ಟಾಯ್ಲೆಟ್ ಸೀಟ್ ನಿಂದ ಹೊರಗೆ ಬಂತು ಮಾನಿಟರ್ ಲಿಜಾರ್ಡ್! ಮೈ ಜುಮ್ ಎನ್ನುವ ವಿಡಿಯೋ ವೈರಲ್! ನೀವೂ ನೋಡಿ….

ಕೆಲವೊಂದು ಸಲ ವ್ಯಕ್ತಿಯ ಜೊತೆಗೆ ಆಕಸ್ಮಿಕವಾಗಿ ಅನಾಹುತ ಪ್ರಸಂಗಗಳು ನಡೆದು ಹೋಗುತ್ತವೆ. ಅವುಗಳ ಬಗ್ಗೆ ಆತ ಎಂದಿಗೂ ಕನಸಿನಲ್ಲಿಯೂ ಊಹಿಸಿರುವದಿಲ್ಲ. ಇಂಥ ವಿಚಿತ್ರ ಹಾಗೂ ದಿಗ್ಭ್ರಮೆಗೊಳಿಸುವ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಗಾಳಿಯಂತೆ ಹಬ್ಬಿ ಬಿಡುತ್ತವೆ.

ಟಾಯ್ಲೆಟ್ ಸೀಟ್ ನಿಂದ ಮಾನಿಟರ್ ಲೀಜಾರ್ಡ್ ಒಂದು ಹೊರಗೆ ಬಂದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ ಜೊತೆಗೆ ಚರ್ಚೆಗೂ ಗ್ರಾಸವಾಗಿದೆ.

ವ್ಯಕ್ತಿಯೊಬ್ಬ ಟಾಯ್ಲೆಟ್ ಗೆ ಅಂತ ಹೋದಾಗ ಟಾಯ್ಲೆಟ್ ಸೀಟ್ ನ ಒಳಗಡೆ ಆತನಿಗೆ ಏನೋ ವಿಚಿತ್ರವಾಗಿ ಕಂಡಂತೆ ಭಾಸವಾಗಿದೆ. ಆಗ ಆತ ಜಾಗೃತನಾಗಿ ತದನಂತರದ ಎಲ್ಲ ದೃಶ್ಯವನ್ನು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾನೆ.

ಕಂಡು ಬಂತು ದೊಡ್ಡದಾದ ಮಾನಿಟರ್ ಲಿಜಾರ್ಡ!

ಟಾಯ್ಲೆಟ್ ಸೀಟ್ ನಲ್ಲಿ ಮೊದಲು ಲಿಜಾರ್ಡ್ ತನ್ನ ನಾಲಿಗೆಯನ್ನು ಹೊರಗೆ ಹಾಕುತ್ತದೆ. ನಂತರ ಅದು ನಿಧಾನ ನಿಧಾನ ಗತಿಯಲ್ಲಿ ಹೊರಗೆ ಬರುವ ದೃಶ್ಯ ನೋಡಿದರೆ ನೋಡುಗರ ಮೈ ಜುಮ್ ಎನ್ನುತ್ತದೆ.

ವಿಡಿಯೋ ನೋಡಿ

ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಲಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ಆಶ್ಚರ್ಯವನ್ನು ವ್ಯಕ್ತ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಶೇರ್ ಆಗುತ್ತಲೇ ಜನರು ಕಾಮೆಂಟ್ ಗಳನ್ನು ಮತ್ತು ಲೈಕ್ ಗಳನ್ನು ಮಾಡಲು ಶುರು ಮಾಡಿದ್ದಾರೆ. ಒಬ್ಬನು “ಈ ದೃಶ್ಯ ನೋಡಲು ತುಂಬಾ ಭೀತಿ ಹುಟ್ಟಿಸುವಂಥದ್ದಾಗಿದೆ” ಎಂದಿದ್ದಾನೆ. ಇನ್ನೊಬ್ಬನು “ಆ ವ್ಯಕ್ತಿಯು ಏನನ್ನೂ ಗಮನಿಸದೆ ಹಾಗೆಯೇ ಟಾಯ್ಲೆಟ್ ಸೀಟ್ ಮೇಲೆ ಕುಳಿತಿದ್ದರೆ ಹೇಗಿತ್ತು? ಬರೀ ಕಲ್ಪನೆ ಮಾಡಿ ಎಂದಿದ್ದಾನೆ.”