ಟ್ರಯಲ್ ರೂಮಿನಲ್ಲಿ ಹೊಸ ಬಟ್ಟೆ ತೊಟ್ಟುಕೊಳ್ಳಲು ಬಂದ ಅಪರಿಚಿತ ಯಾರು ನೋಡಿ ಈ ವೈರಲ್ ವಿಡಿಯೋದಲ್ಲಿ! ಇನ್ನು ಮುಂದೆ ತುಂಬಾ ಹುಷಾರು!!!

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ವಿಡಿಯೋಗಳು ಕೆಲವೊಮ್ಮೆ ನೋಡುಗರಿಗೆ ಹೊಸ ಹೊಸ ಪಾಠಗಳನ್ನು ಕಲಿಸುವದುಂಟು. ಈ ವಿಡಿಯೋಗಳು ಎಷ್ಟೋ ಸಲ ಮನರಂಜನೆಯ ಜೊತೆಗೆ ಸರಿಯಾದ ಜೀವನದ ಪಾಠವನ್ನು ಸಹ ನೀಡುತ್ತವೆ ಎಂದರೆ ತಪ್ಪಲ್ಲ. ನಾವು ಬಟ್ಟೆಗಳನ್ನು ಖರೀದಿಸಿದ ನಂತರ ಅವುಗಳನ್ನು ಟೆಸ್ಟ್ ಮಾಡಲು ಹಿಂದೆ ಮುಂದೆ ನೋಡದೆ ಒಮ್ಮೆಲೆ ಟ್ರಯಲ್ ರೂಮಿಗೆ ನುಗ್ಗುತ್ತೇವೆ. ಅಲ್ಲಿ ಕೆಲವೊಂದು ಸಲ ಹಿಡನ್ ಕ್ಯಾಮೆರಾಗಳನ್ನು ಇಟ್ಟಿದ್ದು ಬೆಳಕಿಗೆ ಬಂದಿವೆ. ಇಂಥ ಸುದ್ದಿಗಳನ್ನು ಒಂದಲ್ಲ ಎರಡಲ್ಲ ಎಷ್ಟೋ ಸಲ ಕೇಳಿದ್ದೇವೆ ಮತ್ತು ಓದಿದ್ದೇವೆ. ಆದರೀಗ ಟ್ರಯಲ್ ರೂಮಿಗೆ ಸಂಬಂಧಿಸಿದ ಇನ್ನೊಂದು ಸುದ್ದಿ ತುಂಬಾ ಸದ್ದು ಮಾಡುತ್ತಿದೆ. ಈಗ ಟ್ರಯಲ್ ರೂಮಿನಲ್ಲಿ ದೊಡ್ಡದಾದ ಹೆಬ್ಬಾವು ಒಂದು ವಾಸ ಮಾಡಿದೆ ಎಂದರೆ ನಂಬುತ್ತೀರಾ? ಇಲ್ಲ ವೆಂದರೆ ಇಲ್ಲಿ ನಿಮಗಾಗಿ ವಿಡಿಯೋ ಒಂದನ್ನು ತಂದಿದ್ದೇವೆ.

ವಿಡಿಯೋದಲ್ಲಿ ಕಂಡು ಬರುವ ಹಾಗೆ ಟ್ರಯಲ್ ರೂಮಿನಲ್ಲಿ ಮೇಲುಗಡೆ ಇರುವ ಸಂದಿಯಲ್ಲಿ ಒಂದು ಹಾವು ಕುಳಿತಿರುವುದು ಅಂಗಡಿ ಮಾಲೀಕರಿಗೆ ತಿಳಿದು ಬಂದಿದೆ. ಆಮೇಲೆ ಅಂಗಡಿ ಮಾಲೀಕರು ಸರ್ಪಮಿತ್ರನನ್ನು ಕರೆಯಿಸಿ ಹಾವನ್ನು ಹಿಡಿಯಲು ಯಶಸ್ವಿಯಾಗಿ ಪ್ರಯತ್ನಿಸಿದ್ದಾರೆ. ಹಾವನ್ನು ಅಲ್ಲಿಂದ ತೆಗೆಯುವ ಸಂದರ್ಭದಲ್ಲಿ ಮಾಡಿದ ವಿಡಿಯೋವನ್ನು ಟ್ವಿಟರ್ ನಲ್ಲಿ ಸುಸಾಂತ್ ನಂದಾ ಅವರು ಶೇರ್ ಮಾಡಿದ್ದಾರೆ.

ಅಲ್ಲಿರುವ ಹಾವನ್ನು ತೆಗೆದ ನಂತರ ಗೊತ್ತಾಗಿದೆ ಅದು ಹಾವಲ್ಲ ಹೆಬ್ಬಾವು ಅಂತ. ರೆಸ್ಕ್ಯೂ ಆಪರೇಶನ್ ನಡೆಯುವಾಗ ಹಾವು ಸರ್ಪಮಿತ್ರನಿಗೆ ಕಚ್ಚಲು ಮುಂದಾಗಿರುವುದನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದು.

ವಿಡಿಯೋ ನೋಡಿ

ಈ ವೀಡಿಯೋವನ್ನು ಇಲ್ಲಿಯವರೆಗೆ ಸಾವಿರಾರು ಜನರು ನೋಡಿ ಆಶ್ಚರ್ಯ ಭರಿತ ಪ್ರತಿಕ್ರಿಯೆಗಳನ್ನು ಸಹ ಕೊಟ್ಟಿದ್ದಾರೆ.