ಟಾಯ್ಲೆಟ್ ಹೋಗುವಾಗ ಹುಷಾರ್; ಪಾಟ್ ನ ಒಳಗಿನಿಂದ ನುಸುಳಿ ಬಂತು ವಿಷ ಸರ್ಪ! Video ನೋಡಿದಾಗ ಹುಟ್ಟುತ್ತೆ ನಡುಕ…
ಹಾವಿನ ಬಗ್ಗೆ ವಿಚಾರ ಮಾಡುವಾಗ ಮೊಟ್ಟಮೊದಲು ಹುಟ್ಟುತ್ತದೆ ಭಯ. ಹೀಗಾಗಿ ಹಾವು ಭಯ ಹುಟ್ಟಿಸುವ ಜೀವಿಯಾಗಿದೆ ಎಂದು ಬೇರೆಯಾಗಿ ಹೇಳುವ ಅವಶ್ಯಕತೆ ಇಲ್ಲ. ಅದರ ಜೊತೆಗಿನ ಯಾವುದೇ ರೀತಿಯ ಸಂಪರ್ಕ ತುಂಬಾ ಭಯಾನಕವಾಗಿರುತ್ತದೆ. ಈ ಹಾವುಗಳು ತುಂಬಾ ಇಕ್ಕಟ್ಟಾದ ಬಿಲದಲ್ಲಿ ಸೇರಿ ತಮ್ಮ ದೇಹವನ್ನು ಮುಚ್ಚಿಕೊಳ್ಳುವುದರಲ್ಲಿ ಚತುರವಾಗಿರುತ್ತವೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇಂಥದ್ದೇ ಒಂದು ದೃಶ್ಯ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಹಾವು ಕಮೋಡ್ ನಿಂದ ನುಸುಳಿ ಮೇಲೆ ಬಂದಿರುವುದು ಕಾಣುತ್ತಿದೆ.
ಪ್ರಸ್ತುತ ವಿಡಿಯೋ ನೋಡುಗರಿಗೆ ಮತ್ತು ಹಾವಿಗೆ ಹೆದರುವವರಿಗೆ ಭೀತಿ ಹುಟ್ಟಿಸುತ್ತದೆ. ಏಕೆಂದರೆ ಈ ವಿಡಿಯೋದಲ್ಲಿ ಹಾವು ಶೌಚಾಲಯದ ಪಾಟ್ ನಿಂದ ಹೊರಗೆ ಬರುತ್ತಿದೆ. ಹಾವು ಹಿಡಿಯುವ ಪರಿಣಿತ ವ್ಯಕ್ತಿ ತನ್ನ ಕೈಯಲ್ಲಿರುವ ಉಪಕರಣದಿಂದ ಹಾವನ್ನು ಶೌಚಾಲಯದ ಪಾಟ್ ನಿಂದ ಹೊರಗೆ ತೆಗೆಯುತ್ತಿದ್ದಾನೆ. ಈ ದೃಶ್ಯವನ್ನು ನೋಡುವಾಗ ಮೈ ಕಂಪಿಸುವದು ನಿಶ್ಚಿತ. ಇದೊಂದು ಕೆಟ್ಟ ಕನಸಿನಂತೆ ಭಾಸವಾಗುತ್ತದೆ. ಪ್ರಸ್ತುತ ವಿಡಿಯೋದಲ್ಲಿ ಹಾವನ್ನು ಹೊರ ತೆಗೆಯಲು ರೆಸ್ಕ್ಯೂ ಟೀಮ್ ತುಂಬಾ ಪ್ರಯತ್ನ ಮಾಡಿದೆ. ಇಲ್ಲಿ ಹಾವು ಟಾಯ್ಲೆಟ್ ನ ಸೀಟ್ ಕೆಳಗೆ ಇರುವ ಕಮೊಡ್ನಲ್ಲಿ ಅವಿತು ಕುಳಿತಿತ್ತು. ಟಾಯ್ಲೆಟ್ ನಲ್ಲಿ ಹೋದ ವ್ಯಕ್ತಿಗೆ ಒಂದು ವೇಳೆ ಹಾವು ಕಾಣಿಸದೆ ಹೋಗಿದ್ದರೆ ಏನಾಗುತ್ತಿತ್ತು ಎಂಬ ವಿಚಾರ ಮಾಡಿದರೂ ಸಹ ಭಯದಿಂದ ಮೈಗೆ ಬೆವರು ಬಿಡುತ್ತದೆ.
ನೋಡಿ ಈ ವಿಡಿಯೋ…
View this post on Instagram
ಹಾವಿನ ಈ ಖತರ್ನಾಕ್ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಘಂಟಾ ಹೆಸರಿನ ಪೇಜ್ ನಿಂದ ಶೇರ್ ಮಾಡಲಾಗಿದೆ. ಮಳೆಗಾಲದ ಈ ದಿನಗಳಲ್ಲಿ ಹಾವುಗಳು ಸಾಕಷ್ಟು ಹೊರಗೆ ಬೀಳುತ್ತವೆ. ಟಾಯ್ಲೆಟ್ ನಂತಹ ತಂಪಾದ ಸ್ಥಳಗಳಲ್ಲಿ ಅವಿತುಕೊಳ್ಳಲು ಪ್ರಯತ್ನಿಸುತ್ತವೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ ಲಕ್ಷಾವಧಿ ವೀಕ್ಷಣೆಯನ್ನು ಪಡೆದಿದೆ. ಜೊತೆಗೆ ಅನೇಕ ನೇಟಿಜನ್ಸ್ ಗಳು ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತ ಮಾಡಿದ್ದಾರೆ. ಒಬ್ಬ ಯೂಸರ್ ‘ನಾನಿದನ್ನು ಎಂದಿಗೂ ನೋಡಲಾರೆ’ ಎಂದಿದ್ದಾನೆ. ಬೇರೊಬ್ಬ ಯೂಸರ್ ‘ಎಲ್ಲರಿಗೂ ಇದೇ ರೀತಿಯ ಕನಸುಗಳು ಬೀಳುತ್ತವೆಯೇ?’ ಎಂದು ಕೇಳಿದ್ದಾನೆ.