ಟ್ರಾಫಿಕ್ ಪೊಲೀಸ್ ಜೊತೆ ರಸ್ತೆಯಲ್ಲಿಯೇ ಡಾನ್ಸ್ ಮಾಡಿದ ಬಹದ್ದೂರ್! ವಿಡಿಯೋ ಆಯ್ತು ಸೋಶಿಯಲ್ ಮೀಡಿಯಾದಲ್ಲಿ ವೈರಲ್…
ಸೋಶಿಯಲ್ ಮೀಡಿಯಾದಲ್ಲಿ ಎಲ್ಲಕ್ಕೂ ಹೆಚ್ಚು ಡಾನ್ಸ್ ಗಳನ್ನು ನೋಡಲು ಇಷ್ಟಪಡುತ್ತಾರೆ. ಅದರಲ್ಲೂ ಟ್ರೆಂಡಿಂಗ್ ಡಾನ್ಸ್ ಗಳಂತೂ ನೇಟಿಜನ್ಸ್ ತುಂಬಾನೇ ಇಷ್ಟ ಪಡುತ್ತಾರೆ. ಸದ್ಯ ಡಾನ್ಸ್ ನ ವಿಡಿಯೋ ಒಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಬಾಲಿವುಡ್ ಹಾಡಿಗೆ ಟ್ರಾಫಿಕ್ ಪೋಲಿಸ್ ನ ಜೊತೆಗೆ ಡಾನ್ಸ್ ಮಾಡಿದ್ದಾನೆ. ಪ್ರಸ್ತುತ ಡಾನ್ಸ್ ನೋಡಿ ನೆಟ್ಟಿಗರು ತುಂಬಾ ಪ್ರಭಾವಿತರಾಗಿದ್ದಾರೆ.
ಈ ವಿಡಿಯೋವನ್ನು ಐಪಿಎಸ್ ಅಧಿಕಾರಿಯಾದ ದಿಪಾಂಶು ಕಾಬ್ರಾ ಅವರು ತಮ್ಮ ಟ್ವಿಟರ್ ಅಕೌಂಟ್ ನಿಂದ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಶೇರ್ ಮಾಡುತ್ತಾ ಕಾಬ್ರಾ ಅವರು, ‘ಸಾರ್ವಜನಿಕರಿಗಾಗಿ ಕೆಲಸ ಮಾಡುವ ಗೆಳೆಯರ ಜೊತೆಗೆ ಸುಂದರ ಉದಾಹರಣೆ ನೀಡುವ ಕ್ಷಣಗಳು’ ಎಂದು ಬರೆದಿದ್ದಾರೆ. ವ್ಯಕ್ತಿಯು ಈ ವಿಡಿಯೋದಲ್ಲಿ ಅಮಿತಾಬಚ್ಚನ್ ಮತ್ತು ಪರ್ವೀನ್ ಬಾಬಿ ಅವರ ‘ಶಾನ್’ ಚಿತ್ರದಲ್ಲಿಯ ‘ಜಾನು ಮೇರಿ ಜಾನ್’ ಹಾಡಿಗೆ ಹೆಜ್ಜೆ ಹಾಕಿದ್ದಾನೆ.
ವಿಡಿಯೋ ನೋಡಿ
ऐसे पल #PublicPoliceFriendship के खूबसूरत उदहारण हैं! #DancingCop #DancingWithCop. pic.twitter.com/8Y11Nf5sOO
— Dipanshu Kabra (@ipskabra) April 25, 2022
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಇದನ್ನು ಇಲ್ಲಿಯವರೆಗೆ ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಹಾಗೆಯೇ ನೂರಾರು ಜನರು ಲೈಕ್ ಮಾಡುವುದರ ಜೊತೆಗೆ ತಮ್ಮ ಪ್ರತಿಕ್ರಿಯೆಗಳನ್ನು ಸಹ ನೀಡಿದ್ದಾರೆ. ಹೆಚ್ಚು ಕಡಿಮೆ ಎಲ್ಲರೂ ತಮ್ಮ ಪ್ರತಿಕ್ರಿಯೆಯಲ್ಲಿ ಈ ವಿಡಿಯೋವನ್ನು ಶ್ಲಾಘಿಸಿದ್ದಾರೆ.