ಡಾನ್ಸ್ ನಲ್ಲೇ ಬೌಲಿಂಗ್ ಮತ್ತು ಬ್ಯಾಟಿಂಗ್ ಸ್ಟೆಪ್ ಹಾಕಿದ ಕ್ರಿಕೆಟ್ ಆಟಗಾರ ಯಜ್ವೇಂದ್ರ ಚಹಲ್ ಪತ್ನಿ: ಧನಾಶ್ರೀ ವರ್ಮಾ ಹೊಸ ವೀಡಿಯೋ ವೈರಲ್

ಭಾರತೀಯ ಕ್ರಿಕೆಟ್ ನ ಯುವ ಆಟಗಾರರಲ್ಲಿ ಯಜ್ವೇಂದ್ರ ಚಹಲ್ ಸಾಕಷ್ಟು ಜನಪ್ರಿಯತೆಯನ್ನು ತನ್ನದಾಗಿಸಿಕೊಂಡಿರುವ ಯುವ ಕ್ರಿಕೆಟ್ ಆಟಗಾರ ಎನಿಸಿಕೊಂಡಿದ್ದಾರೆ. ಯಜ್ವೇಂದ್ರ ಚಹಲ್ ಅವರು ಕ್ರಿಕೆಟ್ ನಲ್ಲಿ ಪ್ರಸಿದ್ಧಿಯನ್ನು ಪಡೆಯುತ್ತಿದ್ದರೆ, ಅವರ ಪತ್ನಿ ಧನಾಶ್ರೀ ವರ್ಮ ಸೋಶಿಯಲ್ ಮೀಡಿಯಾಗಳ ಡಾನ್ಸಿಂಗ್ ಸ್ಟಾರ್ ಆಗಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಗೆ ಪಾತ್ರರಾಗಿದ್ದಾರೆ. ಧನಾಶ್ರೀ ವರ್ಮಾ ಹಾಗಾಗಿ ಸೋಶಿಯಲ್ ಮೀಡಿಯಾ ಗಳಲ್ಲಿ ಬಾಲಿವುಡ್ ಸಿನಿಮಾಗಳು ಹಾಗೂ ಪಂಜಾಬಿಯ ಸಾಕಷ್ಟು ಜನಪ್ರಿಯತೆ ಹೊಂದಿರುವ ಸೂಪರ್ ಹಿಟ್ ಹಾಡುಗಳಿಗೆ ಅದ್ಭುತ ಎನಿಸುವಂತಹ ಸ್ಟೆಪ್ ಗಳನ್ನು ಹಾಕಿ, ಆ ಡ್ಯಾನ್ಸ್ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಧನಾಶ್ರೀ ವರ್ಮಾ ಶೇರ್ ಮಾಡುವ ವಿಡಿಯೋಗಳು ಕೆಲವೇ ದಿನಗಳಲ್ಲಿ ಭರ್ಜರಿಯಾಗಿ ವೈರಲ್ ಆಗುವುದು ಮಾತ್ರವೇ ಅಲ್ಲದೆ ಅಸಂಖ್ಯಾತ ಮೆಚ್ಚುಗೆಗಳನ್ನು ಕೂಡ ತನ್ನದಾಗಿಸಿಕೊಳ್ಳುತ್ತದೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ 4 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಮೂರನೇ ಪಂದ್ಯ ಫೆಬ್ರವರಿ 24ರಂದು ಗುಜರಾತಿನ ಅಹಮದಾಬಾದ್ ನಗರದಲ್ಲಿರುವ ಮೊಟೇರಾ ಸ್ಟೇಡಿಯಂ ನಲ್ಲಿ ನಡೆಯಲಿದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂದ್ಯವನ್ನಾಡಲು ಎರಡೂ ತಂಡಗಳು ಕೂಡ ಬಹಳಷ್ಟು ಉತ್ಸುಕವಾಗಿವೆ. ಈ ಪಂದ್ಯದಲ್ಲಿ ಭಾರತ ತಂಡವು ತನ್ನ ಸಂಪೂರ್ಣ ಶಕ್ತಿಯೊಂದಿಗೆ ಮೈದಾನಕ್ಕೆ ಇಳಿಯಲು ಸಜ್ಜಾಗಿದೆ. ಏಕೆಂದರೆ ಈ ಪಂದ್ಯದಲ್ಲೇನಾದರೂ ಸೋತರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪ್ರವೇಶ ಮಾಡಲು ಇರುವ ಎಲ್ಲಾ ಬಾಗಿಲುಗಳು ಮುಚ್ಚಿಕೊಳ್ಳುತ್ತವೆ ಎನ್ನುವ ಅರಿವು ಭಾರತ ಕ್ರಿಕೆಟ್ ತಂಡಕ್ಕೆ ಇದೆ.

ಈ ಪಂದ್ಯಕ್ಕಾಗಿ ಮೊಟೇರಾ ಸ್ಟೇಡಿಯಂ ಸರ್ವ ರೀತಿಯಲ್ಲಿ ಸಜ್ಜಾಗುತ್ತಿದೆ. ಪಂದ್ಯಕ್ಕಾಗಿ ಬೇಕಾಗಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಮ್ಯಾಚ್ ಇನ್ನೇನು ಕೆಲವೇ ದಿನಗಳಿವೆ ಎನ್ನುವಾಗ ಸ್ಟಾರ್ ಕ್ರಿಕೆಟರ್ ಯಜ್ವೇಂದ್ರ ಚಹಲ್ ಅವರ ಪತ್ನಿ ಧನಾಶ್ರೀ ವರ್ಮಾ ಒಂದು ಗುಜರಾತಿ ಹಾಡಿಗೆ ಡ್ಯಾನ್ಸ್ ಮಾಡಿದ್ದು, ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಧನಾಶ್ರೀ ವರ್ಮಾ ಶೇರ್ ಮಾಡಿಕೊಂಡ ವಿಡಿಯೋ ಎಂದಿನಂತೆ ಈ ಬಾರಿಯೂ ಕೂಡ ಭರ್ಜರಿ ವೈರಲ್ ಆಗಿ ಅವರ ಅಭಿಮಾನಿಗಳ ಅಪೂರ್ವವಾದ ಮೆಚ್ಚುಗೆಯೂ ಹರಿದು ಬರುತ್ತಿದೆ.

ಈ ವಿಡಿಯೋವನ್ನು ಧನಾಶ್ರೀ ವರ್ಮಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅವರು ಆದರೆ ಕ್ರಿಕೆಟ್ ನ ಬಣ್ಣದಲ್ಲಿ ಮಿಂದಿರುವಂತೆ ಕಾಣುತ್ತಿದ್ದು, ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದಾರೆ. ಗುಜರಾತಿ ಹಾಡಿಗೆ ಸಖತ್ ಸ್ಟೆಪ್ ಗಳನ್ನು ಹಾಕಿರುವ ಧನಾಶ್ರೀ ವರ್ಮಾ ಡ್ಯಾನ್ಸ್ ನ ನಡುವೆ ಬೌಲಿಂಗ್ ಮತ್ತು ಬ್ಯಾಟಿಂಗ್ ಮಾಡುವ ರೀತಿಯಲ್ಲಿ ನೃತ್ಯ ಭಂಗಿಗಳನ್ನು ತೋರಿಸಿದ್ದಾರೆ. ಧನಾಶ್ರೀ ವರ್ಮಾ ಶೇರ್ ಮಾಡಿಕೊಂಡ ಈ ಹೊಸ ಡ್ಯಾನ್ಸ್ ವಿಡಿಯೋ ಅವರ ಅಭಿಮಾನಿಗಳ ಮನಸ್ಸಿಗೆ ಮೆಚ್ಚುಗೆಯಾಗಿದೆ. ಅವರ ಅಭಿಮಾನಿಗಳಿಂದ ಸಾಕಷ್ಟು ಕಮೆಂಟ್ ಗಳು ಬರುತ್ತಿದ್ದು, ಅವರು ಡಾನ್ಸ್ ನೋಡಿ ಅದನ್ನು ಹಾಡಿ ಹೊಗಳುತ್ತಿದ್ದಾರೆ. ಈ ಹಾಡಿನಲ್ಲಿ ಧನಾಶ್ರೀ ಅಹಮದಾಬಾದಿಗೆ ಸಿದ್ಧವಾಗುವಂತೆ ಹೇಳುತ್ತಿದ್ದಾರೆ.

ಜನಪ್ರಿಯ ಡ್ಯಾನ್ಸರ್ ಮತ್ತು ಯೂಟ್ಯೂಬರ್ ಕೂಡಾ ಆಗಿರುವ ಧನಾಶ್ರೀ ವರ್ಮಾ ವೃತ್ತಿಯಿಂದ ಒಬ್ಬ ಡಾಕ್ಟರ್ ಆಗಿದ್ದಾರೆ. ಕಳೆದ ವರ್ಷ ಆಗಸ್ಟ್ ನಲ್ಲಿ ಕ್ರಿಕೆಟ್ ಆಟಗಾರ ಯಜ್ವೇಂದ್ರ ಚಹಲ್ ಹಾಗೂ ಧನಾಶ್ರೀ ವರ್ಮಾ ನಿಶ್ಚಿತಾರ್ಥ ಮಾಡಿಕೊಂಡು, ಈ ವಿಷಯವನ್ನು ಸೋಶಿಯಲ್ ಮೀಡಿಯಾ ಗಳ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಇದಾದನಂತರ ಯಜ್ವೇಂದ್ರ ಚಹಲ್ ಅವರು ದುಬೈನಲ್ಲಿ ನಡೆದಂತಹ ಐಪಿಎಲ್ ಹದಿಮೂರನೇ ಆವೃತ್ತಿಯಲ್ಲಿ ಪಾಲ್ಗೊಂಡಿದ್ದರು. ಅದು ಮುಗಿದ ನಂತರ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದ ಅವರು ಅಲ್ಲಿ ಲಿಮಿಟೆಡ್ ಓವರ್ ಸೀರೀಸ್ ಟೀಂನಲ್ಲಿ ಆಡಿದ್ದರು. ಅನಂತರ ಭಾರತಕ್ಕೆ ಹಿಂದಿರುಗಿದ್ದ ಅವರು ಡಿಸೆಂಬರ್ ನಲ್ಲಿ ಧನಾಶ್ರೀ ವರ್ಮಾ ಅವರ ಜೊತೆ ಸಪ್ತಪದಿ ತುಳಿದು ವಿವಾಹವಾಗಿದ್ದಾರೆ