ತನಗೆ ಬೇಡವೆನಿಸಿದರೂ ‘ಈ’ ನೌಕರನನ್ನು ಕೆಲಸದಿಂದ ತೆಗೆಯಲು ಸಲ್ಮಾನ್ ಖಾನ್ ಗೆ ಸಾಧ್ಯವಿಲ್ಲ: ಕಾರಣ ತಿಳಿದರೆ ಆಶ್ಚರ್ಯ ಖಂಡಿತ

ಬಾಲಿವುಡ್ ನಟ ಭಾಯಿಜಾನ್ ಸಲ್ಮಾನ್ ಖಾನ್ ಅವರನ್ನು ಗುರುತಿಸದವರು ಯಾರು ಇಲ್ಲ. ಬಾಲಿವುಡ್ನಲ್ಲಿ ಸಲ್ಮಾನ್ ಖಾನ್ ಅವರು ತಮ್ಮದೇಯಾದ ಸ್ವತಂತ್ರ ಗುರುತನ್ನು ಸ್ಥಾಪಿಸಿಕೊಂಡಿದ್ದಾರೆ. ಇವರು ಬಾಲಿವುಡ್ನಲ್ಲಿ ಅನೇಕ ನಟ-ನಟಿಯರ ಭವಿಷ್ಯವನ್ನು ಸಹ ರೂಪಿಸಿದ್ದಾರೆ. ಇಂದಿನ ಲೇಖನದಲ್ಲಿ ಸಲ್ಮಾನ್ ಖಾನ್ ಅವರ ಬಗ್ಗೆ ಅಲ್ಲ, ಅವರ ಮನೆಯಲ್ಲಿ ಕೆಲಸಕ್ಕಿರುವ ಗಂಗಾರಾಮ್ ಹೆಸರಿನ ವ್ಯಕ್ತಿಯ ಬಗ್ಗೆ ಹೇಳುವವರಿದ್ದೇವೆ. ಈ ವ್ಯಕ್ತಿಗೆ ಸಲ್ಮಾನ್ ಖಾನ್ ಅವರು ಇಚ್ಛೆ ಇದ್ದರೂ ಕೆಲಸದ ಮೇಲಿಂದ ತಮತೆಗೆದು ಹಾಕಲು ಸಾಧ್ಯವಿಲ್ಲ.

ಸಲ್ಮಾನ್ ಖಾನ್ ಅವರು ತಮ್ಮ ಕುಟುಂಬದ ಜೊತೆಗೆ ಕಪಿಲ್ ಶರ್ಮ ಅವರ ಕಾಮಿಡಿ ಶೋ ನಲ್ಲಿ ಎಂಟ್ರಿ ನೀಡಿದ್ದರು. ಆ ಸಮಯದಲ್ಲಿ ಸಲ್ಮಾನರ ಜೊತೆಗೆ ಅವರ ಇಬ್ಬರು ಸಹೋದರರಾದ ಸೊಹೈಲ್ ಮತ್ತು ಅರ್ಬಾಜ್ ಮತ್ತು ತಂದೆ ಸಲೀಮ್ ಖಾನ್ ಇದ್ದರು. ಈ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಅವರು ತಮ್ಮ ಕುಟುಂಬಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಮುಕ್ತವಾಗಿ ಬಿಚ್ಚಿಟ್ಟರು.

ಏತನ್ಮದ್ಯೆ ಸಲ್ಮಾನ್ ಅವರು ತಮ್ಮ ಮನೆಯಲ್ಲಿ ಕೆಲಸ ಮಾಡುವ ಒಂದು ವ್ಯಕ್ತಿಯ ಬಗ್ಗೆಯೂ ಉಲ್ಲೇಖಿಸಿದರು. ಈ ಗಂಗಾರಾಮ್ ಹೆಸರಿನ ವ್ಯಕ್ತಿಗೆ ಸಲ್ಮಾನ್ ಮನಸು ಮಾಡಿದರೂ ನೌಕರಿ ಮೇಲಿಂದ ಮಾತ್ರ ತೆಗೆಯಲು ಸಾಧ್ಯವಿಲ್ಲವಂತೆ. ಅಂದು ಗಂಗಾರಾಮನಿಗೂ ಸಲ್ಮಾನ್ ಸ್ಟೇಜ್ ಮೇಲೆ ಕರೆದಿದ್ದರು.

ಸಲ್ಮಾನ್ ಅವರ ತಂದೆ ಸಲೀಮ್ ಖಾನ್ ಅವರು ಹೇಳುವ ಹಾಗೆ, ಗಂಗಾರಾಮ್ ನು ಸಲೀಮ್ ಖಾನರ ಮೊದಲ ಪತ್ನಿ ‘ಸಲ್ಮಾ’ಳ ಜೊತೆಗೆ ವರದಕ್ಷಿಣೆಯಲ್ಲಿ ಬಂದಿದ್ದನಂತೆ. ಸಲೀಮ್ ಖಾನರು ಎಷ್ಟೋ ಸಲ ಕೆಲಸದಿಂದ ತೆಗೆದು ಹಾಕಲು ಪ್ರಯತ್ನಿಸಿದ್ದರಂತೆ. ಆ ಸಂದರ್ಭದಲ್ಲಿ ಸಲೀಮ್ ಖಾನ್ ರ ಮೇಲೆ ಸಲ್ಮಾ ಖಾನ್ ತುಂಬಾ ಸಿಟ್ಟಿಗೆದ್ದಿದ್ದರಂತೆ. ಮತ್ತು ಸುಮಾರು ಆರು ತಿಂಗಳವರೆಗೆ ಮಾತನಾಡುವುದನ್ನೇ ಬಿಟ್ಟಿದ್ದರು. ಹೀಗಾಗಿ ಅಂದಿನಿಂದ ಮನೆಯಲ್ಲಿ ಯಾರು ಗಾಂಗಾರಾಮ್ ನ ತಂಟೆಗೆ ಹೋಗುವುದಿಲ್ಲ. ಗಂಗಾರಾಮ್ ಮನೆಯಲ್ಲಿ ಏನು ಮಾಡಿದರೂ ಸಹ ಯಾರು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.

ಗಂಗಾರಾಮ್ ಒಂದು ರೀತಿಯಲ್ಲಿ ಸಲ್ಮಾನ್ ಖಾನ್ ಅವರ ಮನೆಯ ಕುಟುಂಬದ ಸದಸ್ಯನೇ ಆಗಿದ್ದಾನೆ. ಸಲ್ಮಾ ಖಾನ್ ಅವರ ವರದ ಹಸ್ತ ಗಂಗಾರಾಮ್ ಅವರ ತಲೆಯ ಮೇಲೆ ಇರುವುದರಿಂದ ಯಾರೇ ಆಗಲಿ ಗಂಗಾರಾಮ್ ಅವರಿಗೆ ಕೆಲಸದ ಮೇಲಿಂದ ಅಥವಾ ಸಲ್ಮಾನ್ ಖಾನ್ ಅವರ ಮನೆಯಿಂದ ತೆಗೆದುಹಾಕಲು ಸಾಧ್ಯವಿಲ್ಲ.