ಟ್ರಕ್ ಚಾಲಕನ ಬ್ಯಾಂಕ್ ಅಕೌಂಟಿಗೆ ಬಂದವು ಹಠಾತ್ 14 ಲಕ್ಷ 61 ಸಾವಿರ ರೂಪಾಯಿ; ಮುಂದೇನು ಮಾಡಿದ ಟ್ರಕ್ ಚಾಲಕ ನೋಡಿ….
ಮನುಷ್ಯ ನಿಜವಾಗಿಯೂ ಪ್ರಾಮಾಣಿಕನಾಗಿದ್ದರೆ ಎಷ್ಟೇ ದೊಡ್ಡ ಮೊತ್ತದ ಆಮಿಷವೇ ಆಗಿರಲಿ ಅದರಿಂದ ಆ ವ್ಯಕ್ತಿಗೆ ಯಾವುದೇ ವ್ಯತ್ಯಾಸ ಬೀಳುವುದಿಲ್ಲ.
ಹಣಕ್ಕಾಗಿ ಮಗ ತಂದೆಯನ್ನೇ ಕೊಲ್ಲುವ ಎಷ್ಟೋ ಉದಾಹರಣೆಗಳನ್ನು ಕೇಳುವಾಗ ಈಗಿನ ಸಮಯದಲ್ಲಿ ಟ್ರಕ್ ಚಾಲಕನೊಬ್ಬ ತನ್ನ ಅಕೌಂಟ್ ನಲ್ಲಿ ಜಮೆಯಾದ ಸುಮಾರು 14 ಲಕ್ಷ ರೂಪಾಯಿಗಳನ್ನು ಪ್ರಾಮಾಣಿಕತನದಿಂದ ರಿಟರ್ನ್ ಮಾಡಿದ್ದಾನೆ.
ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ವಾಸಿಸುವ ವ್ಯಕ್ತಿಯೊಬ್ಬ 14 ಲಕ್ಷ 64 ಸಾವಿರ 621 ರೂಪಾಯಿಗಳನ್ನು ಸ್ವತ: ತಾವೇ ರಿಟರ್ನ್ ಮಾಡಿದ್ದಾರೆ. ಈ ವ್ಯಕ್ತಿಯ ಹೆಸರು ಮೊಹಮ್ಮದ್ ಅಜೀಜ್ ಇದ್ದು ಒಂದೇ ಒಂದು ರೂಪಾಯಿಯನ್ನು ಬಿಡದೆ ಅಕೌಂಟಿಗೆ ಜಮೆಯಾದ ಎಲ್ಲ ಹಣವನ್ನು ಮರಳಿ ಪಾವತಿಸಿದ್ದಾರೆ. ಇದೇ ಕಾರಣಕ್ಕೆ ಇವರು ಹೊಗಳಿಕೆಗೆ ಪಾತ್ರರಾಗಿದ್ದಾರೆ.
ಇವರು ಟ್ರಕ್ ಚಾಲಕನ ಕೆಲಸ ಮಾಡುತ್ತಿದ್ದು ಆರ್ಥಿಕ ಪರಿಸ್ಥಿತಿ ಮಾತ್ರ ಅಷ್ಟಕಷ್ಟೇ ಎಂದೇ ಹೇಳಬಹುದು. ಹತ್ತು ದಿವಸಗಳ ಹಿಂದೆ ಹಠಾತ್ ಇವರ ಅಕೌಂಟಿಗೆ 14 ಲಕ್ಷ ರೂಪಾಯಿಗಳು ಜಮೆಯಾದ ಬಗ್ಗೆ ಮೆಸೇಜ್ ಬಂದಿತು. ಬೇರೆ ಯಾರಾದರೂ ಇದ್ದರೆ ಮುಂದಿನ ಪರಿಣಾಮದ ಬಗ್ಗೆ ಎಳ್ಳಷ್ಟು ವಿಚಾರ ಮಾಡದೇ ಹಣವನ್ನು ಎತ್ತಿ ಖರ್ಚು ಮಾದುತ್ತಿದ್ದರೇನೋ. ಆದರೆ ಇವರು ಆ ರೀತಿ ಮಾಡದೆ ನೇರ ತಮ್ಮ ಅಕೌಂಟ್ ಇದ್ದ ಎಸ್ಬಿಐ ಬ್ರಾಂಚಿಗೆ ಹೋಗಿ ತಮಗೆ ಬಂದ ಮೆಸೇಜನ್ನು ಬ್ಯಾಂಕ್ ಅಧಿಕಾರಿಗಳಿಗೆ ತೋರಿಸಿ, ಈ ಹಣವು ನನ್ನದಲ್ಲ ಈ ಹಣಕ್ಕೆ ನಾನು ಕೈ ಹಚ್ಚುವುದಿಲ್ಲ. ದಯವಿಟ್ಟು ಈ ಹಣವು ಯಾರದು ಅಂತ ಹೇಳಿ ಮತ್ತು ಅವರಿಗೆ ವಾಪಸ್ ನೀಡಲು ನಾನು ತಯಾರಿದ್ದೇನೆ. ಅದಕ್ಕೆ ಬೇಕಾಗಿರುವ ಪ್ರೋಸೆಸ್ ಪೂರ್ಣ ಮಾಡಲು ನಾನು ಸಿದ್ಧನಿದ್ದೇನೆ ಎಂದು ವಿನಂತಿಸಿಕೊಂಡಿದ್ದಾರೆ. ಇದನ್ನು ಕೇಳಿದ ಬ್ಯಾಂಕ್ ಅಧಿಕಾರಿಗಳು ಸಹ ಅಚ್ಚರಿ ವ್ಯಕ್ತಪಡಿಸಿದ್ದಾರೆ. ತದನಂತರ ಬ್ಯಾಂಕಿನ ಅಧಿಕಾರಿಗಳು ತನಿಖೆ ನಡೆಸಿದಾಗ ಇವರ ಅಕೌಂಟಿಗೆ ಮುಂಬಯಿಯ ಅಂಧೇರಿ ಉಪನಗರದ ಐಸಿಐಸಿಐ ಬ್ಯಾಂಕಿನಿಂದ ತಪ್ಪಾಗಿ ಹಣ ವರ್ಗಾವಣೆಯಾಗಿದ್ದು ತಿಳಿದುಬಂತು. ಆಮೇಲೆ ಸಂಪೂರ್ಣ ಹಣವನ್ನು ಮರಳಿ ನೀಡುವ ಪ್ರಕ್ರಿಯೆ ಮುಗಿಸಿಕೊಂಡರು.
ಮೊಹಮ್ಮದ್ ಅಜೀಜ್ ಅವರು ಹೇಳುವ ಪ್ರಕಾರ, ಮೆಸೇಜ್ ಬಂದ ನಂತರ ನಾನು ಬ್ಯಾಂಕಿಗೆ ಹೋಗಿ ಅಲ್ಲಿಯ ಅಧಿಕಾರಿಗಳಿಗೆ ಮೊದಲು ನನ್ನ ಮೆಸೇಜ್ ತೋರಿಸಿದೆ, ಮತ್ತು ಈ ಹಣ ನನ್ನದಲ್ಲ ಆದಕ್ಕಾಗಿ ಈ ಹಣ ಯಾರದಿದೆಯೋ ಅವರಿಗೆ ಮರಳಿ ಈ ಹಣವನ್ನು ಕೊಟ್ಟುಬಿಡಿ ಎಂದು ಹೇಳಿದೆ, ಎನುತ್ತಾರೆ.
ಶಿಕ್ಷಣ, ಉದ್ಯೋಗ, ವ್ಯವಸಾಯ, ಜಾತಿ, ಧರ್ಮ ಇವು ಯಾವವು ಪ್ರಾಮಾಣಿಕತನಕ್ಕೆ ಸಂಬಂಧವಿಲ್ಲ ಎಂದೇ ಹೇಳಬಹುದು. ಮನುಷ್ಯನ ಮನಸ್ಸು ಹಾಗೂ ಚರಿತ್ರೆ ಇವೆರಡು ಸ್ವಚ್ಛವಾಗಿರಬೇಕು ಎಂಬುದನ್ನೇ ಮೊಮ್ಮದ್ ಅಜೀಜ್ ಅವರು ತಮ್ಮ ಈ ಕೃತಿಯಿಂದ ತೋರಿಸಿಕೊಟ್ಟಿದ್ದಾರೆ.