ಟಿಕ್ ಟಾಕ್ ನ ಐಶ್ವರ್ಯ ರೈ ಅವಳ ವೀಡಿಯೊಗಳಾಗುತ್ತಿವೆ ಫುಲ್ ವೈರಲ್! ಫ್ಯಾನ್ಸ್ ಅಂತಿದ್ದಾರೆ ಇವಳಂತೂ ಸೇಮ್ ಟು ಸೇಮ್ ನಟಿಯ ಝೆರಾಕ್ಸ್ ಕಾಪಿ!

ಸದ್ಯದ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಎಷ್ಟೋ ವಿಡಿಯೋಗಳು ತುಂಬಾ ವೈರಲ್ ಆಗುತ್ತಿವೆ. ಇದೇ ರೀತಿಯ ವಿಡಿಯೋ ಒಂದು ತುಂಬಾ ವೈರಲ್ ಆಗುತ್ತಿರುವದಕ್ಕೆ ಕಾರಣ ಬೇರೇನೇ ಇದೆ. ಅದೇನೆಂದರೆ ಈ ವಿಡಿಯೋದಲ್ಲಿರುವ ಮಹಿಳೆ ಐಶ್ವರ್ಯ ರೈ ಅವರ ಝೆರಾಕ್ಸ್ ಕಾಫಿ ಇದ್ದಾರೆ. ಅಂದರೆ ಈ ಮಹಿಳೆಯ ಮುಖ ಐಶ್ವರ್ಯ ರೈ ಹಾಗೆ ಇದೆ. ಈ ಮಹಿಳೆಯು ಮಾಡಿದ ವಿಡಿಯೋದಲ್ಲಿ ಐಶ್ವರ್ಯ ರೈ 2000 ರಲ್ಲಿ ನಟಿಸಿರುವ ತಮಿಳ ಚಿತ್ರ ‘ಕಂಡುಕೊಡೈನ್ ಕಂಡುಕೊಡೈನ್’ ದ ಐಶ್ವರ್ಯ ರೈ ಅವರ ಡೈಲಾಗ್ ಗೆ ಲೀಪ್ ಸಿಂಕ್ ಮಾಡಿದ್ದಾರೆ. ಇದೊಂದು ಟಿಕ್ ಟಾಕ್ ವಿಡಿಯೋ ಆಗಿದೆ.

ಐಶ್ವರ್ಯಾ ರೈ ಬಚ್ಚನ್ ಅವರ ಈ ಪ್ರತಿರೂಪ ಮಹಿಳೆಯ ಹೆಸರು ಅಮ್ಮುಜ್ ಅಮೃತ ಇದೆ. ‘ಕಂಡುಕೋಡೈನ್ ಕಂಡುಕೋಡೈನ್’ ಚಿತ್ರದ ಮೇ 4 ರಂದು 20 ನೇ ವಾರ್ಷಿಕೋತ್ಸವದ ಆಚರಣೆಯಲ್ಲಿ ಈ ಚಿತ್ರದ ನೆನಪಿನಲ್ಲಿ ಈ ಟಿಕ್ಟಾಕ್ ವಿಡಿಯೋವನ್ನು ಮರುಸೃಷ್ಟಿಲಾಗಿದೆ. ಈ ವೀಡಿಯೊ ಟ್ವಿಟ್ಟರ್ ನಲ್ಲಿ ಹಿಟ್ ಆದ ನಂತರ ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗಿದೆ. ಈ ಚಿತ್ರವನ್ನು ನಿರ್ದೇಶಿಸಿದ್ದು ರಾಜೀವ್ ಮೆನನ್. ಐಶ್ವರ್ಯಾ ರೈ ಅವರಲ್ಲದೆ, ಅಜಿತ್ ಕುಮಾರ್ ಮತ್ತು ತಬ್ಬು ಕೂಡ ಈ ಚಿತ್ರದಲ್ಲಿದ್ದರು.

ಅಮ್ಮುಜ್ ಅಮೃತಾ ಅವರ ಇನ್ಸ್ಟಾಗ್ರಾಮ್ ಫೀಡ್ ಅವರ ಟಿಕ್ ಟಾಕ್ ವೀಡಿಯೊಗಳು ಮತ್ತು ಅವರ ಫೋಟೋಗಳಿಂದ ತುಂಬಿದೆ. ಅವರ ಅಭಿಮಾನಿಗಳು ಅವಳನ್ನು ಐಶ್ವರ್ಯಾ ರೈ ಅವರ ಝೆರಾಕ್ಸ್ ಮತ್ತು ಕಾರ್ಬನ್ ಕಾಪಿ ಪ್ರತಿ ಎಂದು ಕರೆಯುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ಐಶ್ವರ್ಯಾ ಅವರ ಅಭಿಮಾನಿಗಳು ಮರಾಠಿ ನಟಿ ಮಾನ್ಸಿ ನಾಯಕ್ ಅವರನ್ನು ಐಶ್ವರ್ಯ ರೈ ಪ್ರತಿರೂಪ ಎಂದು ಬಣ್ಣಿಸಿದ್ದರು.

ಇವರು ಸಹ ಐಶ್ವರ್ಯಾ ರೈ ಬಚ್ಚನ್ ಅವರ ಪ್ರತಿರೂಪವೇ ಆಗಿದ್ದಾರೆ.

ಮಾನ್ಸಿ ನಾಯಕ್ ಟಿಕ್ಟಾಕ್ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅಲ್ಲದೆ ಐಶ್ವರ್ಯಾ ರೈಗೆ ಸಂಬಂಧಿಸಿದ ಹಾಡುಗಳು ಮತ್ತು ಸಂಭಾಷಣೆಗಳನ್ನು ಸಿಂಕ್ ಮಾಡುತ್ತಾರೆ. ಮಾನ್ಸಿ ನಾಯಕ್ ಮಾತ್ರವಲ್ಲ, ಇರಾನಿನ ಮಾಡೆಲ್ ಮಹಾಲಘಾ ಜಬೇರಿ ಮತ್ತು ಬಾಲಿವುಡ್ ನಟಿ ಸ್ನೇಹಾ ಉಲಾಲ್ ಕೂಡ ಐಶ್ವರ್ಯಾ ರೈ ಅವರ ಪ್ರತಿರೂಪ ಎಂದೇ ಪರಿಗಣಿಸಲಾಗುತ್ತದೆ.