ಡ್ಯಾನ್ಸ್ ಮುಖಾಂತರವೇ ಟ್ರಾಫಿಕ್ ಡ್ಯೂಟಿ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಡ್ಯಾಶಿಂಗ್ ಪೊಲೀಸ್ ವಿಡಿಯೋ ವೈರಲ್!

ಪ್ರತಿಯೊಬ್ಬರ ಕೆಲಸ ಮಾಡುವ ಪದ್ಧತಿ ತುಂಬಾ ಬೇರೆ ಬೇರೆಯಾಗಿರುತ್ತದೆ. ಅದರಲ್ಲೂ ತಾವು ಮಾಡುತ್ತಿರುವ ಸರ್ವಿಸ್ ನಲ್ಲಿ ಕೆಲವೇ ಜನರು ಸಂತುಷ್ಟರಾಗಿರುತ್ತಾರೆ. ತಾವು ಮಾಡುವ ಜಾಬ್ ಕೆಲವರಿಗಷ್ಟೇ ಖುಷಿ ನೀಡುತ್ತದೆ, ಎಂದರೆ ಬಹುಶಃ ತಪ್ಪಲ್ಲ. ಕಾರಣ ಹೆಚ್ಚುವರಿ ಜನರಿಗೆ ತಮ್ಮ ಸರ್ವಿಸ್ ಗಿಂತಲೂ ಇನ್ನೊಬ್ಬರ ಸರ್ವಿಸ್ ತುಂಬಾ ಇಷ್ಟವಾಗುತ್ತಿರುತ್ತದೆ, ಅಲ್ವಾ? ಜೊತೆಗೆ ಇನ್ನೊಂದು ವಿಷಯ ಹೇಳಬೇಕಾದರೆ ಕೆಲವೇ ಜನರು ತಮ್ಮ ಡ್ಯೂಟಿಯನ್ನು ತುಂಬಾ ಖುಷಿ ಖುಷಿಯಾಗಿ ಉತ್ಸಾಹದಿಂದ ಮಾಡುತ್ತಿರುತ್ತಾರೆ. ಅಂಥವರಲ್ಲಿಯೇ ಒಬ್ಬರಾದ ಈ ಟ್ರಾಫಿಕ್ ಪೊಲೀಸ್ ಒಬ್ಬರು ಇದ್ದಾರೆ. ಇವರದೇ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಪ್ರಸ್ತುತ ವಿಡಿಯೋ ಮಧ್ಯಪ್ರದೇಶದ ಇಂದೋರ್ ನಲ್ಲಿಯದಿದೆ ಎಂದು ತಿಳಿದು ಬಂದಿದೆ. ಈ ವಿಡಿಯೋದ ದೃಶ್ಯದಲ್ಲಿ ಟ್ರಾಫಿಕ್ ಪೊಲೀಸ್ ಒಬ್ಬರು ಸರ್ಕಲ್ ನಲ್ಲಿ ನಿಂತು ಅಲ್ಲ ಡಾನ್ಸ್ ಮಾಡುತ್ತಾ ತುಂಬಾ ವಿಶೇಷವಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಈ ವಿಡಿಯೋ ನೋಡಲು ನಿಜಕ್ಕೂ ತುಂಬಾ ಮಜವಾಗಿದೆ. ಹಾಗೂ ಈ ವಿಡಿಯೋ ನೆಟ್ಟಿಗರಿಗೆ ತುಂಬಾ ಇಷ್ಟವೂ ಆಗಿದೆ. ಇವರು ಈ ರೀತಿಯಾಗಿ ಬಿಸಿಲಲ್ಲಿ ಡಾನ್ಸ್ ಮಾಡಿ ಸೇವೆ ಸಲ್ಲಿಸುತ್ತಿರುವದರಿಂದ ಟ್ರಾಫಿಕ್ ನಲ್ಲಿ ಸಿಗ್ನಲ್ ದೊರೆಯುವವರೆಗೆ ನಿಂತ ಜನರಿಗೆ ಮನರಂಜನೆಯು ಸಹ ಸಿಗುತ್ತಿದೆ. ಅವರ ಬಾಡಿ ಲ್ಯಾಂಗ್ವೇಜ್ ತುಂಬಾ ಪ್ರಭಾವಪೂರ್ಣವಾಗಿದೆ. ಸದೃಢ ದೇಹದ ಈ ಪೋಲಿಸಪ್ಪ ನಿಜಕ್ಕೂ ಡ್ಯಾಶಿಂಗ್ ನಟನ ಹಾಗೆ ಕಾಣುತ್ತಿದ್ದಾರೆ.

ವಿಡಿಯೋ ನೋಡಿ

ಈ ವೀಡಿಯೋವನ್ನು ‘ಜಿಪ್ಸಿ ಸ್ಪಿರಿಟ್ ಇಂಡಿಯಾ’ ಹೆಸರಿನ ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ಲಕ್ಷಾವಧಿ ವೀಕ್ಷಣೆ ಪಡೆದಿದೆ. ಹಾಗೂ ಸಾವಿರಾರು ಸಂಖ್ಯೆಯಲ್ಲಿ ಲೈಕ್ ಪಡೆದಿದೆ.