ಟ್ರಾಕ್ಟರ್ ಚಕ್ರವನ್ನು ಬೈಕಿಗೆ ಅಳವಡಿಸಿದ ಯೂಟ್ಯೂಬರ್, ಟ್ರಾಕ್ಟರ್ ಚಕ್ರದ ಬೈಕ್ ನಲ್ಲಿ ಊರು ಸುತ್ತಲು ಹೊರಟ: ಮುಂದೆ ನಡೆದಿದ್ದು ವೈರಲ್ ಆಯ್ತು!
ಹೊಸ ಹೊಸ ತಂತ್ರಜ್ಞಾನ, ನೂತನ ಆವಿಷ್ಕಾರಗಳು ಸದಾ ನಡೆದೇ ಇದೆ. ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಪ್ರಯೋಗಗಳು ಕೂಡ ನಡೆಯುತ್ತಿವೆ. ನಮ್ಮ ದೇಶದಲ್ಲಿಯೂ ಬಹಳಷ್ಟು ಜನ ಪ್ರತಿಭಾವಂತರು ಇದ್ದು, ತಮ್ಮ ಪ್ರತಿಭೆಯಿಂದ ಸಾಕಷ್ಟು ಸುದ್ದಿಯನ್ನು ಮಾಡಿದ್ದಾರೆ. ಇವರು ಅನೇಕ ಹೊಸ ಹೊಸ ವಸ್ತುಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಆದರೆ ಕೆಲವರು ಇದರ ನಡುವೆಯೇ ತಮಗೆ ಲಭ್ಯವಿರುವ ವಸ್ತುಗಳು ಅಥವಾ ವಾಹನಗಳ ಮೇಲೂ ಹೊಸ ಪ್ರಯೋಗಗಳನ್ನು ಮಾಡಲು ತೊಡಗಿದ್ದು ಇಂತಹ ಮಂದಿಗೆ ಕಡಿಮೆಯೇನಿಲ್ಲ. ಆದರೆ ಕೆಲವರು ಈ ಕ್ಷೇತ್ರದಲ್ಲಿಯೂ ಸಹಾ ದೇಶ ಗಮನ ಸೆಳೆಯುವಂತಹ ಸಾಧನೆಯನ್ನು ಮಾಡಿದ್ದಾರೆ. ತಮಿಳುನಾಡಿನ ಇಂಜಿನಿಯರ್ ಯುವಕ ಆಟೋ ಬಳಸಿಕೊಂಡು ಮನೆಯನ್ನು ನಿರ್ಮಾಣ ಮಾಡಿದ್ದರೇ, ಕೇರಳದ ಒಬ್ಬ ಯುವಕ ತಾನೇ ಸ್ವತಃ ಕಾರ್ ಒಂದನ್ನು ಸಿದ್ಧಪಡಿಸಿದ್ದಾನೆ. ಆದರೆ ಇವೆಲ್ಲವುಗಳಿಗೆ ಕಾನೂನಿನ ನಿಯಮಗಳು ಇರುವುದರಿಂದ ಯಾವುದು ಕೂಡಾ ಸಾರ್ವಜನಿಕವಾಗಿ, ಪ್ರಾಯೋಗಿಕವಾಗಿ ಬಳಕೆಗೆ ಬಂದಿಲ್ಲ.
ಪ್ರಸ್ತುತ ಯೂಟ್ಯೂಬ್ ನಲ್ಲಿ ಒಂದು ವಿಡಿಯೋ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ವಿಡಿಯೋ ನೋಡಿದವರಿಗೆ ಆಶ್ಚರ್ಯ ಹಾಗೂ ನಗು ಎರಡು ಕೂಡಾ ಏಕಕಾಲದಲ್ಲಿ ಮೂಡುತ್ತದೆ. ಅದೇ ವೇಳೆ ಅನೇಕರಿಗೆ ಯುವಕರು ಮಾಡಿರುವ ಹೊಸ ಪ್ರಯತ್ನಕ್ಕೆ ಮೆಚ್ಚುಗೆಯನ್ನು ನೀಡಬೇಕು ಎನಿಸುತ್ತದೆ. ಸಾಮಾನ್ಯವಾಗಿ ಬೈಕುಗಳನ್ನು ವಿವಿಧ ರೀತಿಯಲ್ಲಿ ವಿನ್ಯಾಸಗೊಳಿಸುವುದು ಇತ್ತೀಚಿನ ದಿನದಲ್ಲಿ ಒಂದು ಟ್ರೆಂಡ್ ಹಾಗೂ ಕ್ರೇಜ್ ಆಗಿ ಪರಿವರ್ತನೆಯಾಗಿದೆ. ಬೈಕುಗಳ ಮೂಲ ರೂಪವನ್ನು ಬದಲಿಸಿ ತಮಗೆ ಇಷ್ಟವಾದಂತೆ ಹೊಸ ವಿನ್ಯಾಸಗಳನ್ನು ನೀಡಿ ನೋಡುಗರಿಗೆ ಆಶ್ಚರ್ಯವನ್ನು ಉಂಟು ಮಾಡುತ್ತಾರೆ. ಈಗ ವೈರಲ್ ಆಗಿರುವ ವಿಡಿಯೋದಲ್ಲಿ ನೆಟ್ಟಿಗರು ನೀಡಿದ ಚಾಲೆಂಜ್ ಸ್ವೀಕರಿಸಿದ ಯೂಟ್ಯೂಬರ್ ಬೈಕ್ ಒಂದರ ಮೇಲೆ ಇಂತಹದೇ ಪ್ರಯೋಗವೊಂದನ್ನು ಮಾಡಿದ್ದಾನೆ.
ಇಲ್ಲಿ ಯುವಕರು ಮಾಡಿರುವುದಾದರೂ ಏನು ಎನ್ನುವುದಾದರೆ ಬೈಕೊಂದರ ಮುಂದಿನ ಚಕ್ರವನ್ನು ಬದಲಾಯಿಸಿ ಬೈಕ್ ನ ಚಕ್ರದ ಬದಲಾಗಿ ಟ್ರ್ಯಾಕ್ಟರ್ ನ ಚಕ್ರವನ್ನು ಅಳವಡಿಸಿದ್ದಾರೆ. ಇದರಿಂದ ಬೈಕ್ ನ ಲುಕ್ ನಲ್ಲಿ ಬದಲಾಗಿದೆ. ಮುಂದೆ ಟ್ರಾಕ್ಟರ್ ಚಕ್ರ ಅಳವಡಿಸಿದ ಬೈಕ್ ಬಹಳ ವಿಶೇಷವಾಗಿ ಕಂಡಿದೆ. ಬೈಕ್ ನ ಚಕ್ರವನ್ನು ಬದಲಾಯಿಸಿದ ಮೇಲೆ ಅದು ಕೇವಲ ಶೋಕಿಗೆ ಮಾತ್ರವಲ್ಲ, ಬದಲಿಗೆ ಈ ಬೈಕ್ ಹೇಗೆ ಕೆಲಸ ಮಾಡುತ್ತದೆ, ರಸ್ತೆಯಲ್ಲಿ ಅದು ಹೇಗೆ ಚಲಿಸುತ್ತದೆ ಎನ್ನುವುದನ್ನು ತೋರಿಸಲು ಆ ಬೈಕ್ ಮೇಲೆ ಕುಳಿತು ಹಳ್ಳಿಯೆಲ್ಲಾ ಸುತ್ತಿ ಬಂದಿದ್ದಾರೆ.
ವಿಡಿಯೋದಲ್ಲಿ ಬೈಕಿಗೆ ಹೊಸರೂಪವನ್ನು ಕೊಟ್ಟ ಯುವಕ ಅದರ ಬಗ್ಗೆ ಮಾತನಾಡಿದ್ದಾರೆ.
ಅವರು ಮಾತನಾಡುತ್ತಾ ಬೈಕಿಗೆ ಟ್ರಾಕ್ಟರ್ ಚಕ್ರ ಬಳಸುವಂತೆ ನೀಡಲಾಗಿದ್ದ ಚಾಲೆಂಜನ್ನು ಸ್ವೀಕರಿಸಿ ಟ್ರ್ಯಾಕ್ಟರ್ ಚಕ್ರ ಅಳವಡಿಸಿದ್ದೇವೆ, ಆ ಮೂಲಕ ಮೊದಲ ಚಾಲೆಂಜ್ ಪೂರ್ತಿ ಮಾಡಿದ್ದೇವೆ. ಅದೇ ರೀತಿ ಚಕ್ರ ಅಳವಡಿಸಿದ ನಂತರ ಬೈಕನ್ನು ಓಡಿಸಿ ಎಂದು ನೀಡಿದ್ದ ಎರಡನೇ ಚಾಲೆಂಜ್ ಸ್ವೀಕರಿಸಿ ಬೈಕ್ ನಲ್ಲಿ ಇಡೀ ಗ್ರಾಮವನ್ನು ಸುತ್ತಿ ಅದನ್ನೂ ಪೂರ್ತಿ ಮಾಡಿದ್ದೇವೆ. ಈ ಮೂಲಕ ಕೊಟ್ಟ ಎರಡೂ ಚಾಲೆಂಜ್ ಗಳನ್ನು ಪೂರ್ತಿ ಮಾಡಿರುವುದಾಗಿ ಹೇಳಿ, ಬೈಕಿಗೆ ಟ್ರಾಕ್ಟರ್ ಚಕ್ರ ಅಳವಡಿಸಿದ್ದು ಹೇಗೆ ಎಂಬುದನ್ನು ವಿವರಿಸಿದ್ದಾರೆ.
ವಿಡಿಯೋ ನೋಡಿ
ಈ ವೀಡಿಯೋವನ್ನು ಈಗಾಗಲೇ 27 ಲಕ್ಷಕ್ಕಿಂತಲೂ ಅಧಿಕ ಮಂದಿ ರಕ್ಷಣೆ ಮಾಡಿದ್ದಾರೆ. ಮೂರು ಲಕ್ಷಕ್ಕಿಂತ ಅಧಿಕ ಮಂದಿ ವಿಡಿಯೋಗೆ ಲೈಕುಗಳನ್ನು ನೀಡಿದ್ದಾರೆ. ಇದಲ್ಲದೇ 21 ಸಾವಿರಕ್ಕಿಂತ ಅಧಿಕ ಮಂದಿ ಕಾಮೆಂಟ್ ಗಳನ್ನು ಮಾಡಿರುವುದು ಮತ್ತೊಂದು ವಿಶೇಷವಾಗಿದೆ. ಕಾಮೆಂಟ್ ಗಳನ್ನು ಮಾಡಿದವರು, ನಿಮ್ಮ ಉತ್ಸಾಹ ಹಾಗೂ ಚಾಲೆಂಜ್ ಸ್ವೀಕರಿಸುವ ಹುಮ್ಮಸ್ಸು ಸದಾ ಹೀಗೆ ಇರಲಿ ಎಂದು ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಕೆಲವರು ಹಾಸ್ಯ ಮಾಡುತ್ತಾ ಮುಂದಿನ ಬಾರಿ ತಿರುಗುತ್ತಿರುವ ಫ್ಯಾನ್ ನಲ್ಲಿ ಕಬ್ಬಿಣದ ರಾಡ್ ಹಾಕುವ ಚಾಲೆಂಜ್ ಸ್ವೀಕರಿಸಿ ಎಂದು ಹೇಳಿದರೆ, ಮತ್ತೊಬ್ಬರು ದೇಶಿಯ ಹೆಲಿಕಾಪ್ಟರ್ ಮಾಡುವ ಚಾಲೆಂಜನ್ನು ಸ್ವೀಕರಿಸಿ ಎಂದಿದ್ದಾರೆ. ಇನ್ನು ಕೆಲವರು ಬೈಕ್ ನಲ್ಲಿ ಹಿಂಭಾಗದಲ್ಲಿ ಕೂಡಾ ಟ್ಯಾಕ್ಟರ್ ಚಕ್ರವನ್ನು ಅಳವಡಿಸಿ ಎಂದು ಸಲಹೆ ನೀಡಿದ್ದಾರೆ.