ಡೈನೋಸಾರ ವೇಷ ಧರಿಸಿ ಮೊಸಳೆ ಮುಂದೆ ನಿಂತ ವ್ಯಕ್ತಿ; ಮುಂದೇನಾಯಿತು ನೋಡಿ ಈ ವೈರಲ್ Video

ಮೊಸಳೆಗಳು ಅಂದ್ರೆ ಸಹಜವಾಗಿಯೇ ಭಯವನ್ನು ಹುಟ್ಟಿಸುವ ಜೀವಿಗಳು. ಮೊಸಳೆ ಎಂದರೆ ಸಾಮಾನ್ಯವಾಗಿ ಜನ ಭಯಪಡೋದನ್ನ ಗಮನಿಸಿದ್ದೇವೆ ಕೂಡಾ. ಮೊಸಳೆಗಳನ್ನು ನೋಡಿದರೆ ಒಂದು ರೀತಿಯ ಭಯ ತನಗೆ ತಾನೆ ಹುಟ್ಟಿಕೊಳ್ಳುತ್ತದೆ. ಇನ್ನು ಮೊಸಳೆಯ ಬಾಯಿಗೆ ಸಿಕ್ಕ ಜೀವಿಗಳಂತೂ, ಮರಳಿ ಜೀವಂತವಾಗಿ ವಾಪಸ್ಸು ಬರೋದು ಅಸಾಧ್ಯವೆಂದೇ ಹೇಳಬಹುದು. ಇನ್ನೂ ಕೆಲವು ಸಲ ಕೆಲವರಿಗೆ ಗಾತ್ರದಲ್ಲಿ ದೊಡ್ಡದಾಗಿರೋ ಮೊಸಳೆಗಳನ್ನು ನೋಡಿದಾಗ, ದೂರದಲ್ಲಿ ನಿತ್ಕೊಂಡು ಅದರ ಚಲನವಲನಗಳನ್ನು ಗಮನಿಸೋವಾಗಲೇ, ದೇಹದಲ್ಲಿ ಒಂದು ಭಯದ ಕಂಪನ ಉಂಟಾಗುತ್ತದೆ. ಅಂತಹವರ ಹತ್ತಿರಕ್ಕೇನಾದ್ರೂ ಮೊಸಳೆ ಬಂದರೆ ಅಷ್ಟೇ? ಮುಂದೇನಂತ ಊಹೆ ಮಾಡೋದು ಕೂಡಾ ಕಷ್ಟ. ಇಂತಹ ಭಯಾನಕ ಜೀವಿಯ ಮುಂದಕ್ಕೆ ಹೋಗ್ಬೇಕು ಅಂದ್ರೆ ನಿಜವಾಗ್ಲೂ ಆ ವ್ಯಕ್ತಿಗೆ ಒಂದು ಭಂಡ ಧೈರ್ಯ ಅಂತೂ ಇರಲೇಬೇಕು.

ಇಲ್ದೇ ಹೋದ್ರೆ ತಾನೇ ತನ್ನ ಪ್ರಾಣಕ್ಕೆ ಸರಕಾರವನ್ನು ತಂದುಕೊಳ್ಳೋದು ಮಾತ್ರ ಸ್ಪಷ್ಟ.‌ ಹೀಗೆ ಇಷ್ಟೆಲ್ಲಾ ಅಪಾಯಕಾರಿ ಅನಿಸೋ ಮೊಸಳೆಗಳ ಮುಂದಕ್ಕೆ ಹೋಗಬೇಕು ಎಂದರೆ ಅದು ತರಬೇತಿ ಪಡೆದಿರುವವರಿಂದ ಮಾತ್ರವೇ ಸಾಧ್ಯ. ಯಾವುದೇ ತರಬೇತಿ ಇಲ್ಲದೆ ಹತ್ತಿರ ಸುಳಿದರೆ ಅದೃಷ್ಟವೇನಾದರೂ ಕೆಟ್ಟಿದ್ದರೆ ಮೊಸಳೆಯ ಬಾಯಿಗೆ ಸಿಕ್ಕು, ಮ ಸ ಣ ಸೇರೋದು ಮಾತ್ರ ನಿಶ್ಚಿತ. ಸೋಶಿಯಲ್ ಮೀಡಿಯಾ ಗಳಲ್ಲಿ ಒಂದು ವಿಡಿಯೋ ಎಲ್ಲರ ಗಮನವನ್ನು ಬಹಳವಾಗಿ ಸೆಳೆದಿದೆ. ಈ ವಿಡಿಯೋದಲ್ಲಿ ಮೊಸಳೆ ಮುಂದೆ ನಿಂತು ಅದಕ್ಕೆ ಮೀನನ್ನ ತೋರಿಸಿಕೊಂಡು ಒಬ್ಬ ವ್ಯಕ್ತಿ ಅದರ ಮುಂದೆ ಆಟವಾಡ್ತಾ, ಮೊಸಳೆಯನ್ನು ಕೆಣಕೋದನ್ನು ನಾವು ನೋಡಬಹುದು.

ನಿಜವಾಗಲೂ ಆತನ ಈ ಕಾರ್ಯದಲ್ಲಿ ಆತನ ಭಂ ಡ ಧೈರ್ಯವನ್ನು ಮೆಚ್ಚಲೇಬೇಕು ಅನಿಸುತ್ತೆ. ಇಷ್ಟಕ್ಕೂ ಈ ಘಟನೆ ನಡೆದಿರುವುದು ಎಲ್ಲಿ ಅನ್ನೋದಾದ್ರೆ, ಈ ಘಟನೆ ನಡೆದಿರೋದು ಕೊಲೆರಾಡೋ ದಲ್ಲಿ. ಅಲ್ಲಿ 35 ವರ್ಷದ ಜೇಸನ್ ಮೆಕ್ಡೊನಾಲ್ಡ್ಸ್ ಎನ್ನೋ ವ್ಯಕ್ತಿ ಮೊಸಳೆ ಮುಂದೆ ನಿಂತು ಅದನ್ನು ಕೆಣಕುವ ಪ್ರಯತ್ನಕ್ಕೆ ಕೈಹಾಕಿದ್ದಾನೆ. ವಿಶೇಷವೇನೆಂದರೆ ಆತ ಸಾಮಾನ್ಯ ರೂಪದಲ್ಲಿ ಮೊಸಳೆ ಮುಂದಕ್ಕೆ ಹೋಗಿಲ್ಲ. ಬದಲಾಗಿ ತಾನು ಒಂದು ಡೈನೋಸಾರ್ ತರ ಡ್ರೆಸ್ ಧರಿಸಿಕೊಂಡು ಮೊಸಳೆ ಮುಂದಕ್ಕೆ ಹೋಗಿದ್ದಾನೆ. ಸಾಲದಕ್ಕೆ ಕೈಯಲ್ಲಿ ಒಂದು ಮೀನನ್ನು ಕೂಡಾ ಹಿಡ್ಕೊಂಡು ಆ ಮೊಸಳೆಗೆ ಅದನ್ನು ತೋರಿಸಿ ಅದನ್ನು ರೇಗಿಸುವ ಕೆಲಸ ಮಾಡಿದ್ದಾನೆ.

ಡೈನೋಸರ್ ವೇಷದಲ್ಲಿ ಈ ವ್ಯಕ್ತಿ ಮಾಡಿದ ಚೇಷ್ಟೆಗಳನ್ನು ನೋಡಿದ ಮೊಸಳೆ ಕೂಡ ಬಹಳ
ಸಿ ಟ್ಟು ನೀಡುತ್ತಾ, ಬಾಯಿ ತೆರೆದು ಅರಚುತ್ತಾ ತನ್ನ ಪ್ರತಿಕ್ರಿಯೆಗಳನ್ನು ನೀಡಿರುವುದನ್ನು ನಾವು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಒಂದು ವೇಳೆ ಆ ಮೊಸಳೆಗೆ ಸಿಕ್ಕಾಪಟ್ಟೆ ಹಸಿವೇನಾದರೂ ಆಗಿದಿದ್ರೆ ಅದು ಡೈನೋಸಾರ್ ತರ ಡ್ರೆಸ್ ಮಾಡಿಕೊಂಡು ವ್ಯಕ್ತಿಯ ಮೇಲೆ ಆ ಕ್ರ ಮ ಣ ಮಾಡಿದಿದ್ರೆ ಎಂತ ಅನಾಹುತ ಆಗಿರ್ತಿತ್ತು ಅಂತ ನಾವು ಊಹಿಸಿಕೊಂಡರೂ ಕೂಡಾ ಭಯ ಆಗುತ್ತೆ. ಜೇಸನ್ ಕೂಡಾ ತಾನು ಡೈನೋಸರ್ ತರ ಹೋಗಿದ್ದು ತಮಾಷೆ ಆದ್ರೂ ಆ ಮೊಸಳೆ ನೀರಿನಿಂದ ಹೊರಗೆ ಬಂದಿದ್ರೆ ಜೀವನದ ಕೆ ಟ್ಟ ದಿನ ಅದು ಆಗಿರ್ತಿತ್ತು ಎನ್ನುತ್ತಾನೆ.

ವಿಡಿಯೋ ನೋಡಿ

ಆತ ಮೊಸಳೆಯನ್ನು ಗೇಲಿ ಮಾಡಿದ ದೃಶ್ಯವನ್ನು ಸುತ್ತ ಮುತ್ತ ಕೆಲವರು ವೀಡಿಯೋ ಮಾಡುತ್ತಾ ದೂರದಿಂದಲೇ ಅರಚುವುದು ಕೂಡಾ ಕೇಳುತ್ತದೆ. ಈ ವೀಡಿಯೋವನ್ನು ಈಗಾಗಲೇ ಒಂದು ಕೋಟಿಗಿಂತಲೂ ಅಧಿಕ ಜನರು ವೀಕ್ಷಣೆಯನ್ನು ಮಾಡಿದ್ದಾರೆ. ಲಕ್ಷಾಂತರ ಜನರು ಅದಕ್ಕೆ ಲೈಕ್ ಕೂಡಾ ಒತ್ತಿದ್ದಾರೆ. ಏನೇ ಆದರೂ ಡೈನೋಸಾರ್ ವೇಷ ಧರಿಸಿ ಮೊಸಳೆಯ ಮುಂದೆ ಹೋದ ವ್ಯಕ್ತಿಯ ಅದೃಷ್ಟ ಮಾತ್ರ ಚೆನ್ನಾಗಿತ್ತು, ಅದಕ್ಕೆ ಮೊಸಳೆ ಕೂಡಾ ಸಿಟ್ಟಿನಿಂದ ಪ್ರತಿಕ್ರಿಯೆ ನೀಡಿ ಸುಮ್ಮನಾಗಿದೆಯೇ ಹೊರತು ನೀರಿನಿಂದ ಹೊರಗೆ ಬಂದು ಆ ಕ್ರ ಮ ಣ ಮಾಡಲು ಮುಂದಾಗಿಲ್ಲ.