶೋರೂಮ್ ನ ಅಧಿಕಾರಿ ಹ್ಯಾಂಡ್ ಓವರ್ ಫೋಟೋ ಸಲುವಾಗಿ ಬದಿಗೆ ನಿಂತಿದ್ದಾನೆ.
ಶೋರೂಮ್ ನ ವ್ಯಕ್ತಿಯೊಬ್ಬ ಕಾರಿನ ಬಗ್ಗೆ ಮಾಹಿತಿ ಹೇಳುತ್ತಿರುವುದು ಕಂಡುಬರುತ್ತಿದೆ. ಅದೇ ಸಂದರ್ಭದಲ್ಲಿ ಕಾರು ರ್ಯಾಂಪ್ ನಿಂದ ಸ್ವಲ್ಪವೇ ಮುಂದೆ ಹೋಗುತ್ತದೆ. ಆಗ ಕಾರಿನ ಮಾಲೀಕ ಸ್ವಲ್ಪ ಹ್ಯಾಂಡಲ್ ಮಾಡುತ್ತಾನೆ. ನಂತರ ಕೆಲವೇ ಕ್ಷಣಗಳಲ್ಲಿ ಕಾರು ತಪ್ಪಾದ ಲೈನ್ ಹಿಡಿದು ಮುಂದೆ ಹೋಗಲು ಶುರು ಮಾಡುತ್ತದೆ. ಕಾರನ್ನು ಬಲಬದಿಗೆ ಟರ್ನ್ ಮಾಡಿಕೊಂಡು ಹೋಗುವ ಬದಲು ಎಡಗಡೆಗೆ ತಿರುಗಿಕೊಂಡು ಹೋಗಿ ಗೋಡೆಗೆ ಡಿಕ್ಕಿ ಹೊಡೆದಿದ್ದಾನೆ. ಕಾರು ಮಾಲೀಕನ ಅದೃಷ್ಟ ಚೆನ್ನಾಗಿತ್ತು ಮುಂದೆ ಒಂದು ಆಡಿ ಕಾರು ಸಹ ನಿಂತಿತ್ತು. ಅದಕ್ಕೆ ಹೋಗಿ ಡಿಕ್ಕಿ ಹೊಡೆದಿಲ್ಲ. ಇಲ್ಲವಾದರೆ ಅದರ ಖರ್ಚು ಸಹಿತ ಈತನೇ ಭರಿಸಬೇಕಾಗಿತ್ತು.