ಟೆರೇಸ್ ಮೇಲೆ ನಡೆದು ಹೋಗುತ್ತಿದ್ದ ಮಂಗ ಹಠಾತ್ ನಾಯಿಗೆ ಅಪ್ಪಿ ಮುತ್ತು ಕೊಟ್ಟಿತು! ನಾಯಿಯ ರಿಪ್ಲೈ? ನೋಡಿ ಈ ವೈರಲ್ ವಿಡಿಯೋ!

ನಾಯಿ ಮತ್ತು ಮಂಗ ಎರಡೂ ಪ್ರಾಣಿಗಳು ಯಾವತ್ತೂ ವೈರಿಗಳಂತೆ ಕಾದಾಡುತ್ತವೆ.
ಒಂದಕ್ಕೊಂದು ಬರೀ ನೋಡಿದರೇನೇ ಆಗುವುದಿಲ್ಲ, ಅಂಥದರಲ್ಲಿ ಸದ್ಯ ನಾಯಿ ಮತ್ತು ಮಂಗದ ವಿಶೇಷ ಹಾಗೂ ವಿಚಿತ್ರ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೇಟಿಜನ್ಸ್ ಗಳಿಗೆ ತುಂಬಾ ಮನರಂಜನೆ ಮತ್ತು ಒಳ್ಳೆಯ ಸಂದೇಶವನ್ನು ನೀಡುತ್ತಿದೆ.

ವಿಡಿಯೋದಲ್ಲಿ ಕಂಡುಬರುವ ದೃಶ್ಯದ ಪ್ರಕಾರ, ಮನೆಯ ಟೆರೆಸ್ ಮೇಲೆ ಒಂದು ಕಡೆ ನಾಯಿ ನಿಂತಿದೆ. ಇನ್ನೊಂದು ಕಡೆಯಿಂದ ಮಂಗವು ಬೇರೊಂದು ಮಂಗದ ಜೊತೆಗೆ ಅಲ್ಲಿ ಬರುತ್ತದೆ. ಅಲ್ಲಿಗೆ ಬಂದ ಮಂಗ ತನ್ನಷ್ಟಕ್ಕೆ ತಾ ಹೋಗದೆ ಹಠಾತ್ ನಾಯಿಯ ಕಡೆಗೆ ಹೊರಳಿ ಅದಕ್ಕೆ ಅಪ್ಪಿ ಕೊಳ್ಳುತ್ತದೆ ಮತ್ತು ಮುತ್ತು ಕೊಟ್ಟಿದೆ. ನಾವು ನೋಡಿದ ನಾಯಿ ಮತ್ತು ಮಂಗಗಳ ಅನೇಕ ದೃಶ್ಯಗಳ ಪ್ರಕಾರ, ಈ ಎರಡು ಪ್ರಾಣಿಗಳು ಒಂದೇ ಸವನೆ ಕಾದಾಡುವದನ್ನೇ ನೋಡಿದ್ದೇವೆ. ಆದರೆ ಈ ರೀತಿಯ ದೃಶ್ಯ ಮಾತ್ರ ನೋಡಲು ತುಂಬಾ ಅಪರೂಪದ್ದಾಗಿದೆ. ಹೀಗಾಗಿ ಈ ವಿಡಿಯೋ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದೆ.

ಎರಡು ಪ್ರಾಣಿಗಳ ಬಹುಶಃ ಮೈತ್ರಿಯ ಸುಂದರವಾದ ಈ ದೃಶ್ಯ ನೋಡಿದಾಗ ನಾಯಿ ಮತ್ತು ಮಂಗ ಇವು ಮೊದಲಿನಿಂದಲೂ ಒಂದಕ್ಕೊಂದು ಪರಿಚಯವಿರುವ ಹಾಗೆ ಮತ್ತು ಗಟ್ಟಿಯಾದ ಗೆಳೆತನ ಇರುವ ಹಾಗೆ ನೋಡುಗರಿಗೆ ಕಂಡುಬರುತ್ತದೆ. ಆಕಸ್ಮಿಕವಾಗಿ ನಡೆದ ಈ ದೃಶ್ಯ ನೋಡಿದ ನಂತರ ನೇಟಿಜನ್ಸ್ ಗಳು ತುಂಬಾ ಆಶ್ಚರ್ಯ ವ್ಯಕ್ತ ಮಾಡಿದ್ದಾರೆ.

ಜರ್ಮನ್ ಶೆಫರ್ಡ್ ಜಾತಿಯ ನಾಯಿ ಮನೆಯ ಟೆರೆಸ್ ಮೇಲಿನ ಗೋಡೆಗೆ ತನ್ನ ಕಾಲುಗಳನ್ನು ಆನಿಸಿ ನಿಂತಾಗ ಆಕಡೆಯಿಂದ ಬಂದ ಮಂಗವು ನೇರ ನಾಯಿಗೆ ಅಪ್ಪಿಕೊಂಡು ಮುತ್ತು ಕೊಡುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಎರಡು ಲಕ್ಷಕ್ಕೂ ಮೀರಿ ಜನರು ನೋಡಿದ್ದಾರೆ. ಅನೇಕರು ಈ ಎರಡೂ ಪ್ರಾಣಿಗಳ ಗೆಳೆತನವನ್ನು ನೋಡಿ ಬೇರೆ ಬೇರೆ ಪ್ರಕಾರದ ಪ್ರತಿಕ್ರಿಯೆಗಳನ್ನು ಹೊರಹಾಕಿದ್ದಾರೆ.

ವಿಡಿಯೋ ನೋಡಿ

 

View this post on Instagram

 

A post shared by Priyanka Meena (@prinkya_45)