ತನ್ನ ಕರುಳ ಕುಡಿ ಮೊಸಳೆಗೆ ಆಹಾರವಾಗುತ್ತೆಂದು ತಾಯಿಜಿಂಕೆ ಮಾಡಿದ ಪ್ಲಾನ್ ನೋಡಿ! ಮನ ಕಲುಕುವ ವಿಡಿಯೋ…
ತಾಯಿಯ ವಾತ್ಸಲ್ಯ ಪ್ರತಿ ಜೀವಿಯಲ್ಲೂ ಅಗಾಧವಾಗಿದೆ. ತನ್ನ ಕರುಳಿನ ಕುಡಿ ಯಾವುದಾದರೂ ಇಕ್ಕಟ್ಟಿನಲ್ಲಿ ಸಿಕ್ಕಿ ಬಿದ್ದಾಗ ತಾಯಿಯ ಜೀವ ಒಂದೇ ಸವನೆ ಮರಮರನೆ ಮರಗುತ್ತಿರುತ್ತದೆ. ಇದು ಜಗತ್ತಿನ ಪ್ರತಿ ಜೀವಿಯಲ್ಲಿಯೂ ಕಂಡು ಬರುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ತಾಯಿಯ ಅಮೋಘ ವಾತ್ಸಲ್ಯವನ್ನು ತೋರಿಸುವ ಅದ್ಭುತವಾದ ವಿಡಿಯೋ ಒಂದು ತುಂಬಾ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ಮರಿ ಜಿಂಕೆಯು ತನ್ನ ತಾಯಿಯೊಂದಿಗೆ ಈಜುತ್ತಾ ನದಿಯನ್ನು ದಾಟುವ ಪ್ರಯತ್ನದಲ್ಲಿದೆ. ಆ ಸಂದರ್ಭದಲ್ಲಿ ಮರಿಜಿಂಕೆಯು ತಾಯಿಗಿಂತ ಸ್ವಲ್ಪ ಅಂತರ ಮುಂದೆ ಮುಂದೆ ಈಜುತ್ತಾ ನಡೆದಿದೆ. ತಾಯಿ ಜಿಂಕೆಯು ಹಿಂದಿನಿಂದ ಈಜುತ್ತಾ ಬರುತ್ತಿದೆ. ಅದೇ ಸಮಯಕ್ಕೆ ಸರಿಯಾಗಿ ಮೊಸಳೆಯೊಂದು ಮರಿಜಿಂಕೆಯ ಕಡೆಗೆ ಬೇಟೆಯಾಡಲು ಧಾವಿಸಿ ಬರುತ್ತಿರುವದನ್ನು ತಾಯಿಜಿಂಕೆ ಗಮನಿಸುತ್ತದೆ. ತನ್ನ ಕರುಳಿನ ಕುಡಿ ಮೊಸಳೆಗೆ ಇನ್ನೇನು ಆಹಾರವಾಗಿ ಬಿಡುತ್ತದೆ ಎಂಬ ಭೀತಿಯಿಂದ ತಾಯಿ ಜಿಂಕೆ ಸ್ವಲ್ಪವೂ ಸಮಯ ವ್ಯರ್ಥ ಮಾಡದೆ ಮರಿ ಮತ್ತು ಮೊಸಳೆಯ ಮಧ್ಯದಲ್ಲಿ ವೇಗವಾಗಿ ಬಂದು ನಿಂತು ತನ್ನನ್ನು ತಾನೇ ಮೊಸಳೆಗೆ ಆಹುತಿ ಮಾಡಿಕೊಳ್ಳುತ್ತದೆ. ಇತ್ತ ಮರಿಜಿಂಕೆ ಈಜುತ್ತಾ ನದಿಯ ದಡ ಸೇರುತ್ತದೆ. ಮೊಸಳೆ ಮಾತ್ರ ತಾಯಿ ಜಿಂಕೆಗೆ ತನ್ನ ಬಲವಾದ ಬಾಯಿಯಲ್ಲಿ ಹಿಡಿದುಕೊಂಡು ಹೋಗಿ ಬಿಡುತ್ತದೆ. ಈ ಹೃದಯ ವಿದ್ರಾವಕ ದೃಶ್ಯ ನೋಡಲು ಮನಸ್ಸಿಗೆ ತುಂಬಾ ನೋವಾಗುತ್ತದೆ. ಮೊಸಳೆಯ ಆಹಾರವೇ ಇದಾಗಿದೆ ಎಂದ ಮೇಲೆ ಇದೆಲ್ಲವೂ ಕಾಡಿನಲ್ಲಿ ಸಾಮಾನ್ಯವೇ ಸರಿ. ಆದರೆ ವಿಡಿಯೋದಲ್ಲಿಯ ಈ ದೃಶ್ಯ ಮಾತ್ರ ಮನವನ್ನು ಕಲಕುತ್ತದೆ.
ವಿಡಿಯೋ ನೋಡಿ
View this post on Instagram
ಪ್ರಸ್ತುತ ವಿಡಿಯೋವನ್ನು ಆಫ್ರಿಕನ್ ವೈಲ್ಡ್ ಲೈಫ್ ಈ ಹೆಸರಿನಿಂದ ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಲಾಗಿದೆ.