ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮನೆಗಿಂತ ದುಬಾರಿ ಮನೆಯ ಮಾಲೀಕ ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್!

ಭಾರತೀಯ ಕ್ರಿಕೆಟ್ ತಂಡದ ಜನಪ್ರಿಯ ಆಟಗಾರ ಯುವರಾಜ್ ಸಿಂಗ್ ಅವರಿಗೆ ಪ್ರತ್ಯೇಕವಾದ ಪರಿಚಯವನ್ನು ನೀಡುವ ಅವಶ್ಯಕತೆಯೇ ಇಲ್ಲ. ಯುವರಾಜ್ ಸಿಂಗ್ ಭಾರತೀಯ ಕ್ರಿಕೆಟ್ ನ ಸೂಪರ್ ಸ್ಟಾರ್ ಕ್ರಿಕೆಟ್ ಆಟಗಾರ ಎನಿಸಿಕೊಂಡಿರುವುದು ಮಾತ್ರವೇ ಅಲ್ಲದೇ ವಿಶ್ವಕಪ್ ಕ್ರಿಕೆಟ್ ನಲ್ಲಿ ಅವರು “ಪ್ಲೇಯರ್ ಆಫ್ ದ ಟೂರ್ನಮೆಂಟ್” ಪ್ರಶಸ್ತಿಯನ್ನು ಪಡೆದಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕ್ರೀಡೆಯ ವಿಷಯವಾಗಿ ಸದಾ ಸುದ್ದಿಗಳಲ್ಲಿ ಮಂಚೂಣಿಯಲ್ಲಿರುವ ಯುವರಾಜ್ ಸಿಂಗ್ ಅವರು ತಮ್ಮ ಜೀವನ:ಶೈಲಿಯಿಂದಾಗಿಯೂ ಸಾಕಷ್ಟು ಸದ್ದನ್ನು ಮಾಡುತ್ತಾರೆ. ಯುವರಾಜ್ ಸಿಂಗ್ ಅವರು ತಮ್ಮ ತಂದೆ ಯೋಗರಾಜ್ ಸಿಂಗ್ ಅವರ ಜೊತೆ ವಾಸಿಸುತ್ತಿಲ್ಲ. ಬದಲಾಗಿ ಮುಂಬೈನಲ್ಲೇ ಅವರು ಮತ್ತೊಂದು ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದು ಇವರ ಮನೆಯು ಕೋಟ್ಯಂತರ ರೂಪಾಯಿಗಳ ಮೌಲ್ಯದ್ದಾಗಿದ.

ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ತಮ್ಮ ಪತ್ನಿಯೊಂದಿಗೆ ಮುಂಬೈನ ವರ್ಲಿ ಎಲ್ಲಿರುವ ಓಂಕಾರಂ 1973 ಟವರ್ಸ್ ನಲ್ಲಿ ಎನ್ನುವ ಐಶಾರಾಮೀ ಫ್ಲಾಟ್ ಗಳ ಅಪಾರ್ಟ್ಮೆಂಟ್ ನಲ್ಲಿ ವಾಸಮಾಡುತ್ತಿದ್ದಾರೆ. ಇದೇ ಅಪಾರ್ಟ್ಮೆಂಟ್ ನ 35ನೇ ಅಂತಸ್ತಿನಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ನಿ, ಬಾಲಿವುಡ್ ನ ಸ್ಟಾರ್ ನಟಿಯೂ ಆಗಿರುವ ಅನುಷ್ಕಾ ಶರ್ಮಾ ಅವರ ಜೊತೆ ವಾಸಿಸುತ್ತಿದ್ದಾರೆ ಎನ್ನುವುದು ಕೂಡಾ ಬಹಳ ವಿಶೇಷವಾದ ಮಾಹಿತಿ ಎಂದೇ ಹೇಳಬಹುದು. ಓಂಕಾರ್ ಅಪಾರ್ಟ್ಮೆಂಟ್ ನ ಸಿ ವಿಂಗ್ ನಲ್ಲಿ 29 ನೇ ಮಹಡಿಯಲ್ಲಿ ಯುವರಾಜ್ ಸಿಂಗ್ ಅವರ ಐಶಾರಾಮಿ ಮನೆ ಇದ್ದು, ಅವರ ಮನೆಯಿಂದ ಮುಂಬೈ ನಗರದ ಒಂದು ಸುಂದರವಾದ ದೃಶ್ಯಾವಳಿ ಕಾಣುತ್ತದೆ.

ಯುವರಾಜ್ ಸಿಂಗ್ ಅವರು ಓಂಕಾರ್ 1983 ಪಾರ್ಟ್ ಮೆಂಟಲ್ 29ನೇ ಮಹಡಿಯಲ್ಲಿನ ಸಂಪೂರ್ಣ ಫ್ಲೋರ್ ಅನ್ನು ಖರೀದಿ ಮಾಡಿದ್ದು, ಈ ವಿಂಗ್ ನಲ್ಲಿ ಎರಡು ಫ್ಲಾಟ್ ಗಳನ್ನು ನಿರ್ಮಾಣ ಮಾಡಲಾಗಿದ್ದು, ಎರಡೂ ಸಹಾ ಯುವರಾಜ್ ಸಿಂಗ್ ಅವರಿಗೆ ಸೇರಿದ. ಯುವರಾಜ್ ಸಿಂಗ್ ಅವರ ಐಶಾರಾಮಿ ಮನೆಯನ್ನು ಪ್ರತಿ ಚದರ ಅಡಿಗೆ 40 ಸಾವಿರ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, 2015ರಲ್ಲಿ ಯುವರಾಜ್ ಸಿಂಗ್ ಅವರು ಈ ಮನೆಯನ್ನು 64 ಕೋಟಿ ರೂಪಾಯಿ ನೀಡುವ ಮೂಲಕ ಖರೀದಿಯನ್ನು ಮಾಡಿದ್ದಾರೆ. ಇದೇ ಅಪಾರ್ಟ್ಮೆಂಟ್ ನಲ್ಲಿರುವ ವಿರಾಟ್ ಕೊಹ್ಲಿ ಅವರ ಮನೆಯ ಬೆಲೆ ಯುವರಾಜ್ ಸಿಂಗ್ ಅವರ ಮನೆಯ ಬೆಲೆಯಲ್ಲಿ ಅರ್ಧದಷ್ಟೇ ಎನ್ನಲಾಗಿದೆ.

ಹೌದು, ಯುವರಾಜ್ ಸಿಂಗ್ ಅವರ ಮನೆಯ ಬೆಲೆ ವಿರಾಟ್ ಕೊಹ್ಲಿ ಅವರ ಮನೆಯ ಬೆಲೆಗಿಂತ ದುಪ್ಪಟ್ಟಾಗಿದೆ. ವಿರಾಟ್ ಕೊಹ್ಲಿ ಅವರು ಮನೆಯನ್ನು 30 ಕೋಟಿ ರೂಪಾಯಿಗಳಿಗೆ ಖರೀದಿ ಮಾಡಿದ್ದರೆ, ಯುವರಾಜ್ ಸಿಂಗ್ ಅವರು ತಮ್ಮ ಮನೆಯನ್ನು 64 ಕೋಟಿ ರೂಪಾಯಿಗಳಿಗೆ ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಈ ಐಷಾರಾಮಿ ಮನೆಯಲ್ಲಿ ಯುವರಾಜ್ ಸಿಂಗ್ ಅವರು ತಮ್ಮ ಪತ್ನಿ ಹೇಜಲ್ ಅವರ ಜೊತೆಯಲ್ಲಿ ಬಹಳ ಸಂತೋಷದಿಂದ ಕಾಲವನ್ನು ಕಳೆಯುತ್ತಿದ್ದಾರೆ. ಯುವರಾಜ್ ಸಿಂಗ್ ಅವರು ಕ್ರಿಕೆಟ್ ನ ಎಲ್ಲಾ ರೀತಿಯ ಪಂದ್ಯಗಳಿಂದಲೂ ನಿವೃತ್ತಿಯನ್ನು ಪಡೆದುಕೊಂಡಿದ್ದಾರೆ. ಪ್ರಸ್ತುತ ಅವರು ತಮ್ಮ ಹೆಚ್ಚಿನ ಸಮಯವನ್ನು ತಮ್ಮ ಕುಟುಂಬದೊಂದಿಗೆ ಬಹಳ ಆಹ್ಲಾದಕರವಾಗಿ ಕಳೆಯುತ್ತಿದ್ದಾರೆ.

ಇತ್ತೀಚೆಗಷ್ಟೇ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಅವರು ಹಿಂದೂ ಯುವತಿಯರ ಕುರಿತಾಗಿ ವಿ ವಾ ದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು ಎನ್ನಲಾಗಿದೆ. ಅವರು ಈ ಹೇಳಿಕೆಯನ್ನು ನೀಡಿದ ಮೇಲೆ ಅದು ಅನೇಕರ ಕೆಂ ಗಣ್ಣಿಗೆ ಗುರಿಯಾಗಿತ್ತು. ಅಲ್ಲದೇ ಅದೇ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಬೇಕೆಂದು ಬಹಳಷ್ಟು ಜನ ಆಗ್ರಹವನ್ನು ಮಾಡಿದ್ದರು ಎನ್ನಲಾಗಿದೆ. ಆದರೆ ಈ ವಿಷಯದಲ್ಲಿ ಯುವರಾಜ್ ಸಿಂಗ್ ಅವರು ಯಾವುದೇ ರೀತಿಯ ಪ್ರತಿಕ್ರಿಯೆಯನ್ನೂ ನೀಡದೆ ಮೌನವನ್ನು ವಹಿಸಿದ್ದಾರೆ.