ಡರೆನ್ ಸ್ಯಾಮಿಗೆ ಕರಿಯ ಎಂದು ಹಿಯಾಳಿಸಿದ ಭಾರತೀಯ ಆಟಗಾರ ಯಾರು ಅಂತ ಗೊತ್ತಾಯಿತು, ಕರಿಯರ್ ಸಂಕಟದಲ್ಲಿ!

ವೆಸ್ಟ್ ಇಂಡೀಸ್ ದ ಮಾಜಿ ನಾಯಕ ಡರೆನ್ ಸ್ಯಾಮಿ ಭಾರತದ ಆಟಗಾರರಿಗೆ ಎಚ್ಚರಿಕೆ ಕೊತ್ತಿದ್ದಾರೆ. ಭಾರತೀಯ ಕ್ರಿಕೆಟ್ ಆಟಗಾರರ ಒಂದು ಫೋಟೋ ವೈರಲ್ ಆಗ್ತಾ ಇದೆ. ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಭಾರತದ ಆಟಗಾರರು ಸ್ಯಾಮಿಗೆ ಕಾಲೂ (ಕಪ್ಪು ಬಣ್ಣದವ, ಕರಿಯ) ಎಂದು ಟ್ಯಾಗ್ ಮಾಡಿದ್ದು ತಿಳಿದು ಬಂದಿದೆ. ಈ ಆಟಗಾರ ಯಾರು ನೋಡಿ!

IPL ಆಡುವಾಗ ವರ್ಣದ್ವೇಷದ ಹಿಂಸೆಗೆ ಬಲಿಯಾಗಿದ್ದೆ ಎಂದು ವೆಸ್ಟ್ ಇಂಡೀಸ್ ದ ನಾಯಕ ಡರೆನ್ ಸ್ಯಾಮಿ ಹೇಳಿದ್ದನು. ತದನಂತರ ಡರೆನ್ ಸ್ಯಾಮಿ ತನಗೆ ದ್ವೇಷಿಸಿದ ಆಟಗಾರರ ಹೆಸರು ಜಾಹೀರು ಮಾಡುತ್ತೇನೆಂದು ಧಮಕಾಯಿಸಿದ್ದರು. ಆದರೀಗ ಡರೆನ್ ಸ್ಯಾಮಿಗೆ ಕಾಲೂ ಅಂದಿದ್ದ ಭಾರತೀಯ ಆಟಗಾರ ಸಿಕ್ಕಿ ಬಿದ್ದಿದ್ದಾನೆ. ಈಗ ಆ ಆಟಗಾರನ ಕ್ರಿಕೆಟ್ ಜೀವನವೇ ಅಪಾಯದಲ್ಲಿ ಬಂದಿದೆ.

ಐಪಿಲ್ ನಲ್ಲಿ ಸನ್ ರೈಜರ್ಸ್ ಕಡೆಯಿಂದ ಆಡುವಾಗ ನನಗೆ ಮತ್ತು ಪರೇರಾಗೆ ಕಾಲೂ ಈ ಶಬ್ದದಿಂದ ಕರೆಯುತ್ತಿದ್ದರು, ಎಂದು ಡರೆನ್ ಸ್ಯಾಮಿ ಹೇಳಿದ್ದಾರೆ. ಮೊದಲು ನಾನು ಈ ಶಬ್ದದ ಅರ್ಥ ‘ಬಲವಾನ ಕುದುರೆ’ ಎಂದು ತಿಳಿದುಕೊಂಡಿದ್ದೆ. ಆದರೆ ಈ ಶಬ್ದದ ಅರ್ಥ ತಿಳಿದುಕೊಂಡ ನಂತರ ನನಗೆ ಪ್ರಚಂಡ ರೋಷ ಬರುತ್ತಿದೆ. ಐಪಿಲ್ ನಲ್ಲೂ ವರ್ಣದ್ವೇಷ ಆಗುತ್ತೆ ಮತ್ತು ನಾನು ಇದರ ಶಿಕಾರಿಯಾಗಿದ್ದೇನೆ ಎಂದು ಸ್ಯಾಮಿ ಹೇಳಿದ್ದಾರೆ.

View this post on Instagram

Me, bhuvi, kaluu and gun sunrisers

A post shared by Ishant Sharma (@ishant.sharma29) on

ಡರೆನ್ ಸ್ಯಾಮಿ ತನ್ನ ಜೊತೆಗೆ ಯಾವ ಪ್ರಕಾರವಾಗಿ ವರ್ಣದ್ವೇಷ ಮಾಡುತ್ತಿದ್ದರು ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾನೆ. ತನಗೆ ಹಿಯಾಳಿಸಿದ ಆಟಗಾರರ ಮೊಬೈಲ್ ನಂಬರನ್ನು ಸಹಿತ ಪಡೆದಿದ್ದಾನೆ. ಮತ್ತು ಅವರಿಗೆ ಮೇಸೆಜ್ ಸಹ ಕಳಿಸಿದ್ದಾನೆ. ಆ ಸಂದೇಶದಲ್ಲಿ ನೀವು ನನಗೆ ನನ್ನ ಪ್ರಶ್ನೆಯ ಉತ್ತರ ಕೊಡದಿದ್ದರೆ ನಾನು ನಿಮ್ಮೆಲ್ಲರ ಹೆಸರು ಜಾಹೀರು ಪಡಿಸುತ್ತೇನೆ ಎಂದು ಧಮ್ ಕೊಟ್ಟಿದ್ದಾನೆ. ಜೊತೆಗೆ ಒಂದು ವಿಡಿಯೋ ಶೇರ್ ಮಾಡಿದ್ದಾನೆ.

ಡರೆನ್ ಸ್ಯಾಮಿಗೆ ಕಾಲೂ ಎಂದ ಭಾರತದ ಆಟಗಾರ ಬೇರೆ ಯಾರೂ ಅಲ್ಲ, ಅವರ ಹೆಸರು ಇಶಾಂತ್ ಶರ್ಮಾ. ಇಬ್ಬರು ಐಪಿಲ್ ನಲ್ಲಿ ಸನ್ ರೈಜರ್ಸ್ ತಂಡದ ಕಡೆಯಿಂದ ಆಡುತ್ತಾರೆ. ಆಗ ಒಂದು ಕಾರ್ಯಕ್ರಮದಲ್ಲಿ ಇಶಾಂತ್ ಶರ್ಮಾ ಸ್ಯಾಮಿ ಜೊತೆಗೆ ಒಂದು ಫೋಟೋ ತೆಗಿಸಿಕೊಂಡಿದ್ದರು. ಆ ಫೋಟೋ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿ ಅದಕ್ಕೆ ಕಾಲೂ ಎಂದು ಕ್ಯಾಪ್ಶನ್ ಕೊಟ್ಟಿದ್ದರು. ಈ ಫೋಟೋ ಈಗ ತುಂಬಾನೇ ವೈರಲ್ ಆಗುತ್ತಿದೆ. ಆದ್ದರಿಂದ ಇಶಾಂತ್ ರ ಮೇಲೆ ಕಾನೂನು ಕ್ರಮ ಕೈಗೊಳ್ಳುವರು ಎಂಬುದು ನಿಶ್ಚಿತ ಎನ್ನುತ್ತಿದ್ದಾರೆ. ಈಗ ICC ಇಶಾಂತ್ ರ ಮೇಲೆ ಯಾವ ಕ್ರಮ ಕೈಗೊಳ್ಳುವದು ಕಾದು ನೋಡಬೇಕಾಗಿದೆ.