ತಂದೆ ಖರೀದಿಸಿದ Mahindra XUV700 ನೋಡಿ ಮಗಳ ಖುಷಿ ಗಗನಕ್ಕೆ! ಫೋಟೋ ನೋಡಿ ಆನಂದ್ ಮಹೀಂದ್ರ ಹೇಳಿದ್ದಿಷ್ಟು.
ಯಾರದೇ ಮನೆಗೆ ಹೊಸ ವಾಹನ ಬಂದರೆ ಸಾಕು ಆ ದಿನ ಅವರ ಜೀವನದಲ್ಲಿಯ ಮಹತ್ವದ ದಿನ ಇರುತ್ತದೆ ಎನ್ನಬಹುದು. ಕಾರಣ ವ್ಯಕ್ತಿ ಕಠಿಣ ಪರಿಶ್ರಮದ ನಂತರವೇ ಆ ವಾಹನವನ್ನು ಖರೀದಿಸಿರುತ್ತಾನೆ. ಈಗ ಸೋಷಿಯಲ್ ಮೀಡಿಯಾದಲ್ಲಿ ಒಂದು ಫೋಟೋ ವೇಗದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ತಮ್ಮ ಮನೆಗೆ ಬಂದ ಹೊಸ ಕಾರನ್ನು ನೋಡಿ ಮಗಳು ಖುಷಿಯಿಂದ ಕುಣಿಯುತ್ತಿದ್ದಾಳೆ. ಕಾರು ಖರೀದಿಸಿದ ವ್ಯಕ್ತಿ ದೇಶದ ದೊಡ್ಡ ಉದ್ಯಮಿ ಆನಂದ್ ಮಹೀಂದ್ರ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಟ್ಯಾಗ್ ಮಾಡುತ್ತಾ ಸಂದೇಶವನ್ನು ಪೋಸ್ಟ್ ಮಾಡಿದ್ದಾನೆ. ಈ ಫೋಟೋ ನೋಡಿ ಆನಂದ್ ಮಹೀಂದ್ರ ಅವರು ತುಂಬಾ ಸಂತೋಷವನ್ನು ವ್ಯಕ್ತ ಮಾಡುತ್ತಾ ಮನಮುಟ್ಟುವ ಮಾತೊಂದು ಹೇಳಿದ್ದಾರೆ.
ಆನಂದ್ ಮಹೀಂದ್ರ ಅವರಿಗೆ ಟ್ಯಾಗ್ ಮಾಡಲಾದ ಆ ಎರಡು ಫೋಟೋಗಳು…
https://twitter.com/srikanth9006/status/1570067613908348928?t=klJ23Yw8mTquvxmI9Iv8IA&s=19
@srikanth9006 ಹೆಸರಿನ ಟ್ವಿಟರ್ ಹ್ಯಾಂಡಲ್ ನಿಂದ ಎರಡು ಫೋಟೋಗಳನ್ನು ಶೇರ್ ಮಾಡಲಾಗಿದೆ. ಈ ಫೋಟೋಗಳನ್ನು ಮಹೀಂದ್ರಾ ಅವರಿಗೆ ಟ್ಯಾಗ್ ಮಾಡಲಾಗಿದೆ. ಅದರಲ್ಲಿ ವ್ಯಕ್ತಿಯು ‘ತುಂಬಾ ಪರಿಶ್ರಮದಿಂದ ನಾನು ಕಾರನ್ನು ಖರೀದಿ ಮಾಡಿದ್ದೇನೆ, ನನ್ನ ಮಗಳು ತುಂಬಾ ಖುಷಿ ಪಡುತ್ತಿದ್ದಾಳೆ ಎಂದಿದ್ದಾನೆ. ನನ್ನ ಮಗಳು ಖುಷಿಯಿಂದ ಕಾರಿಗೆ ಅಪ್ಪಿಕೊಳ್ಳುತ್ತಿರುವದನ್ನು ಫೋಟೋದಲ್ಲಿ ನೋಡಬಹುದು’ ಎಂದಿದ್ದಾನೆ.
ಆನಂದ್ ಮಹೀಂದ್ರ ಅವರು ನೀಡಿದ ರಿಯಾಕ್ಷನ್.
Please tell your daughter she just made my day! 🤗 https://t.co/4U46CDmd2j
— anand mahindra (@anandmahindra) September 15, 2022
ತಂದೆ ಮತ್ತು ಮಗಳ ಪ್ರೀತಿಯನ್ನು ನೋಡಿ ಆನಂದ್ ಮಹೀಂದ್ರ ಅವರು ‘ಈ ಸುಂದರವಾದ ಫೋಟೋವನ್ನು ನಾನು ನನ್ನ ಟೈಮ್ ಲೈನ್ ನಲ್ಲಿ ನೋಡಿದೆ’ ಎಂದು ಪ್ರಸ್ತುತ ಟ್ವೀಟ್ ಗೆ ರೀಟ್ವಿಟ್ ಮಾಡುತ್ತಾ ‘ನೀವು ನಿಮ್ಮ ಮಗಳಿಗೆ ಹೇಳಿ, ಆಕೆ ಇವತ್ತು ನನ್ನ ದಿನವನ್ನು ತುಂಬಾ ಲಕ್ಕಿ ಸಾಬೀತು ಮಾಡಿದ್ದಾಳೆ ಎಂದು’ ಹೇಳುತ್ತಾರೆ.