ತಂದೆಯ ಸಂಪತ್ತಿನ ಮೇಲೆ ಮಗಳ ಅಧಿಕಾರವೇಷ್ಟು? ಸುಪ್ರೀಂ ಕೋರ್ಟ್ ನೀಡಿತು ಮಹತ್ವದ ತೀರ್ಪು.
ಹಿಂದೂ ಮಹಿಳೆ ಮತ್ತು ವಿಧವೆ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದಂತೆ ಹಿಂದೂ ಉತ್ತರಾಧಿಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ಒಂದು ಸುಪ್ರೀಂಕೋರ್ಟಿನಲ್ಲಿತ್ತು. ಈ ಸಂಬಂಧವಾಗಿ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಮತ್ತು ನ್ಯಾಯಮೂರ್ತಿ ಕೃಷ್ಣ ಮುರಾರಿ ಅವರ ಪೀಠ ಮಹತ್ವದ ತೀರ್ಪೊಂದನ್ನು ನೀಡಿದೆ.
ತಂದೆಯ ಸಂಪತ್ತಿನಲ್ಲಿ ಮಗಳ ಅಧಿಕಾರವೆಷ್ಟು?
ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ಹಿಂದೂ ಪುರುಷನು ಉಯಿಲು ತಯಾರಿಸುವ ಮುನ್ನವೇ ತೀರಿಕೊಂಡರೆ ಆತ ಗಳಿಸಿದ ಒಟ್ಟು ಸಂಪತ್ತು ಹಾಗೂ ಬೇರೆ ಆಸ್ತಿ ಹೀಗೆ ಎಲ್ಲವೂ ಮಗಳಿಗೆ ಸಿಗುತ್ತದೆ. ವಿಶೇಷವಾಗಿ ಈ ಸಂಪತ್ತಿನಲ್ಲಿ ಮಗನಿಗಿಂತಲೂ ಮಗಳಿಗೆ ಹೇಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ ಎಂದು ಮದ್ರಾಸ್ ಹೈಕೋರ್ಟಿನ ಒಂದು ತೀರ್ಪಿಗೆ ಸರ್ವೋಚ್ಚ ನ್ಯಾಯಾಲಯವು ಪ್ರಶ್ನೆ ಹಾಕಿತ್ತು.
ಹಿಂದೂ ಉತ್ತರಾಧಿಕಾರಿ ಕಾಯ್ದೆ ಅಡಿಯಲ್ಲಿ ಹಿಂದೂ ಮಹಿಳೆ ಮತ್ತು ವಿಧವೆಯರಿಗೆ ಸಂಪತ್ತಿನ ಹಕ್ಕುಗಳಿಗೆ ಸಂಬಂಧಿಸಿದ ಪ್ರಕರಣವೊಂದು ಸುಪ್ರೀಂಕೋರ್ಟ್ ಮುಂದೆ ಇತ್ತು. ಸುಪ್ರೀಂಕೋರ್ಟಿನ ನ್ಯಾಯ ಮೂರ್ತಿ ಎಸ್ ಅಬ್ದುಲ್ ನಜೀರ್ ಹಾಗೂ ನ್ಯಾಯಮೂರ್ತಿ ಕೃಷ್ಣ ಮುರಾರಿ ಇವರ ಪೀಠವು ಹೇಳುವ ಪ್ರಕಾರ, ಯಾವುದೇ ಒಂದು ವ್ಯಕ್ತಿಯು ತನ್ನ ಉಯಿಲು ಮಾಡುವ ಮುನ್ನವೇ ತೀರಿಕೊಂಡರೆ, ಆತನ ಪಿತ್ರಾರ್ಜಿತ ಆಸ್ತಿ ಹಾಗೂ ಆತ ಗಳಿಸಿದ ಒಟ್ಟು ಆಸ್ತಿ ಇವೆರಡೂ ಆಸ್ತಿಗಳು ಕಾನೂನು ಪ್ರಕಾರ ಉತ್ತರಾಧಿಕಾರಿಗಳಿಗೆ ವಿಂಗಡಿಸಲಾಗುತ್ತದೆ.
ಹಿಂದೂ ವ್ಯಕ್ತಿಯು ತೀರಿಕೊಂಡಾಗ ಆತನ ಉತ್ತರಾಧಿಕಾರಿ ಮಗಳು ಇದ್ದರೆ, ಜೊತೆಗೆ ತೀರಿಕೊಂಡ ವ್ಯಕ್ತಿಯ ಸಹೋದರ ಮತ್ತು ಸಹೋದರನ ಮಕ್ಕಳಲ್ಲಿ ಒಂದು ವೇಳೆ ಪಿತ್ರಾರ್ಜಿತ ಆಸ್ತಿ (ತೀರಿಕೊಂಡ ವ್ಯಕ್ತಿಯ) ವಿಂಗಡಿಸುವಾಗ ತೀರಿಕೊಂಡ ವ್ಯಕ್ತಿಯ ಮಗಳಿಗೆ ಅದರಲ್ಲಿ ಸಮಾನವಾದ ಪಾಲು ಅಥವಾ ಹಕ್ಕು ಸಿಗಲಿದೆ.
ಈ ಪ್ರಕರಣದಲ್ಲಿ ಮಗಳು ತನ್ನ ತಂದೆ ಸ್ವತ: ಗಳಿಸಿದ ಆಸ್ತಿಯಲ್ಲಿ ಪಾಲು ಪಡೆಯಲು ನ್ಯಾಯಾಲಯದ ಬಾಗಿಲನ್ನು ತಟ್ಟಿದ್ದಳು. ಕಾನೂನಿನ ಪ್ರಕಾರ ವಾರಸುದಾರರ ಅನುಪಸ್ಥಿತಿಯಲ್ಲಿ ಪೀಠವು ಮಗಳಿಗೆ ಆಕೆಯ ತಂದೆಯ ಸಂಪತ್ತಿನಲ್ಲಿ ಯಾವ ರೀತಿ ಪಾಲು ನೀಡಲು ಸಾಧ್ಯವಿದೆ ಎಂಬುದರ ಮೇಲೆ ತೀರ್ಪು ನೀಡಿತು.