ಟೀಂ ಇಂಡಿಯಾ ಆಟಗಾರ ಜಸ್ಪ್ರೀತ್ ಬೂಮ್ರಾ ಜೊತೆ ದಕ್ಷಿಣದ ಖ್ಯಾತ ನಟಿಯ ಮದುವೆ? ಯಾರು ಈ ನಟಿ?
ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟ್ ಆಟಗಾರ ಫಾಸ್ಟ್ ಬೌಲರ್ ಜಸ್ಪ್ರೀತ್ ಬೂಮ್ರಾ ಇತ್ತೀಚಿಗಷ್ಟೇ ಬಿಸಿಸಿಐ ನಿಂದ ರಜೆಯನ್ನು ಪಡೆದುಕೊಂಡಿದ್ದಾರೆ. ಅವರು ರಜೆಯನ್ನು ಪಡೆದ ನಂತರ ಹೊಸ ಸುದ್ದಿಯೊಂದು ಮಾಧ್ಯಮಗಳಲ್ಲಿ ದೊಡ್ಡ ಸದ್ದನ್ನು ಮಾಡಿದೆ. ಇಷ್ಟಕ್ಕೂ ಆ ಸುದ್ದಿ ಏನು ಎನ್ನುವುದಾದರೆ ಜಸ್ಪ್ರೀತ್ ಬೂಮ್ರಾ ಅವರು ದಕ್ಷಿಣದ ಖ್ಯಾತ ನಟಿ ಅನುಪಮ ಪರಮೇಶ್ವರನ್ ಅವರನ್ನು ಮದುವೆಯಾಗಲಿದ್ದಾರೆ ಎನ್ನುವುದು. ಇಷ್ಟಕ್ಕೂ ಅನುಪಮಾ ಪರಮೇಶ್ವರನ್ ಯಾರು ಎನ್ನುವುದು ನಿಮಗೆ ತಿಳಿದಿದೆಯೇ? ಈ ನಟಿಯ ಜೊತೆಗೆ ಬೂಮ್ರಾ ಹೆಸರು ತಳಕು ಹಾಕಿಕೊಂಡಿದ್ದಾರೂ ಹೇಗೆ? ನಿಜಕ್ಕೂ ಇವರಿಬ್ಬರೂ ಮದುವೆ ಆಗಲಿದ್ದಾರೆಯೇ? ಹೀಗೆ ಅನೇಕ ಪ್ರಶ್ನೆಗಳು ಅನೇಕರಲ್ಲಿ ಹುಟ್ಟಿಕೊಂಡಿದೆ. ಕ್ರಿಕೆಟ್ ಆಟಗಾರ ಮತ್ತು ಸಿನಿಮಾ ನಟಿಯರ ನಡುವೆ ಇಂತಹ ವಿಷಯಗಳು ಆಗಾಗ ಸುದ್ದಿಯಾಗುವುದು ರೋಚಕತೆಯನ್ನು ಕೆರಳಿಸುತ್ತದೆ.
ಭಾರತೀಯ ಕ್ರಿಕೆಟ್ ತಂಡದ ವೇಗಿ ಜಸ್ಪ್ರೀತ್ ಬೂಮ್ರಾ ಅವರೊಂದಿಗೆ ವಿವಾಹವಾಗಲಿದ್ದಾರೆ ಎಂದು ಪ್ರಸ್ತುತ ದೊಡ್ಡ ಸುದ್ದಿಯಾಗಿರುವ ದಕ್ಷಿಣದ ನಟಿ ಅನುಪಮಾ ಪರಮೇಶ್ವರನ್, ದಕ್ಷಿಣ ಸಿನಿಮಾರಂಗದ ಜನಪ್ರಿಯ ನಟಿಯಾಗಿದ್ದಾರೆ. ಈ ನಟಿ ಹೆಚ್ಚು ಸಕ್ರಿಯವಾಗಿರುವುದು ತೆಲುಗು, ತಮಿಳು ಸಿನಿಮಾಗಳಲ್ಲಿ. ಇದಲ್ಲದೇ ಮಲಯಾಳಂ ಹಾಗೂ ಕನ್ನಡ ಸಿನಿಮಾದಲ್ಲಿಯೂ ಕೂಡ ಅನುಪಮಾ ಪರಮೇಶ್ವರನ್ ನಟಿಸುವ ಮೂಲಕ ಚತುರ್ಭಾಷಾ ನಟಿ ಎಂಬ ಹೆಗ್ಗಳಿಕೆಯ ಜೊತೆಗೆ ತನ್ನ ಅಂದ ಹಾಗೂ ಉತ್ತಮವಾದ ನಟನೆಯೊಂದಿಗೆ ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರನ್ನು ಮಾಡಿದ್ದಾರೆ.

ಅನುಪಮ ಪರಮೇಶ್ವರನ್ 2015 ರಲ್ಲಿ ಪ್ರೇಮಂ ಸಿನಿಮಾ ಮೂಲಕ ತಮ್ಮ ಸಿನಿ ಜರ್ನಿ ಯನ್ನು ಆರಂಭಿಸಿದರು. ತೆಲುಗಿನಲ್ಲಿ ಶರ್ವಾನಂದ್ ಜೊತೆಗೆ ನಟಿಸಿದ ಶತಮಾನಂಭವತಿ ಹಾಗೂ ಉನ್ನದಿ ಒಕ್ಕಟೇ ಜಿಂದಗಿ ಸಿನಿಮಾಗಳಲ್ಲಿ ಲೀಡ್ ರೋಲ್ ನಲ್ಲಿ ಅವರು ಕಾಣಿಸಿಕೊಂಡರು. ಈ ಎರಡೂ ಸಿನಿಮಾಗಳು ಕೂಡಾ ದೊಡ್ಡ ಯಶಸ್ಸು ಪಡೆದಿದ್ದು ಮಾತ್ರವೇ ಅಲ್ಲದೇ ಇದರಲ್ಲಿ ಅನುಪಮಾ ಅವನ ನಟನೆಯು ಜನರ ಮನಸ್ಸನ್ನು ಗೆದ್ದಿದೆ. ಈ ಸಿನಿಮಾಗಳಲ್ಲಿ ನಟಿಸುವ ಮೂಲಕ ಅನುಪಮಾ ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡರು. ಅನುಪಮಾ ಪರಮೇಶ್ವರನ್ ಸ್ಯಾಂಡಲ್ವುಡ್ ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಟಸಾರ್ವಭೌಮ ಸಿನಿಮಾದಲ್ಲಿ ಕೂಡ ಕಾಣಿಸಿಕೊಂಡಿದ್ದು ವಿಶೇಷ.
ಇನ್ನು ಭಾರತೀಯ ಕ್ರಿಕೆಟ್ ಆಟಗಾರರಲ್ಲಿ ಬಾಲಿವುಡ್ ನಾಯಕಿಯರ ಅಂದದ ಮುಂದೆ ಕ್ಲೀನ್ ಬೌಲ್ಡ್ ಆದಂತಹ ಆಟಗಾರರು ಅನೇಕರಿದ್ದಾರೆ. ಈಗ ಆ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾದ ಹೆಸರು ಜಸ್ಪ್ರೀತ್ ಬುಮ್ರಾ. ಈ ಕ್ರಿಕೆಟ್ ಆಟಗಾರ ದಕ್ಷಿಣದ ನಟಿ ಅನುಪಮಾ ಪರಮೇಶ್ವರನ್ ಅವರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿಯೊಂದು ಕೆಲವು ದಿನಗಳ ಹಿಂದೆ ಸದ್ದಾಗಿತ್ತು. ಆಗ ನಟಿ ಅನುಪಮಾ ಪರಮೇಶ್ವರನ್ ತಾನೇ ಸ್ವತಃ ಈ ಸುದ್ದಿಯನ್ನು ಶಾಂತವಾಗಿಸುವ ಪ್ರಯತ್ನವನ್ನು ಮಾಡಿದ್ದರು. ಇನ್ನು ಬೂಮ್ರಾ ಹಾಗೂ ಅನುಪಮಾ ಪರಮೇಶ್ವರನ್ ಅವರ ಡೇಟ್ ವಿಚಾರ ಸುದ್ದಿಯಾಗಿದ್ದು ಹೇಗೆ ಎನ್ನುವುದು ಕೂಡಾ ಆಸಕ್ತಿಕರ ವಿಷಯವಾಗಿದೆ.

ಸೋಶಿಯಲ್ ಮೀಡಿಯಾ ಗಳಲ್ಲಿ ಇವರಿಬ್ಬರು ಪರಸ್ಪರ ಒಬ್ಬರನ್ನೊಬ್ಬರು ಫಾಲೋ ಮಾಡುತ್ತಿದ್ದಾರೆ. ಅಲ್ಲದೇ ಪರಸ್ಪರ ಹಲವು ಪೋಸ್ಟ್ ಗಳಿಗೆ ಅವರು ಮೆಚ್ಚುಗೆಯನ್ನು ನೀಡಿದ್ದಾರೆ. ಇದರಿಂದಾಗಿಯೇ ಮಾಧ್ಯಮಗಳು ಅನುಪಮಾ ಪರಮೇಶ್ವರನ್ ಹಾಗೂ ಬೂಮ್ರಾ ಡೇಟ್ ಮಾಡುತ್ತಿದ್ದಾರೆ ಎನ್ನುವ ಅನುಮಾನ ವ್ಯಕ್ತಪಡಿಸುತ್ತಾ, ಈ ವಿಷಯವಾಗಿ ಪ್ರಶ್ನೆಯನ್ನು ಮಾಡಿದಂತಹ ಸಂದರ್ಭದಲ್ಲಿ ಜಸ್ಪ್ರಿತ್ ಬೂಮ್ರಾ ಅವರು ತಮ್ಮ ನಡುವೆ ಅಂತಹುದೇನೂ ಇಲ್ಲ ನಾವಿಬ್ಬರೂ ಕೇವಲ ಉತ್ತಮ ಸ್ನೇಹಿತರು ಎಂದು ಹೇಳಿಕೊಂಡಿದ್ದಾರೆ. ನಟಿ ಅನುಪಮಾ ಅವರು ತಾನು ರಾಜ್ ಕೋಟ್ ಗೆ ಹೋಗುತ್ತಿರುವುದಾಗಿ ಒಂದು ಫೋಟೋವನ್ನು ಶೇರ್ ಮಾಡಿಕೊಂಡಿದ್ದರು. ಈ ಫೋಟೋ ವೈರಲ್ ಆದ ಮೇಲೆ ಅವರಿಬ್ಬರ ಮದುವೆಯ ವಿಷಯ ಇನ್ನೆಷ್ಟು ಚರ್ಚೆಗೆ ಕಾರಣವಾಗಿದೆ.