ಟ್ರೈನ್ ಮತ್ತು ಜೆಸಿಬಿಯ ಅನಾಹುತ ಢಿಕ್ಕಿ! ಡ್ರೈವರ್ ಅದೃಷ್ಟವಶಾತ್ ಪಾರಾದ ವಿಡಿಯೋ ವೈರಲ್! ಮತ್ತೆ ಯಮರಾಜ empty ರಿಟರ್ನ್…
ರೈಲು ವೇಗವಾಗಿ ಓಡುತ್ತಿರುವಾಗ ಎದುರು ಬಂದ ಪ್ರತಿಯೊಂದು ವಸ್ತುಗಳು ಪೀಸ್ ಪೀಸ್ ಆಗುವುದರಲ್ಲಿ ಸಂಶಯವಿಲ್ಲ. ಆದರೆ ಸದ್ಯ ನೀವು ನೋಡುವ ಈ ವಿಡಿಯೋದಲ್ಲಿ ಒಂದು ಚಮತ್ಕಾರವೇ ಆಗಿದೆ ಎನ್ನಬಹುದು. ಏಕೆಂದರೆ ವೇಗವಾಗಿ ಓಡುತ್ತಿರುವ ರೈಲಿನ ಬಾಯಿಯಿಂದ ಜೆಸಿಬಿ ಮತ್ತು ಅದರ ಡ್ರೈವರ್ ಇಬ್ಬರು ಅದೃಷ್ಟವಶಾತ್ ಪಾರಾಗಿ ಬದುಕುಳಿದಿದ್ದಾರೆ. ಇದನ್ನು ನೋಡಿದ ಸೋಷಿಯಲ್ ಮೀಡಿಯಾದ ನೇಟಿಜನ್ಸ್ ಗಳು ಆಶ್ಚರ್ಯ ವ್ಯಕ್ತ ಮಾಡಿದ್ದಾರೆ. ಟ್ರೈನಿನ ಜೋರಾದ ಹೊಡೆತದ ನಂತರವೂ ಜೆಸಿಬಿ ಮತ್ತು ಅದರ ಡ್ರೈವರ್ ಇಬ್ಬರು ಸಂಪೂರ್ಣ ಸುರಕ್ಷಿತವಾಗಿ ಉಳಿದಿದ್ದಾರೆ.
ಒಟ್ಟಿನಲ್ಲಿ ಆದದ್ದೇನು?
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಜೆಸಿಬಿ ಚಾಲಕ ಜೆಸಿಬಿಯನ್ನು ತೆಗೆದುಕೊಂಡು ರೈಲ್ವೆ ಟ್ರ್ಯಾಕ್ ಕ್ರಾಸ್ ಮಾಡಲು ಹೋಗಿದ್ದಾನೆ. ಸರಿಯಾಗಿ ಅದೇ ಸಮಯಕ್ಕೆ ಟ್ರ್ಯಾಕ್ ಮೇಲಿಂದ ಗಾಳಿಯ ವೇಗದಲ್ಲಿ ಟ್ರೈನ್ ಒಂದು ಎದುರು ಬರುತ್ತಿತ್ತು. ಇದನ್ನು ಜೆಸಿಬಿ ಚಾಲಕ ಸ್ವಲ್ಪವೂ ಗಮನಿಸಿರಲಿಲ್ಲ. ಅದೇ ಕ್ಷಣಕ್ಕೆ ಟ್ರೈನ್ ಮತ್ತು ಜೆಸಿಬಿಯ ಅನಾಹುತ ಢಿಕ್ಕಿ ಸಂಭವಿಸಿದೆ. ಎರಡರ ಮಧ್ಯ ನಡೆದ ಢಿಕ್ಕಿ ಎಷ್ಟೊಂದು ಜೋರಾಗಿತ್ತು ಎಂದರೆ ಜೆಸಿಬಿ ಸ್ವಲ್ಪ ಹವೆಯಲ್ಲಿ ಉಡಾಯಿಸಿದೆ. ಮತ್ತು ಟ್ರೈನ್ ಹಾಗೆಯೇ ಸಹಜವಾಗಿ ಮುಂದೆ ಹೋಗುತ್ತದೆ. ಅಲ್ಲಿ ನಡೆದ ಚಮತ್ಕಾರವೇನೆಂದರೆ ಜೆಸಿಬಿ ಹಾಗೂ ಜೆಸಿಬಿ ಚಾಲಕ ಈ ಆಕ್ಸಿಡೆಂಟ್ನಲ್ಲಿ ಸುಖರೂಪವಾಗಿ ಉಳಿದಿದ್ದನ್ನು ನೋಡಬಹುದು.
ನೋಡಿ ಈ ವಿಡಿಯೋ…
ಪ್ರಸ್ತುತ ಈ ವಿಡಿಯೋ ಎಲ್ಲಿಯದು ಇದೆ ಎಂಬುದು ತಿಳಿದುಬಂದಿಲ್ಲ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದ ಪ್ಲಾಟ್ಫಾರ್ಮ್ ಆದ ಇನ್ಸ್ಟಾಗ್ರಾಂ ನಲ್ಲಿ rassmeshi_kota ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. 17 ಜನೇವರಿಗೆ ಅಪ್ಲೋಡ್ ಮಾಡಿದ ಈ ವಿಡಿಯೋವನ್ನು ಇಲ್ಲಿಯವರೆಗೆ ಸುಮಾರು ಎರಡು ಲಕ್ಷ ಜನ ವೀಕ್ಷಿಸಿದ್ದಾರೆ. ಮತ್ತು ಸಿಕ್ಕಾಪಟ್ಟೆ ಲೈಕ್ ಸಹ ಬಂದಿವೆ.