ತನ್ನಷ್ಟಕ್ಕೆ ತಾನು ಸುಮ್ಮನೆ ನಿಂತಿರುವ ಜಿರಾಫೆಗೆ ಕೆಣಕಲು ಹೋದ ನೀರಾನೆ; ಮುಂದೇನಾಯಿತು ನೋಡಿ ಈ Viral Video!
ಕಿಡಿಗೇಡಿ ಗುಣಗಳು ಬರೀ ಮನುಷ್ಯನಲ್ಲಿ ಅಷ್ಟೇ ಇರುವುದಿಲ್ಲ, ಬೇರೆ ಪ್ರಾಣಿಗಳಲ್ಲಿಯೂ ಈ ರೀತಿಯ ಕಿಡಿಗೇಡಿತನದ ಗುಣಗಳು ಇರುತ್ತವೆ ಎಂಬುದು ಅನೇಕ ವಿಡಿಯೋಗಳಿಂದ ಸಿದ್ಧವಾಗಿದೆ. ಅಂಥ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೇಗದಲ್ಲಿ ವೈರಲ್ ಆಗುತ್ತಿರುತ್ತವೆ. ಇವುಗಳಲ್ಲಿ ಹೆಚ್ಚಾಗಿ ಬೇಟೆಯಾಡುವ ವಿಡಿಯೋಗಳು, ಪ್ರಾಣಿಗಳು ತಮ್ಮತಮ್ಮಲ್ಲಿ ಕಚ್ಚಾಡುವ ವಿಡಿಯೋಗಳು ಮತ್ತು ಒಂದು ಪ್ರಾಣಿ ಇನ್ನೊಂದು ಪ್ರಾಣಿಗೆ ಕೆಣಕುವುದು, ಅಥವಾ ಏನಾದರೂ ಕಿಡಿಗೇಡಿತನವನ್ನು ಮಾಡುವ ವಿಡಿಯೋಗಳು ಇರುತ್ತವೆ.
ಇಂದು ಈ ಅಂಕಣದಲ್ಲಿ ಶೇರ್ ಮಾಡಿದ ವಿಡಿಯೋ ತುಂಬಾನೇ ಮಜವಾಗಿದೆ. ಒಂದು ಗಿಡದ ನೆರಳಿನಲ್ಲಿ ಜಿರಾಫೆಯೊಂದು ತನ್ನಷ್ಟಕ್ಕೆ ತಾನು ಸುಮ್ಮನೆ ಶಾಂತವಾಗಿ ನಿಂತಿದೆ. ಅಲ್ಲಿಯೇ ಇದ್ದ ನೀರಾನೆಗೆ ಜಿರಾಫೆ ಸುಮ್ಮನೆ ನಿಂತದ್ದು ಯಾಕೋ ಸರಿಯೆನಿಸಿಲ್ಲ, ಅದಕ್ಕಾಗಿ ನೀರಾನೆಯು ಜಿರಾಫೆಯ ಹಿಂದಿನಿಂದ ಹೋಗಿ ಅದರ ಕಾಲು ಎಳೆಯಬೇಕೆಂದಿದೆ. ತಕ್ಷಣ ಇದನ್ನು ಗಮನಿಸಿದ ಜಿರಾಫೆ ನೀರಾನೆಯ ಮುಖದಮೇಲೆ ತನ್ನ ಬಲಿಷ್ಠವಾದ ಕಾಲುಗಳಿಂದ ಬ್ಯಾಕ್ ಕಿಕ್ ಕೊಟ್ಟಿದೆ. ಜಿರಾಫೆಯ ಕೊಟ್ಟ ಆಕಸ್ಮಿಕ ಮತ್ತು ಬಲವಾದ ಹೊಡೆತದಿಂದ ನೀರಾನೆಯು ತಬ್ಬಿಬ್ಬಾಗಿದೆ. ನನ್ನ ಜೊತೆಗೆ ಕ್ಷಣಾರ್ಧದಲ್ಲಿ ಏನಾಯಿತು ಎಂಬುದು ಸಹಿತ ಅದಕ್ಕೆ ತಿಳಿಯದೆ ಒಮ್ಮೆಲೆ ನಾಗಾಲೋಟದಲ್ಲಿ ಅಲ್ಲಿಂದ ಪರಾರಿಯಾಗಿದೆ. ಆ ಸಮಯದಲ್ಲಿ ನಿರಾನೆಯ ಓಡುವದರ ರಭಸವನ್ನು ನೋಡಿದರೆ ಬದುಕಿದೆಯಾ ಬಡ ಜೀವವೇ ಎಂಬಂತಿತ್ತು. ಜಿರಾಫೆಯ ಈ ಒಂದು ಹೊಡೆತದಿಂದ ನೀರಾನೆಯು ಭವಿಷ್ಯದಲ್ಲಿ ತನ್ನ ಜೀವವಿರುವವರೆಗೂ ಜಿರಾಫೆಯ ತಂಟೆಗೆ ಹೋಗುವುದಿಲ್ಲ, ಹಾಗಾಗಿದೆ ನೀರಾನೆಯ ಪರಿಸ್ಥಿತಿ.
ಸಾಮಾನ್ಯವಾಗಿ ಜಿರಾಫೆಯು ತುಂಬಾ ಶಾಂತವಾದ ಪ್ರಾಣಿಯಾಗಿದೆ. ಆದರೆ ಈ ವಿಡಿಯೋ ದಿಂದ ತಿಳಿದು ಬರುವ ವಿಷಯವೇನೆಂದರೆ, ಜೀರಾಫೆಯ ತಂಟೆಗೆ ಹೋದವರು ಯಾರೇ ಇರಲಿ ಅವರಿಗೆ ಸರಿಯಾಗಿ ತನ್ನ ಬಲವಾದ ಕಾಲುಗಳಿಂದ ಕಪಾಳಮೋಕ್ಷ ಮಾಡದೇ ಬಿಡುವುದಿಲ್ಲ ಎಂಬುದು ಗೊತ್ತಾಗುತ್ತದೆ. ಇಲ್ಲಿಯೂ ಆಗಿದ್ದು ಅದೇ. ಶಾಂತವಾಗಿ ನಿಂತ ಜಿರಾಫೆಗೆ ಪುಟ್ಟ ನೀರಾನೆಯೊಂದು ಕೆಣಕಲು ಹೋಗಿ ಪರಿತಪಿಸುವಂತಾಗಿದೆ.
ವಿಡಿಯೋ ನೋಡಿ
The kick that the rhinoceros will remember for life…
— Susanta Nanda IFS (@susantananda3) October 22, 2020
Do you know that a giraffe can kick in any direction?
And can u guess which animal has the strongest kick in the world? No google please. pic.twitter.com/tHjX7WsiQh
ಈ ಸುಂದರವಾದ ವಿಡಿಯೋವನ್ನು ಭಾರತದ ಐಎಫ್ಎಸ್ ಅಧಿಕಾರಿ ಯಾದ ಸುಶಾಂತ್ ನಂದಾ ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್ ನಿಂದ ಶೇರ್ ಮಾಡಿದ್ದಾರೆ. ಈ ವಿಡಿಯೋ ಯೂಸರ್ಸ್ ಗಳಿಗೆ ತುಂಬಾನೇ ಇಷ್ಟವಾಗಿದೆ. ಇಲ್ಲಿಯವರೆಗೆ ಸಾವಿರಾರು ಜನರ ನೋಡಿ ಟ್ವೀಟ್ ಮತ್ತು ರೀಟ್ವೀಟ್ ಮಾಡಿದ್ದಾರೆ. ಹಾಗೂ ತುಂಬಾ ಮಜವಾದ ಕಮೆಂಟ್ಗಳನ್ನು ಸಹಿತ ಮಾಡಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡುವುದರ ಜೊತೆಗೆ ಸುಶಾಂತ್ ಅವರು ಹೀಗೆ ಬರೆದಿದ್ದಾರೆ, ನೀರಾನೆಯು ಜಿರಾಫೆಯ ಈ ಕಿಕ್ ತನ್ನ ಜೀವಮಾನವಿಡೀ ನೆನಪಿನಲ್ಲಿಟ್ಟುಕೊಳ್ಳುತ್ತದೆ.
.