ಡ್ಯಾನ್ಸ್ ಮಾಡುವಾಗಲೇ ವೇದಿಕೆ ಮೇಲೆ ತನ್ನ ಡ್ರೆಸ್ ಬದಲಿಸಿಕೊಂಡ ಯುವತಿ: ಶಾಕ್ ಅದ ಜನ! ನೋಡಿ ಈ Video

ಸೋಶಿಯಲ್ ಮೀಡಿಯಾ ಗಳು ವಿಶ್ವದ ಜನರನ್ನು ಸಂಪರ್ಕಿಸುವ ಬಹುದೊಡ್ಡ ಮಾಧ್ಯಮಗಳಾಗಿ ವಿಶ್ವದೆಲ್ಲೆಡೆ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತಿದೆ. ಇಲ್ಲಿ ಪ್ರತಿ ನಿಮಿಷದಲ್ಲಿ ಕೂಡಾ ವಿಶ್ವದ ಮೂಲೆ ಮೂಲೆಗಳಿಂದ ಜನರು ವೈವಿಧ್ಯಮಯವಾದ ಫೋಟೋಗಳು, ವಿಡಿಯೋಗಳು, ಘಟನೆಗಳು, ಹೊಸ ವಿಷಯಗಳು ಹಾಗೂ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇಂತಹವುಗಳಲ್ಲಿ ಕೆಲವು ವಿಶೇಷ ವಿಡಿಯೋಗಳು ಜನರ ಮನಸ್ಸಿಗೆ ಬಹಳ ಹಿಡಿಸುವುದು ಮಾತ್ರವಲ್ಲದೇ ಅವು ಕೆಲವೇ ಗಂಟೆಗಳಲ್ಲಿ ವಿಶ್ವದಾದ್ಯಂತ ವೈರಲ್ ಆಗಿಬಿಡುತ್ತವೆ
ಈ ವಿಡಿಯೋಗಳು ನೀಡುವ ಮನರಂಜನೆಯ ಕಾರಣದಿಂದಾಗಿ ಅವುಗಳನ್ನು ಹೆಚ್ಚು ಹೆಚ್ಚು ಜನರು ಶೇರ್ ಮಾಡಿಕೊಂಡು ಖುಷಿ ಪಡುವುದು ಸಾಮಾನ್ಯ. ಅಂತಹುದೇ ಒಂದು ವೈರಲ್ ವೀಡಿಯೋ ವಿಷಯವನ್ನು ನಾವೀಗ ಹೇಳಲು ಹೊರಟ್ಟಿದ್ದೇವೆ.

ಈ ವೈರಲ್ ನೋಡಿದ ಪ್ರತಿಯೊಬ್ಬರು ಕೂಡಾ ಬಹಳ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ವೈರಲ್ ಆಗಿರುವ ಈ ಡ್ಯಾನ್ಸ್ ವಿಡಿಯೋದಲ್ಲಿ ಮಹಿಳಾ ಡ್ಯಾನ್ಸರ್ ಮಾಡಿದಂತಹ ಒಂದು ಅದ್ಭುತವಾದಂತಹ ಕೆಲಸವನ್ನು ನೆಟ್ಟಿಗರು ಬೆರಗು ಕಣ್ಣುಗಳಿಂದ ನೋಡುತ್ತಿದ್ದಾರೆ. ಇದು ಹೇಗೆ ಸಾಧ್ಯವಾಯಿತು? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಒಂದು ಡ್ಯಾನ್ಸ್ ವಿಡಿಯೋ ಭರ್ಜರಿಯಾಗಿ ವೈರಲಾಗುತ್ತಿದ್ದು, ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋಗೆ ಅಸಂಖ್ಯಾತ ಮೆಚ್ಚುಗೆಗಳು ಹಾಗೂ ಕಾಮೆಂಟ್ ಗಳು ಹರಿದುಬರುತ್ತಿದೆ. ಡ್ಯಾನ್ಸ್ ಪರ್ಫಾರ್ಮೆನ್ಸ್ ನಡೆಯುತ್ತಿರುವಾಗಲೇ ಡಾನ್ಸರ್ ಮಹಿಳೆಯು ಮಾಡುವಂತಹ ಕೆಲಸವನ್ನು ನೋಡಿದವರು ದಿಗ್ಭ್ರಾಂತರಾಗಿದ್ದಾರೆ.

ಡ್ಯಾನ್ಸ್ ಮಾಡುತ್ತಿರುವಾಗಲೇ ಡಾನ್ಸರ್ ಮಹಿಳೆ ತಾನು ತೊಟ್ಟಿದ್ದ ಡ್ರೆಸ್ ಬದಲಾಯಿಸಿದ್ದಾಳೆ. ಡ್ಯಾನ್ಸ್ ಮಾಡುವಾಗಲೇ ತನ್ನ ಡ್ರೆಸ್ ಅನ್ನು ಬದಲಾಯಿಸಿದ ಯುವತಿಯ ಚಾಣಾಕ್ಷತನವನ್ನು ಕಂಡು ಡ್ಯಾನ್ಸ್ ನೋಡುತ್ತಿದ್ದವರೆಲ್ಲ ಅತ್ಯಾಶ್ಚರ್ಯವನ್ನುವ ವ್ಯಕ್ತಪಡಿಸಿದ್ದಾರೆ. ಕೇವಲ ಡ್ಯಾನ್ಸ್ ನೋಡುತ್ತಿದ್ದ ವೀಕ್ಷಕರು ಮಾತ್ರವಲ್ಲದೇ ಆಕೆಯ ಜೊತೆ ಡ್ಯಾನ್ಸ್ ಮಾಡುತ್ತಿದ್ದ ಪುರುಷ ಡ್ಯಾನ್ಸರ್ ಕೂಡಾ ಒಂದು ಕ್ಷಣ ದಿಗ್ಬ್ರಾಂತನಾದಂತೆ ಎಕ್ಸ್ಪ್ರೆಷನ್ ನೀಡಿದ್ದಾನೆ. ಈ ವಿಡಿಯೋವನ್ನು ಸಿನಿಮಾ ನಿರ್ಮಾಪಕ ಶಿರೀಶ್ ಕುಂದರ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅವರು ಶೇರ್ ಮಾಡಿದ ಈ ವೀಡಿಯೋವನ್ನು ನೆಟ್ಟಿಗರು ಮತ್ತೆ ಮತ್ತೆ ನೋಡುತ್ತಿದ್ದಾರೆ.

ಪ್ರತಿಬಾರಿಯ ವೀಡಿಯೋ ನೋಡುವವರ ಮನಸ್ಸಿನಲ್ಲಿ ಮೂಡುತ್ತಿರುವ ಪ್ರಶ್ನೆ ಒಂದೇ.. ಡ್ಯಾನ್ಸ್ ಮಾಡುತ್ತಿರುವಾಗಲೇ, ಡಾನ್ಸಿಗೆ ತಕ್ಕ ಹೆಜ್ಜೆಗಳನ್ನು ಹಾಕುತ್ತಿರುವಾಗಲೇ ಆ ಯುವತಿ ತನ್ನ ಡ್ರೆಸ್ ಅನ್ನು ಹೇಗೆ ಬದಲಾಯಿಸಿಕೊಂಡಳು? ಎನ್ನುವುದು. ಅದನ್ನು ತಿಳಿಯುವುದಕ್ಕಾಗಿ ಅನೇಕ ಮಂದಿ ಡ್ಯಾನ್ಸ್ ಅನ್ನು ಮತ್ತೆ ಮತ್ತೆ ನೋಡುತ್ತಿದ್ದಾರೆ. ವಿಡಿಯೋದಲ್ಲಿ ಗಮನಿಸಿದಾಗ ಡಾನ್ಸ್ ಆರಂಭವಾದಾಗ ಯುವತಿ ತನ್ನ ಪಾರ್ಟ್ನರ್ ಜೊತೆಗೆ ನೀಲಿ ಬಣ್ಣದ ಡ್ರೆಸ್ಸನ್ನು ತೊಟ್ಟು ಡ್ಯಾನ್ಸ್ ಮಾಡಲು ಆರಂಭಿಸುತ್ತಾಳೆ. ಹಾಗೆ ಡ್ಯಾನ್ಸ್ ಮಾಡುತ್ತಿರುವಾಗ ಸ್ವಲ್ಪ ಸಮಯದ ನಂತರ ಆಕೆಯ ನೀಲಿ ಬಣ್ಣದ ಡ್ರೆಸ್ ಬಂಗಾರದ ಬಣ್ಣದ ಡ್ರೆಸ್ ಆಗಿ ಬದಲಾಗಿಬಿಡುತ್ತದೆ.

ವಿಡಿಯೋ ನೋಡಿ

ಡಾನ್ಸ್ ನಲ್ಲಿನ ಈ ಟ್ರಿಕ್ ಅನ್ನು ನೋಡಿದ ಜನರು ಆ ಕ್ಷಣದಲ್ಲಿ ಶಾಕ್ ಆಗುವುದು ಮಾತ್ರವಲ್ಲದೇ, ಆ ಐಡಿಯಾ ಕ್ಕೆ ಮೆಚ್ಚುಗೆ ನೀಡಲು ಜೋರಾಗಿ ಚಪ್ಪಾಳೆ ತಟ್ಟಲು ಪ್ರಾರಂಭಿಸುತ್ತಾರೆ. ವಿಡಿಯೋ ನೋಡಿದ ಜನರು ಕೂಡಾ ಇದೆಲ್ಲ ಹೇಗೆ ಸಾಧ್ಯವಾಯಿತು? ಎಂದು ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಇನ್ನು ಆ ಯುವತಿಯು ಯಾವ ಟ್ರಿಕ್ ಅನ್ನು ಬಳಸಿಕೊಂಡು ತನ್ನ ಡ್ರೆಸ್ ಅನ್ನು ಬದಲಿಸಿದಳು ಎನ್ನುವುದನ್ನು ನೋಡಬೇಕಾದರೆ ವೈರಲ್ ಆಗಿರುವ ವಿಡಿಯೋವನ್ನು ಬಹಳ ಆಸಕ್ತಿಯಿಂದ ಗಮನವಿಟ್ಟು ನೋಡಿದಾಗ ತಿಳಿಯುತ್ತದೆ. ಈಗಾಗಲೇ ಸಾವಿರಾರು ಜನ‌ ಈ ವೀಡಿಯೋ ನೋಡಿ ತಮ್ಮ ಮೆಚ್ಚುಗೆಯನ್ನು ನೀಡುತ್ತಾ ಸಾಗಿದ್ದಾರೆ.‌