ತಂದೆಯ ವಿರುಧ್ಧ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ 24 ವರ್ಷದ ಮಗಳು; ಕಾರಣ ಕೇಳಿ ದಂಗಾದ ನ್ಯಾಯಮೂರ್ತಿ!
ಮಧ್ಯಪ್ರದೇಶದ ರಾಜಧಾನಿ ಭೂಪಾಲ್ ನಲ್ಲಿ ಒಂದು ವಿಚಿತ್ರ ಎನಿಸುವ ಸಂಗತಿ ಅಥವಾ ಘಟನೆಯು ಸುದ್ದಿಯಾಗಿದೆ. ಇಲ್ಲಿನ ಕುಟುಂಬ ಕ” ಲಹಗಳ ಕೋರ್ಟ್ ನ ಮುಂದೆ ಒಂದು ದೂರು ಬಂದಾಗ ಪ್ರತಿಯೊಬ್ಬರಿಗೂ ಕೂಡಾ ಅದು ಒಂದು ಶಾಕ್ ಅಥವಾ ದಿ” ಗ್ಭ್ರಮೆಯನ್ನು ಮೂಡಿಸುವಂತಾಗಿತ್ತು. ಈ ಹಿಂದೆ ಅಂತಹುದೊಂದು ದೂರು ಬಂದಿರುವ ಇತಿಹಾಸವಿಲ್ಲ. ಅಲ್ಲದೇ ಅಂತಹುದೊಂದು ದೂರನ್ನು ಕೋರ್ಟ್ ಗೆ ನೀಡಲಾಗುವುದು ಎಂದು ಯಾರೊಬ್ಬರೂ ಊಹಿಸದ ಕಾರಣ ಅದೊಂದು ವಿಚಿತ್ರವಾದ ಅನುಭವವನ್ನು ನೀಡಿತ್ತು. ಇಲ್ಲಿ ಕುಟುಂಬ ವ್ಯಾ” ಜ್ಯಗಳ ಕೋರ್ಟ್ ನ ಮುಂದೆ ಯುವತಿಯೊಬ್ಬಳು ತನ್ನ ತಂದೆಯ ಮೇಲೆ ದೂರನ್ನು ದಾಖಲು ಮಾಡಿದ್ದಳು.
ಆಸ್ತಿ ವಿಚಾರಕ್ಕೋ, ಮಾನಸಿಕ ವೇ” ದನೆ ಅಥವಾ ದೈ” ಹಿಕ ಹಿಂ #ಸೆ ನೀಡಿರುವ ವಿಚಾರಕ್ಕೋ ಯುವತಿ ದೂರು ದಾಖಲಿಸಿದ್ದಾಳೆ ಎಂದು ನೀವು ಅಂದುಕೊಂಡರೆ ಅದು ತಪ್ಪು. ಈ ಯುವತಿ ತನ್ನ ತಂದೆ ಲೂಡೋ ಗೇಮ್ ನಲ್ಲಿ ಚೀ ಟಿಂಗ್ ಮಾಡಿದ್ದಾರೆ ಎಂದು, ಅವರ ಮೇಲೆ ವಿಚಾರಣೆ ನಡೆಸಿ ತನಗೆ ನ್ಯಾಯ ದೊರಕಿಸಿಕೊಡಬೇಕೆಂದು ಮನವಿ ಮಾಡುವ ಜೊತೆಗೆ, ಆ ಘಟನೆಯ ನಂತರ ಅವರು ಈಗ ತನ್ನ ತಂದೆಯಾಗಿ ಉಳಿದಿಲ್ಲ ಎಂದು ಹೇಳಿದ್ದಾಳೆ. ಯುವತಿಯು ತಂದೆಯ ಮೇಲೆ ಒಂದು ಗೇಮ್ ವಿಚಾರದಲ್ಲಿ ಮಾಡಿರುವ ಆ” ರೋ ಪವನ್ನು ಕಂಡು ಎಲ್ಲರೂ ದಂಗಾಗಿ ಹೋಗಿದ್ದಾರೆ. ಹೀಗೂ ಉಂಟಾ? ಎಂದು ಆಶ್ಚರ್ಯಚಕಿತರಾಗಿದ್ದಾರೆ.

24 ವರ್ಷದ ಯುವತಿ ಮನೆಯಲ್ಲಿ ತನ್ನ ತಂದೆಯೊಡನೆ ಲುಡೋ ಗೇಮ್ ಆಡುವ ಸಂದರ್ಭದಲ್ಲಿ ಆಕೆಯ ತಂದೆ ಆಟದಲ್ಲಿ ಗೆಲ್ಲಬೇಕೆಂದು ಮೋಸ ಮಾಡಿ ಆಟವನ್ನು ಗೆದ್ದಿದ್ದಾರೆ ಎಂದು ಆ ರೋ ಪ ಮಾಡಿದ್ದು, ತನಗೆ ಜೀವನದಲ್ಲಿ ತನ್ನ ತಂದೆಯ ಮೇಲೆ ಅಪಾರವಾದ ನಂಬಿಕೆ, ವಿಶ್ವಾಸ ಹಾಗೂ ಗೌರವವಿತ್ತು. ಆದರೆ ಅಂತಹವರು ಈ ರೀತಿ ಮಾಡಿ ಮಗಳನ್ನು ಆಟದಲ್ಲಿ ಸೋಲಿಸಲು ಮೋ ಸ ಮಾಡುವರು ಎಂದು ಊಹಿಸಿರಲಿಲ್ಲ, ಆ ಘಟನೆಯ ನಂತರ ತನಗೆ ತನ್ನ ತಂದೆಯ ಮೇಲಿದ್ದ ವಿಶ್ವಾಸವು ಸಂಪೂರ್ಣವಾಗಿ ಮುರಿದು ಹೋಗಿದೆ. ಅದೊಂದು ಆಟವೇ ಇರಬಹುದು ಆದರೆ ತಂದೆ ಮಾಡಿದ ಕೆಲಸ ನನಗೆ ಬಹಳ ಬೇಸರನ್ನು ಮೂಡಿಸಿದೆ, ಅದಕ್ಕೆ ಅವರು ಮಾಡಿರುವ ಈ ಮೋ ಸಕ್ಕೆ ವಿಚಾರಣೆಯನ್ನು ನಡೆಸಿ ನನಗೆ ನ್ಯಾಯ ಕೊಡಿಸಿ ಎಂದಿದ್ದಾಳೆ.
ಅಲ್ಲದೇ ಯುವತಿಯು ಮಗಳಿಗಾಗಿ ಅವರು ಸೋಲಬಹುದಿತ್ತು ಆದರೆ ಹಾಗೆ ಮಾಡದೇ ಮೋಸದ ಆಟ ಆಡಿರುವುದು ಮಾತ್ರ ಮನಸ್ಸಿಗೆ ಬೇ ಸ ರ ತಂದಿದೆ ಎಂದಿದ್ದಾರೆ. ಯುವತಿಯನ್ನು ಕುಟುಂಬ ಕ ಲಹಗಳ ಕೋರ್ಟ್ ನ ಕೌನ್ಸಿಲರ್ ಸರಿತಾ ಅವರು ಕೌನ್ಸಿಲಿಂಗ್ ಮಾಡುತ್ತಿದ್ದು ಇದುವರೆವಿಗೂ ನಾಲ್ಕು ರೌಂಡ್ ಗಳ ಕೌನ್ಸಿಲಿಂಗ್ ನಡೆಸಿರುವುದಾಗಿ ಆಕೆ ತಿಳಿಸಿದ್ದು, ಮಾದ್ಯಮವೊಂದಕ್ಕೆ ಸರಿತಾ ಅವರು ಮಾಹಿತಿ ನೀಡುತ್ತಾ ಯುವತಿಗೆ ತಂದೆಯ ಮೇಲಿದ್ದ ನಂಬಿಕೆ ಪೂರ್ತಿಯಾಗಿ ಹೊರಟು ಹೋಗಿದೆ. ಯುವತಿಯ ಪ್ರಕಾರ ಆಕೆಯ ತಂದೆ ಆಟದಲ್ಲಿ ಸೋಲನ್ನು ಒಪ್ಪಿಕೊಳ್ಳಬೇಕಿತ್ತು. ಅದರ ಬದಲಾಗಿ ಅವರ ತಂದೆ ಮೋ ಸ ಮಾಡಿದರು ಎನ್ನುವ ಭಾವನೆ ನೋ ವನ್ನು ತಂದಿದೆ ಎಂದು ತಿಳಿಸಿದ್ದಾರೆ.