ಟೆರೇಸ್ ನ್ನೇ ಗಾರ್ಡನ್ ಮಾಡಿ, ಮಣ್ಣೇ ಇಲ್ಲದೆ ಕಳೆದ 10 ವರ್ಷಗಳಿಂದ ತರಕಾರಿ ಬೆಳೆಯುತ್ತಿರುವ ಮಹಿಳೆ! ಒಮ್ಮೆ ನೋಡಿ ಈ ಸುದ್ದಿ…

ನೀವು ಎಂದಾದರೂ ಮಣ್ಣೇ ಇಲ್ಲದೆ ಸಸ್ಯ ಮತ್ತು ತರಕಾರಿಗಳನ್ನು ಬೆಳೆಸುವ ಬಗ್ಗೆ ಯೋಚಿಸಿದ್ದೀರಾ? ನೀವು ಇದರ ಬಗ್ಗೆ ಯೋಚಿಸದಿದ್ದರೆ ಪುಣೆಯಲ್ಲಿ ವಾಸಿಸುವ ನೀಲಾ ರೇಣವಿಕರ್ ಬಗ್ಗೆ ತಿಳಿದುಕೊಳ್ಳಲೇಬೇಕು. ನೀಲಾ ಅವರು ಕಾಸ್ಟ್ ಅಕೌಂಟೆಂಟ್ ಮತ್ತು ಮ್ಯಾರಥಾನ್ ರನ್ನರ್ ಇದ್ದಾರೆ. ಆದರೆ ಅವರು ಕಳೆದ 10 ವರ್ಷಗಳಿಂದ ಮಣ್ಣು ಇಲ್ಲದೆ ತರಕಾರಿಗಳು ಮತ್ತು ಹಣ್ಣು ಇತ್ಯಾದಿಗಳನ್ನು ಬೆಳೆಯುತ್ತಿದ್ದಾರೆ. ಹೌದು, ಅವರ 450 ಚದರ ಅಡಿ ಟೆರೇಸ್ ಗಾರ್ಡನ್ ನಿಮಗೆ ಒಂದು ಜಮೀನಿನ ಭಾವನೆಯನ್ನು ನೀಡುತ್ತದೆ, ಅಲ್ಲಿ ಸೌತೆಕಾಯಿ, ಆಲೂಗಡ್ಡೆ, ಕಬ್ಬಿನಂತಹ ಇನ್ನೂ ಅನೇಕ ತರಕಾರಿಗಳನ್ನು ಬೆಳೆಯುತ್ತಿದ್ದಾರೆ.

ಹಣ್ಣುಗಳು ಮತ್ತು ತರಕಾರಿಗಳನ್ನು ಈ ರೀತಿ ಬೆಳೆಯಲಾಗುತ್ತದೆ.

ಒಣಗಿದ ಎಲೆಗಳು, ಅಡಿಗೆಯ ತ್ಯಾಜ್ಯ ಪದಾರ್ಥ ಮತ್ತು ಸೆಗಣಿಗಳಿಂದ ನೀಲಾ ರೇಣವಿಕರ್ ಅವರು ತಮ್ಮ ಸಸ್ಯಗಳಿಗೆ ಕಾಂಪೋಸ್ಟ್ ತಯಾರಿಸುತ್ತಾರೆ. ಅವರ ಪ್ರಕಾರ, ‘ಮಣ್ಣಿಲ್ಲದ ಈ ಕಾಂಪೋಸ್ಟ್ ಎಲೆಗಳಿಂದಾಗಿ ದೀರ್ಘಕಾಲದವರೆಗೆ ತೇವಾಂಶವನ್ನು ಉಳಿಸಿಕೊಳ್ಳುತ್ತದೆ. ಇದು ಸಸ್ಯಗಳನ್ನು ಆರೋಗ್ಯದಿಂದ ಇರಿಸುತ್ತದೆ. ಅಲ್ಲದೆ ಇದು ಸಸ್ಯಗಳಿಗೆ ಉತ್ತಮವಾದ ವಾತಾವರಣವನ್ನು ನಿರ್ಮಾಣ ಮಾಡುತ್ತದೆ” ಎಂದು ಅವರು ಹೇಳುತ್ತಾರೆ, ‘ನಾನು ಯಾವುದೇ ರೀತಿಯ ತಂತ್ರಜ್ಞಾನವನ್ನು ಬಳಸುವುದಿಲ್ಲ. ಅದರ ಸಲುವಾಗಿ ಕೇವಲ ಪರಿಶ್ರಮ ಮತ್ತು ಸಮಯವನ್ನು ಕೊಡಬೇಕಾಗುತ್ತದೆ”.

ಸ್ನೇಹಿತರಿಂದ ಸಹಾಯ ಪಡೆದಾಗ…
‘ದ ಬೆಟರ್ ಇಂಡಿಯಾ’ ದ ರಿಪೋರ್ಟ್ ಅನುಸಾರ, ನೀಲಾ ಅವರು ಪರಿಸರವನ್ನು ತುಂಬಾ ಪ್ರೀತಿಸುತ್ತಾರೆ. ಆದರೆ ಅವರಿಗೆ ಕಿಚನ್ ನಲ್ಲಿ ಉಳಿದ ವೆಸ್ಟ್ ಪದಾರ್ಥಗಳನ್ನು ಏನು ಮಾಡಬೇಕೆಂಬುದು ತಿಳಿಯುತ್ತಿರಲಿಲ್ಲ. ಈ ಸಮಯದಲ್ಲಿ ಅವರು ಕಾಂಪೋಸ್ಟ್ ಮಾಡುವ ಸ್ನೇಹಿತರ ಸಹಾಯವನ್ನು ಪಡೆದರು. ತದನಂತರ ಅವರು ಕಿಚನ್ ನಲ್ಲಿಯ ವೆಸ್ಟ್ ಪದಾರ್ಥ ಬೇರ್ಪಡಿಸುವದು ಹಾಗೂ ಅದರಿಂದ ಕಂಪೋಸ್ಟಿಂಗ್ ಮಾಡುವದನನ್ನು ಕಲಿತುಕೊಂಡರು.

ಇಂಟರ್ನೆಟ್’ನಿಂದ ಬಹಳಷ್ಟು ಕಲಿತೆ….
ನೀಲಾ ಅವರು ಇಂಟರ್ನೆಟ್ ಮೂಲಕ ಮಣ್ಣು ಇಲ್ಲದೆ ಸಸ್ಯಗಳನ್ನು ಬೆಳೆಯುವ ತಂತ್ರಜ್ಞಾನದ ಬಗ್ಗೆ ಕಲಿತುಕೊಂಡರು. ಅಂದರೆ ಸಸ್ಯಗಳಿಗಾಗಿ ಹೊದಿಕೆ ಹೇಗೆ ತಯಾರಿಸುವದು, ಅವುಗಳಿಗೆ ನೀರು ಎಷ್ಟು ಹಾಕುವದು, ಅವುಗಳ ಸಲುವಾಗಿ ಯಾವ ಪ್ರಕಾರದ ಗೊಬ್ಬರದ ಅವಶ್ಯಕತೆ ಇದೆ ಎಂಬುದರ ಕುರಿತು ಇಂಟರ್ನೆಟ್ ನಿಂದ ಅರಿತುಕೊಂಡರು. ಕೆಲವು ದಿವಸಗಳ ನಂತರ ಅವರು ತಮ್ಮ ಮನೆಯಲ್ಲಿಯೇ ಕಾಂಪೋಸ್ಟ್ ತಯಾರಿಸಲು ಪ್ರಾರಂಭಿಸಿದರು. ಅದರ ಸಲುವಾಗಿ ಒಂದು ಡಬ್ಬಿಯಲ್ಲಿ ಒಣಗಿದ ಎಲೆಗಳನ್ನು ಹಾಕಿದರು, ಸೆಗಣಿ ಹಾಕಿದರು ಮತ್ತು ಒಂದು ವಾರದ ಕಿಚನ್ ತ್ಯಾಜ್ಯ ಪದಾರ್ಥ ಸಹ ಅದರಲ್ಲಿಯೇ ಹಾಕಿದರು. ಒಂದು ತಿಂಗಳಿನ ನಂತರ ಆ ಡಬ್ಬಿಯಲ್ಲಿ ಗೊಬ್ಬರ ನಿರ್ಮಾಣವಾಗಿತ್ತು.

ಮಣ್ಣು ಇಲ್ಲದೆ ತೋಟಗಾರಿಕೆ ಮಾಡುವುದರಿಂದಾಗುವ ಲಾಭಗಳು….

ಆರಂಭದಲ್ಲಿ ಅವರು ಈ ಮಿಶ್ರಗೊಬ್ಬರವನ್ನು ಬಕೆಟ್‌ನಲ್ಲಿ ಹಾಕಿ ಅದರಲ್ಲಿ ಸೌತೆಕಾಯಿ ಬೀಜಗಳನ್ನು ನೆಟ್ಟರು. ಅವುಗಳಿಗೆ ದಿನಂಪ್ರತಿ ಸಮಯಕ್ಕೆ ಸರಿಯಾಗಿ ನೀರು ಹಾಕುತ್ತಿದ್ದರು. 40 ದಿನಗಳ ನಂತರ ಅದರಲ್ಲಿ ಎರಡು ಸೌತೆಕಾಯಿಗಳು ಆದವು. ಈ ಒಂದು ಗೆಲವು ಅವರಿಗೆ ಧೈರ್ಯ ನೀಡಿತು. ಮುಂದೆ ಅವರು ಮೆಣಸಿನಕಾಯಿ, ಟೊಮ್ಯಾಟೋ ಮತ್ತು ಆಲೂಗಡ್ಡೆ ಮುಂತಾದವುಗಳನ್ನು ಬೆಳೆದರು. ನೀಲಾ ಅವರು ಹೇಳುತ್ತಾರೆ,” ಮಣ್ಣು ಇಲ್ಲದೆ ಕೃಷಿ ಮಾಡುವದರಿಂದ ಮುಖ್ಯವಾಗಿ ಮೂರು ಲಾಭಗಳಿವೆ- ಮೊದಲನೆಯದು ಅವುಗಳಿಗೆ ಕೀಟಗಳು ಹತ್ತುವದಿಲ್ಲ, ಎರಡನೆಯದು ಕಳೆ ಅಥವಾ ಹುಲ್ಲು ಆಗುವದಿಲ್ಲ, ಮೂರನೆಯದು ಮಣ್ಣಿನ ಹೊಲದಲ್ಲಿ ಸಸ್ಯಗಳು ಪೋಷಣೆ ಮತ್ತು ನೀರನ್ನು ಹುಡುಕುತ್ತವೆ, ಆದರೆ ಈ ಪದ್ಧತಿಯಲ್ಲಿ ಅವುಗಳಿಗೆ ಬೇಕಾದದ್ದು ಸಲೀಸಾಗಿ ದೊರೆಯುತ್ತದೆ.

ಈ ಪ್ರಕಾರವಾಗಿ ಮರುಬಳಕೆ ಸಹ ಮಾಡಬಹುದು..
ಅಂದರೆ ನಾವು ಮನೆಯಲ್ಲಿ ಉಪಯೋಗಿಸಿರುವ ಹಳೆಯ ಡಬ್ಬಿಗಳು, ಪ್ಲಾಸ್ಟಿಕ್ ಪಾತ್ರೆಗಳು ಇತ್ಯಾದಿಗಳಲ್ಲಿ ಸಸ್ಯಗಳು ಬೆಳೆಯುತ್ತವೆ. ಇವರ ಈ ಗಾರ್ಡನ್ ನಲ್ಲಿ ಸುಮಾರು 100 ಕ್ಕಿಂತ ಹೆಚ್ಚು ಡಬ್ಬಿಗಳಿವೆ, ಅವುಗಳನ್ನು ಇನ್ನಷ್ಟು ಹೆಚ್ಚಿಸುವ ಯೋಚನೆ ಮಾಡುತ್ತಿದ್ದಾರೆ. ಅಲ್ಲದೆ ಅವರು ಈ ಗಾರ್ಡನ್ ನಲ್ಲಿಯ ತರಕಾರಿ ಮತ್ತು ಹಣ್ಣುಗಳನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ನೀಲಾ ಅವರು ತಮ್ಮ ಗೆಳೆಯರೊಂದಿಗೆ ‘ಆರ್ಗೇನಿಕ್ ಗಾರ್ಡನಿಂಗ್ ಗ್ರೂಪ್’ ಎಂಬ ಹೆಸರಿನ ಫೇಸ್ಬುಕ್ ಗ್ರೂಪ್ ತಯಾರಿಸಿದ್ದಾರೆ, ಅದರಲ್ಲಿ ಸುಮಾರು ಮೂವತ್ತು ಸಾವಿರ ಜನರು ಭಾಗಿಯಾಗಿದ್ದಾರೆ. ಆ ಗ್ರೂಪ್ ನಲ್ಲಿ ನೀಲಾ ಅವರು ಗಾರ್ಡನಿಂಗ್ ಕುರಿತು ಟಿಪ್ಸ್ ಮತ್ತು ಟ್ರಿಕ್ಸ್ ಶೇರ್ ಮಾಡುತ್ತಿರುತ್ತಾರೆ.