ಟೆಸ್ಟ್ ಪಂದ್ಯಗಳಲ್ಲಿ ಎಲ್ಲಕ್ಕೂ ಹೆಚ್ಚು ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಪುರಸ್ಕಾರ ಗೆದ್ದ ಆಟಗಾರರು; ಸಚಿನ್ ಅಭಿಮಾನಿಗಳು ಇಲ್ಲಿ ನಿರಾಶೆಯಾಗಬಹುದು!
ಕ್ರಿಕೇಟ್ ಇತಿಹಾಸದಲ್ಲಿ ಕೆಲವೊಬ್ಬರು ಬ್ಯಾಟ್ ನಿಂದ ಬಿರುಗಾಳಿ ಬೀಸಿದರೆ ಇನ್ನೂ ಕೆಲವರು ಬಾಲ್ ಮುಖಾಂತರ ಬಿರುಗಾಳಿ ಎಬ್ಬಿಸಿದ್ದಾರೆ. ನಾವು ಇಂದು ಕ್ರಿಕೇಟ್ ನ ಬೇರೊಂದು ರೆಕಾರ್ಡ್ ಬಗ್ಗೆ ತಿಳಿಸುವವರಿದ್ದೇವೆ. ಅದೇನೆಂದರೆ ಟೆಸ್ಟ್ ಪಂದ್ಯದಲ್ಲಿ ಎಲ್ಲಕ್ಕಿಂತ ಹೆಚ್ಚು ಬಾರಿ ಮ್ಯಾನ್ ಆಫ್ ದ ಮ್ಯಾಚ್ ಪಡೆದುಕೊಂಡಿರುವ ಐದು ಆಟಗಾರರ ಬಗ್ಗೆ ತಿಳಿಸುವವರಿದ್ದೇವೆ. ಆದರೆ ಆಶ್ಚರ್ಯಕರ ಸಂಗತಿ ಏನೆಂದರೆ ಇದರಲ್ಲಿ ಭಾರತದ ಒಬ್ಬ ಕ್ರಿಕೆಟಿಗರ ಹೆಸರೂ ಸಮಾವೇಶವಿಲ್ಲ. ಟೆಸ್ಟ್ ಇತಿಹಾಸದಲ್ಲಿ ಅತೀ ಹೆಚ್ಚು ರನ್ ಗಳಿಸಿದ ಸಚಿನ್ ತೆಂಡೂಲ್ಕರ್ ಅವರು ಮೊದಲ ಐದು ಸ್ಥಾನಗಳಲ್ಲಿ ಹೆಸರು ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅವರು ಒಟ್ಟು ಮೂರು ಆಟಗಾರರೊಂದಿಗೆ ಸಂಯುಕ್ತ ರೂಪದಲ್ಲಿ ಹೆಸರು ಹೊಂದಿದ್ದಾರೆ.
ಈ ರೆಕಾರ್ಡ್ ನಲ್ಲಿ ಮೊದಲನೆಯ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ಮನ್ ಜಾಕ್ವೆಸ್ ಕ್ಯಾಲಿಸ್ ಇದ್ದಾರೆ. ಕ್ಯಾಲಿಸ್ ಅವರು 1995 ರಿಂದ 2013 ರವರೆಗೆ ದಕ್ಷಿಣ ಆಫ್ರಿಕಾದ ಸಲುವಾಗಿ 166 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, ಈ ಎಲ್ಲ ಪಂದ್ಯಗಳಲ್ಲಿ ಕ್ಯಾಲಿಸ್ ಅವರು 23 ಸಲ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ ಬೌಲಿಂಗ್ ನಲ್ಲಿ ಸಹ ಅವರ ಯೋಗದಾನವಿದೆ. ಕ್ಯಾಲಿಸ್ ಅವರು 166 ಟೆಸ್ಟ್ ಪಂದ್ಯಗಳಲ್ಲಿ 292 ವಿಕೇಟ್ ಸಹ ಪಡೆದುಕೊಂಡಿದ್ದಾರೆ.
ಎರಡನೇ ಸ್ಥಾನದಲ್ಲಿ ಶ್ರೀಲಂಕಾದ ಜಾದೂಗಾರ್ ಆಫ್ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಇದ್ದಾರೆ. ಕ್ಯಾಲಿಸ್ ಅವರ ರೆಕಾರ್ಡ್ ಮುರಿಯಲು ತುಂಬಾ ಕಠಿಣವಾಗಿದೆ. ಏಕೆಂದರೆ ಇವರು ಎಲ್ಲಕ್ಕಿಂತ ಹೆಚ್ಚು ಅಂದರೆ 800 ವಿಕೇಟ್ ತಗೆದುಕೊಂದ್ದಾರೆ.ಆದರೆ ಮ್ಯಾನ್ ಆಫ್ ದ ಮ್ಯಾಚ್ ಮಾತ್ರ 19 ಬಾರಿ ಪಡೆದುಕೊಂಡಿದ್ದಾರೆ.
ಮೂರನೆಯ ಕ್ರಮಾಂಕದಲ್ಲಿ ಪಾಕಿಸ್ತಾನದ ಪೂರ್ವ ಕ್ಯಾಪ್ಟನ್ ವಸಿಮ್ ಅಕ್ರಮ್ ಹಾಗೂ ಶೇನ್ ವಾರ್ನ್ ಇವರು 17-17 ಸಲ ಮ್ಯಾನ್ ಆಫ್ ದ ಮ್ಯಾಚ್ ತೆಗೆದುಕೊಂಡು ಸಂಯುಕ್ತ ರೂಪದಲ್ಲಿ ಮೂರನೇ ಕ್ರಮಾಂಕದಲ್ಲಿದ್ದಾರೆ.
ಕುಮಾರ್ ಸಂಗಾಕಾರಾ ಮತ್ತು ರಿಕಿ ಪಾಂಟಿಂಗ್ 16-16 ಬಾರಿ ಮ್ಯಾನ್ ಆಫ್ ದ ಮ್ಯಾಚ್ ತೆಗೆದುಕೊಂಡು ಸಂಯುಕ್ತ ರೂಪದಲ್ಲಿ ನಾಲ್ಕನೇಯ ಕ್ರಮಾಂಕದಲ್ಲಿದ್ದಾರೆ.

ಆದರೆ ಐದನೆಯ ಕ್ರಮಾಂಕದಲ್ಲಿ ಮೂರು ಆಟಗಾರರಿದ್ದಾರೆ. ವೆಸ್ಟ್ ಇಂಡಿಜ್ ದ ವೇಗದ ಬೌಲರ್ ಕರ್ಟಲಿ ಎಂಬ್ರಾಸ್ ಹಾಗೂ ಆಸ್ಟ್ರೇಲಿಯಾದ ಸ್ಟೀವ್ ವ್ಹಾ ಹಾಗೂ ಭಾರತದ ಸಚಿನ್ ತೆಂಡೂಲ್ಕರ್ 14-14 ಸಲ ಮ್ಯಾನ್ ಆಫ್ ದ ಮ್ಯಾಚ್ ತಗೆದುಕೊಂಡು ಐದನೆಯ ಕ್ರಮಾಂಕದಲ್ಲಿದ್ದಾರೆ. ಆಶ್ಚರ್ಯಕರ ಸಂಗತಿ ಏನೆಂದರೆ ಟೆಸ್ಟ್ ನಲ್ಲಿ ಎಲ್ಲಕ್ಕಿಂತ ಹೆಚ್ಚು ಶತಕ ಮಾಡಿರುವ ಹಾಗೂ ಎಲ್ಲಕ್ಕಿಂತ ಹೆಚ್ಚು ರನ್ ಗಳಿಸಿದ್ದರು ಸಹ ತೆಂಡೂಲ್ಕರ್ ಅವರ ಹೆಸರು ಮ್ಯಾನ್ ಆಫ್ ದ ಮ್ಯಾಚ್ ರೆಕಾರ್ಡ್ ನಲ್ಲಿ ಅಷ್ಟೊಂದು ಉತ್ತಮ ಸ್ಥಾನದಲ್ಲಿಲ್ಲ. ಇವರ ರೆಕಾರ್ಡ್ ನೋಡಿದರೆ ಮೊದಲನೆಯ ಸ್ಥಾನದಲ್ಲಿರಬೇಕಾದ ಸಚಿನ್ ತೆಂಡೂಲ್ಕರ್ ಅವರು ಸದ್ಯಕ್ಕೆ ಸಂಯುಕ್ತ ರೂಪದಲ್ಲಿ ಐದನೆಯ ಸ್ಥಾನದಲ್ಲಿದ್ದಾರೆ.