ಟಾಪ್ ಸಿಂಗರ್ ನೇಹಾ ಕಕ್ಕಡ್ ಹಾಡಿಗೆ ಮೋಹಕ ನೃತ್ಯ ಸಾದರ ಪಡಿಸಿದಳು ಬಿಂದಾಸ್ ಅಕ್ಕ; ವಿಡಿಯೋ ಆಯ್ತು ವೈರಲ್.
ಸೋಶಿಯಲ್ ಮೀಡಿಯಾ ಸದ್ಯ ಎಲ್ಲ ವಯಸ್ಸಿನವರಿಗೂ ತನ್ನ ಬಲೆಯಲ್ಲಿ ಬಂಧಿಸಿಕೊಳ್ಳುತ್ತಿದೆ. ಚಿಕ್ಕವರ ಜೊತೆಗೆ ಮಧ್ಯ ಹಾಗೂ ಇಳಿವಯಸ್ಸಿನವರೂ ಇದರಲ್ಲಿ ಆಕ್ಟಿವ್ ಆಗುತ್ತಿದ್ದಾರೆ. ಅದರಲ್ಲೂ ಡಾನ್ಸ್ ವಿಷಯ ಬಂದಾಗ ಎಲ್ಲರೂ ಬಿಂದಾಸ್ ರೀಲ್ ಮಾಡಲು ಮುಂದಾಗುತ್ತಿದ್ದಾರೆ. ಸದ್ಯ ಮಹಿಳೆಯೊಬ್ಬಳು ಮಾಡಿದ ಡಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಯುವತಿಯೊಬ್ಬಳು ಬಾಲಿವುಡ್ ಟಾಪ್ ಸಿಂಗರ್ ನೇಹಾ ಕಕ್ಕಡ್ ಅವರು ಹಾಡಿದ ಹಾಡಿಗೆ ತನ್ನ ನೃತ್ಯವನ್ನು ಸಾದರ ಪಡಿಸಿದ್ದಾಳೆ. ನೇಹಾ ಕಕ್ಕಡ್ ಅವರು ರೂಪಿಸಿದ ಈ ಹಾಡು ಯೂಟ್ಯೂಬ್ ನಲ್ಲಿ ಇಲ್ಲಿಯವರೆಗೆ 18 ಮಿಲಿಯನ್ ಅಂದರೆ 1 ಕೋಟಿ 80 ಲಕ್ಷ ವೀಕ್ಷಣೆಯನ್ನು ಪಡೆದಿದೆ. ಜನರು ಈ ಹಾಡನ್ನು ಬರೀ ಕೇಳುತ್ತಿಲ್ಲ, ಈ ಹಾಡಿಗೆ reels ಮತ್ತು ಶಾರ್ಟ್ಸ್ ಸಾಹ ತಯಾರಿಸುತ್ತಿದ್ದಾರೆ. ಇದೇ ರೀತಿಯ ಒಂದು ವಿಡಿಯೋ ಇಂಟರ್ನೆಟ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದನ್ನು ನೋಡಿದ ಪ್ರತಿಯೊಬ್ಬರೂ ಇಷ್ಟಪಡುತ್ತಿದ್ದಾರೆ.
ಸದ್ಯ ಮಹಿಳೆಯೊಬ್ಬಳು ‘ಮೈನೆ ಪಾಯಲ್ ಹೈ ಛನಕಾಯಿ’ ಈ ಹಾಡಿಗೆ ಜಬರ್ದಸ್ತ್ ಡಾನ್ಸ್ ಮಾಡಿದ್ದನ್ನು ಇಲ್ಲಿ ನೋಡಬಹುದಾಗಿದೆ. ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ನಿಜಕ್ಕೂ ಧಮಾಲ್ ಮಾಡುತ್ತಿದೆ.
ಮೊದಲು ಇಲ್ಲಿ ವಿಡಿಯೋ ನೋಡಿ…
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮಹಿಳೆ ತೀರ ಬಿಂದಾಸ್ ಆಗಿ ಡಾನ್ಸ್ ಮಾಡುತ್ತಿದ್ದಾಳೆ. ಪ್ರಸ್ತುತ ಮಹಿಳೆ ಈ ಸಂದರ್ಭದಲ್ಲಿ ಕೆಂಪು ಹಾಗೂ ಕಪ್ಪು ಮಿಶ್ರಿತ ಬಣ್ಣದ ಸೀರೆಯನ್ನು ತೊಟ್ಟು ಧೂಳ್ ಎಬ್ಬಿಸಿದ್ದಾಳೆ. ಈಕೆಯ ಡಾನ್ಸ್ ನೋಡಿದಾಗ ಒಳ್ಳೊಳ್ಳೆಯ ಡಾನ್ಸರ್ ಗಳು ಸಹ ಫೇಲ್ ಆಗುತ್ತಾರೆ. ನೆಟ್ಟಿಗರಿಗೆ ಈ ಮಹಿಳೆಯ ನೃತ್ಯ ತುಂಬಾ ಇಷ್ಟವಾಗಿದೆ ಎಂದು ತಿಳಿದು ಬರುತ್ತಿದೆ. ವಿಡೀಯೋದ ಬ್ಯಾಕ್ ಗ್ರೌಂಡ್ ನೋಡಿದರೆ ತನ್ನ ಮನೆಯ ಟೆರೆಸ್ ಮೇಲೆಯೇ ಡಾನ್ಸ್ ಮಾಡಿದ್ದಾಳೆ ಎಂದು ಗೊತ್ತಾಗುತ್ತದೆ. ಪ್ರಸ್ತುತ ಮಹಿಳೆಯ ಹೆಸರು MRS ಪಾಟೀಲ್ ಇದ್ದು ಈಕೆ ಒಬ್ಬಳು ಯೂಟ್ಯೂಬರ್ ಆಗಿದ್ದಾಳೆ.
ವೀಡಿಯೋ ನೋಡಿ
View this post on Instagram
ಈಕೆಯ ವಿಡಿಯೋವನ್ನು ಸಿಂಗರ್ ನೇಹಾ ಕಕ್ಕಡ್ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ. ಅದರಲ್ಲಿ MRS ಪಾಟೀಲ್ ಸಲುವಾಗಿ ಒಂದು ಮೆಸೇಜ್ ನೀಡಿದ್ದಾರೆ. ‘ನಿಮಗೆ ಸಾಕಷ್ಟು ಪ್ರೀತಿಸುತ್ತೇನೆ, ನೀವು ಇದೇ ರೀತಿ ನಿಮ್ಮ ಜೀವನವನ್ನು ಎಂಜಾಯ್ ಮಾಡಿ’ ಎಂದಿದ್ದಾರೆ.