ಟಾಪ್ ಲೆಸ್ ಮಹಿಳೆ Live ಪಂದ್ಯದಲ್ಲಿಯೇ ನುಗ್ಗಿದಳು ಮೈದಾನದಲ್ಲಿ! ಆ ಫೋಟೋ ಮತ್ತು ವಿಡಿಯೋದೇ ಚರ್ಚೆ ಸದ್ಯ ಜಗತ್ತಿನ ತುಂಬಾ…

ಯಾವುದೇ ಆಟದ ಮೈದಾನದಲ್ಲಿ ಆಟದ ಮಜಾ ಎಲ್ಲ ರೀತಿಯ ಬೇಲಿ, ಸೀಮೆ ದಾಟಿ ಹೋಗಿರುತ್ತದೆ. ಅಲ್ಲಿ ಪ್ರತಿಯೊಂದು ನಡೆಯುವ ಘಟನೆಗಳು ಸರಿಯಾದ ನಿಯಮಗಳಲ್ಲಿ ಮತ್ತು ಮರ್ಯಾದೆಯಲ್ಲಿ ಇದ್ದರೆನೇ ಆಟದ ಪ್ರತಿಷ್ಠೆ, ಘನತೆ ಸರಿಯಾಗಿ ಉಳಿದುಕೊಳ್ಳಲು ಸಾಧ್ಯ. ಮರ್ಯಾದೆ ದಾಟಿ ಏನಾದರೂ ವ್ಯವಹಾರಗಳು ಆಟದ ಮೈದಾನದಲ್ಲಿ ನಡೆದಾಗ ಅದರ ಚರ್ಚೆ ಎಲ್ಲ ಕಡೆಗೂ ನಡೆಯಲು ಶುರುವಾಗುತ್ತದೆ. ಆಸ್ಟ್ರೇಲಿಯಾದಲ್ಲಿ ನಡೆದ ರಗ್ಬಿ ಪಂದ್ಯದಲ್ಲಿ ಮಹಿಳೆಯೊಬ್ಬಳು ನಡೆದುಕೊಂಡ ರೀತಿ ಸದ್ಯ ಜಗತ್ತಿನ ತುಂಬ ಚರ್ಚೆಗೆ ಕಾರಣವಾಗಿದೆ.

ಭಾರತದಲ್ಲಿ ನಡೆಯುವ ಕ್ರಿಕೆಟ್ ಪಂದ್ಯಗಳಲ್ಲಿ ಅಭಿಮಾನಿಗಳು ಮೈದಾನದಲ್ಲಿ ಅನೇಕ ಸಲ ಪ್ರವೇಶಿಸುತ್ತಾರೆ. ಆಟಗಾರ ಜೊತೆಗೆ ಫೋಟೋ ತೆಗೆದುಕೊಳ್ಳಲು ಮತ್ತು ಅವರಿಗೆ ಕೈಕುಲುಕಿಸಲು ಜೊತೆಗೆ ಕಾಲುಗಳನ್ನು ಸ್ಪರ್ಶಿಸಿ ನಮಸ್ಕರಿಸಲು ಪ್ರಯತ್ನಿಸುತ್ತಿರುತ್ತಾರೆ, ಇದು ಸಾಮಾನ್ಯ. ಆದರೆ ಆಸ್ಟ್ರೇಲಿಯಾದ ಆಟದ ಮೈದಾನದಲ್ಲಿ ಮಹಿಳೆಯೊಬ್ಬಳು ತುಂಬಾ ವಿಚಿತ್ರವಾಗಿ ವರ್ತಿಸಿದ್ದಾಳೆ. ಅಲ್ಲಿ ನಡೆದ ರಗ್ಬಿ ಪಂದ್ಯದಲ್ಲಿ ಮಹಿಳೆಯೊಬ್ಬಳು ಟಾಪ್ ಲೆಸ್ ಆಗಿ ನೇರ ಮೈದಾನದಲ್ಲಿಯೇ ನುಗ್ಗಿ ಬಂದಿದ್ದಾಳೆ. ಈ ಕಾರಣದಿಂದಾಗಿ ಆಟವನ್ನು ಸ್ವಲ್ಪ ಸಮಯ ಮಧ್ಯದಲ್ಲಿಯೇ ನಿಲ್ಲಿಸಬೇಕಾಯಿತು. Gold Coast Titans ಮತ್ತು Parramatta Eels ಈ ಎರಡು ತಂಡಗಳಲ್ಲಿ ಪಂದ್ಯ ನಡೆಯುತ್ತಿದ್ದಾಗ ಪ್ರೇಕ್ಷಕರಲ್ಲಿಯ ಮಹಿಳೆಯೊಬ್ಬಳು ಮೈದಾನದಲ್ಲಿ ಪ್ರವೇಶಿಸಿದಳು. ಈ ದೃಶ್ಯ ನೋಡಿದ ಜನರು ಒಮ್ಮೆಲೆ ಆಶ್ಚರ್ಯವನ್ನು ವ್ಯಕ್ತ ಮಾಡಿದರು. ಪ್ರಸ್ತುತ ಮಹಿಳೆಯ ಹೆಸರು ಜಾವೋನ್ ಜೋಹಾನ್ಸನ್ ಎಂದು ತಿಳಿದುಬಂದಿದೆ.

ಜಾವೋನ್ ಳು ಮೈದಾನದಲ್ಲಿ ಪ್ರವೇಶ ಮಾಡುತ್ತಿದ್ದಂತೆ ಸೆಕ್ಯೂರಿಟಿ ಗಾರ್ಡ್ಸ್ ಗಳು ಆಕೆಯನ್ನು ಸುತ್ತುವರೆದು ಮೈದಾನದಿಂದ ಹೊರಗೆ ಕರೆದುಕೊಂಡು ಹೋದರು. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವಾದ-ಪ್ರತಿವಾದ ನಡೆದಿವೆ. ಪೊಲೀಸರು ಮತ್ತು ಸೆಕ್ಯೂರಿಟಿ ಗಾರ್ಡ್ಸ್ ಗಳು ಆಕೆಯನ್ನು ಯಾವ ರೀತಿ ಮೈದಾನದಿಂದ ಎತ್ತಿಕೊಂಡು ಹೋದರು ಆ ಪದ್ಧತಿ ತುಂಬಾ ತಪ್ಪಾಗಿತ್ತು ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಮಹಿಳೆ ನಡೆದುಕೊಂಡ ರೀತಿಯಿಂದಾಗಿ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಆಟದ ಮೈದಾನದಲ್ಲಿ ಟಾಪ್ಲೆಸ್ ಅಥವಾ ಬಟ್ಟೆ ಗಳಿಲ್ಲದೆ ಅಭಿಮಾನಿಗಳು ಬರುವುದು ಇದೇ ಮೊದಲ ಬಾರಿಯೇನಲ್ಲ. ಅನೇಕ ಸಲ ಯಾವುದಾದರೂ ವಿಷಯಗಳ ಬಗ್ಗೆ ನಿಷೇಧವನ್ನು ವ್ಯಕ್ತ ಮಾಡಲು ಈ ರೀತಿಯಾಗಿ ಪ್ರೇಕ್ಷಕರು ನಡೆದುಕೊಳ್ಳುತ್ತಾರೆ. ಆದರೆ ಜಾವೋನ್ ಜೋಹಾನ್ಸನ್ ಟಾಪ್ ಲೆಸ್ ಆಗಿರುವ ಕಾರಣ ಏನೆಂದರೆ, ಆಕೆ ತನ್ನ ಗೆಳತಿಯರಿಗೆ ಚಾಲೆಂಜ್ ನೀಡಿದ್ದಳಂತೆ. ನೀಡಿದ ಚಾಲೆಂಜ್ ಪೂರ್ಣ ಮಾಡುವ ಸಲುವಾಗಿ ಈ ಕೃತಿ ಮಾಡಿದ್ದಾಳಂತೆ. ನನ್ನ ಗೆಳತಿಯರು ನನಗೆ ಚಾಲೆಂಜ್ ನೀಡಿದ್ದರು ಅದನ್ನು ಪೂರ್ಣ ಮಾಡುವ ಸಲುವಾಗಿ ನಾನು ಈ ರೀತಿ ವರ್ತಿಸಿದ್ದೇನೆ, ಇದರಲ್ಲಿ ಸೆಕ್ಯೂರಿಟಿಗಳ ತಪ್ಪೇನು ಇಲ್ಲ ಎಂದು ಜಾವೋನ್ ಹೇಳುತ್ತಾಳೆ. ಮೈದಾನದಲ್ಲಿ ಟಾಪ್ ಲೆಸ್ ಆಗಿ ಬರುವ ಮುನ್ನ ಸ್ಟ್ಯಾಂಡ್ ನಲ್ಲಿ ಕುಳಿತಾಗ ಜಾವೋನ್ ಒಂದು ವಿಡಿಯೋ ಸಹ ಶೂಟ್ ಮಾಡಿದ್ದಳು.

ವಿಡಿಯೋ ನೋಡಿ.