ತನ್ನ ಜೀವಕ್ಕಿಂತ ಹೆಚ್ಚಾಗಿ ಎಮ್ಮೆಯ ಮೇಲಿತ್ತು ಪ್ರೀತಿ, ಪ್ರೀತಿಯಲ್ಲಿ ಮುಳುಗಿಹೋದ ಹುಡುಗಿ ಮಾಡಿದ ಕೃತ್ಯವನ್ನು ಕಂಡು ತಬ್ಬಿಬ್ಬಾದ ಮನೆಯ ಮಂದಿ!!

ಪ್ರೀತಿಗೆ ಕಣ್ಣಿಲ್ಲ, ಪ್ರೀತಿ ಕುರುಡು ಇರುತ್ತದೆ , ಪ್ರೀತಿಗೆ ಯಾವುದೇ ವಯಸ್ಸಿನ ಮಿತಿಯಿಲ್ಲ ಇನ್ನೂ ಹಲವಾರು ಸಂಗತಿಗಳನ್ನು ನಾವು ಚಿಕ್ಕವರಿಂದಾಗಲೂ ಕೇಳುತ್ತ ಬಂದಿದ್ದೇವೆ. ಪ್ರಿಯಕರ-ಪ್ರೇಯಸಿ, ಗಂಡ-ಹೆಂಡತಿ ಮತ್ತು ತಾಯಿ-ತಂದೆ ಇವರಿಷ್ಠೆ ಪ್ರೀತಿ ಮಾಡುತ್ತಾರೆ ಅನ್ನೋದು ಬರಿ ಭ್ರಮೆ ಅಷ್ಟೇ, ನಾವು ಸಾಕುವ ಪ್ರಾಣಿಗಳನ್ನು ಸಹ ನಾವು ಜೀವಕ್ಕೂ ಹೆಚ್ಚಾಗಿ ಪ್ರೀತಿ ಮಾಡುತ್ತೇವೆ. ಏಕೆಂದರೆ ಪ್ರಾಣಿ ಸಹ ಇದೊಂದು ಜೀವಿಯಾಗಿದೆ. ಅವುಗಳು ಮನುಷ್ಯರನ್ನು ತುಂಬಾ ಪ್ರೀತಿ ಮಾಡುತ್ತವೆ ಅನ್ನೋದನ್ನು ಎಷ್ಟೋ ಸಲ ನೋಡಿದ್ದೇವೆ.

ಆದರೆ…ಪ್ರೀತಿ ಈ ಸಂಗತಿ ಎಷ್ಟು ಒಳ್ಳೆಯದಾಗಿದೆಯೋ ಅಷ್ಟೇ ಕೆಟ್ಟದಾಗಿದೆ. ಪ್ರೀತಿಗೆ ಎರಡು ಮುಖಗಳು ಇರುತ್ತವೆ. ಒಂದು ಒಳ್ಳೆಯದು ಇನ್ನೊಂದು ಕೆಟ್ಟದು ಎರಡು ಮುಖಗಳ ಅರಿತು ಪ್ರೀತಿ ಮಾಡಿದವರೆ ಜಗತ್ತಿನಲ್ಲಿ ಹೆಸರಾಂತ ಪ್ರೇಮಿಗಳಾಗುತ್ತಾರೆ. ಒಬ್ಬರ ಮೇಲೆ ನಮಗಿಂತ ಹೆಚ್ಚಾಗಿ ಅವರನ್ನು ನಂಬಿ ಪ್ರೀತಿ ಮಾಡಿದರೆ ಅದು ಒಂದು ದಿವಸ ನಮಗೆ ಕೆಡಕಾಗುವದು ಸಹಜ ಹೇಗೆಂದರೆ ನಾವು ಪ್ರೀತಿಸಿದ ವ್ಯಕ್ತಿ ಮೊದಲಿನ ಹಾಗೆ ಇರದೇ ಇದ್ದಲ್ಲಿ ಅಥವಾ ನಮ್ಮನ್ನು ಬಿಟ್ಟು ಹೋದಾಗ ಉಂಟಾಗುವ ರೋಧನೆ ವಿವರಿಸಲು ಸಾಧ್ಯವಿಲ್ಲ. ಈ ಅನುಭವ ಕೆಲವರಿಗೆ ಬಂದಿರಬಹುದು ಸಹಿತ. ಪ್ರೀತಿಯಲ್ಲಿ ಗೆದ್ದವರಿಗಿಂತ ಸೋತವರೆ ಜಾಸ್ತಿ.

ಸದ್ಯಕ್ಕೆ ಈ ಹುಚ್ಚು ಪ್ರೀತಿಯಲ್ಲಿ ಒಬ್ಬ ಯುವತಿ ಮಾಡಿದ್ದನ್ನು ಕೇಳಿದರೆ ನೀವು ಆಶ್ಚರ್ಯ ಪಡದೆ ಇರಲಾರಿರಿ. ಈ ಯುವತಿ ಒಬ್ಬರನ್ನು ತುಂಬಾನೇ ಪ್ರೀತಿ ಮಾಡುತ್ತಿದ್ದಳು ಅದು ಯಾವುದೇ ವ್ಯಕ್ತಿ ಅಲ್ಲ. ಅದು ಪ್ರಾಣಿ ಅಂದರೆ ಆಕೆ ಎಮ್ಮೆಯನ್ನು ತುಂಬಾ ಹಚ್ಚಿಕೊಂಡಿದ್ದಳು ಅಲ್ಲದೆ ತನಗಿಂತ ಹೆಚ್ಚು ಪ್ರೀತಿ ಮಾಡುತ್ತಿದ್ದಳು. ಹೀಗಾಗಿ ಆ ಎಮ್ಮೆಯನ್ನು ಒಂದು ಕ್ಷಣವೂ ಬಿಟ್ಟು ಇರುತ್ತಿರಲಿಲ್ಲ. ಹೀಗಾಗಿ ಎಮ್ಮೆಯ ವಿರಹದಿಂದ ಈ ಯುವತಿ ಮಾಡಿದ ಕೃತ್ಯ ಕಂಡು ತಬ್ಬಿಬ್ಬಾಗಿದ್ದಾರೆ.

ಉತ್ತರಪ್ರದೇಶದ ಜಾಲೌನ್ ನಲ್ಲಿಯ ಕುರೋನಾ ಎಂಬ ಊರಿನಲ್ಲಿ ಒಬ್ಬ ವ್ಯಕ್ತಿಯ ಕಡೆಗೆ 3 ಎಮ್ಮೆಗಳು ಇದ್ದವು. ಆ ವ್ಯಕ್ತಿಗೆ ಒಬ್ಬ ಮಗಳಿದ್ದಳು ಆಕೆಯ ಹೆಸರು ರಜನಿ. ರಜನಿ ಆ ಮೂರು ಎಮ್ಮೆಗಳನ್ನು ಪಾಲನೆ ಮಾಡುತ್ತಿದ್ದಳು. ಅವುಗಳಿಗೆ ಸ್ನಾನ ಮಾಡಿಸುವದು, ಹುಲ್ಲು ಮೇಯಿಸಲು ಗುಡ್ಡಕ್ಕೆ ಕರೆದುಕೊಂಡು ಹೋಗುವದು, ಅಲ್ಲದೆ ಎಮ್ಮೆಗಳ ಬಗ್ಗೆ ತುಂಬಾ ಗಮನ ವಹಿಸುತ್ತಿದ್ದಳು ಹೀಗಾಗಿ ಅವಳಿಗೆ ಎಮ್ಮೆಗಳ ಮೇಲೆ ಜೇವಕ್ಕೂ ಹೆಚ್ಚು ಪ್ರೀತಿ ಇತ್ತು.

ಹೀಗೆ 9 ಡಿಸೆಂಬರ್ ರಂದು ಆಕೆ ತನ್ನ ಎಲ್ಲ ಎಮ್ಮೆಗಳನ್ನು ಹುಲ್ಲು ಮೇಯಿಸಲು ಊರಿನ ಹೊರಗೆ ಗುಡ್ಡದ ಓರೆಯಲ್ಲಿ ಕರೆದುಕೊಂಡು ಹೋದಳು. ಆದರೆ ಸ್ವಲ್ಪ ವಿಶ್ರಾಂತಿ ಪಡೆಯುವ ಸಲುವಾಗಿ ಆಕೆ ಒಂದು ಹೆಮ್ಮರದ ಕೆಳಗೆ ಕುಳಿತುಕೊಂಡಳು, ಆದರೆ ಎಮ್ಮೆಗಳು ತಮ್ಮಷ್ಟಕ್ಕೆ ತಾವು ಮೆಯುತ್ತ ನೋಡು ನೋಡುವಷ್ಟರಲ್ಲಿ ಅಲ್ಲಿಂದ ಪರಾರಿಯಾದವು. ತದನಂತರ ಕಳೆದ ಎಮ್ಮೆಗಳನ್ನು ಹುಡುಕಲು ತುಂಬಾ ಪ್ರಯತ್ನ ಮಾಡಿದಳು ಆದರೆ ಒಂದು ಎಮ್ಮೆಯೂ ಸಹ ಅವಳಿಗೆ ಸಿಗಲೇ ಇಲ್ಲ. ಇದರಿಂದ ಆಕೆ ದೊಡ್ಡ ಆ#ಘಾತದಲ್ಲಿ ಮುಳುಗಿದಳು.

ತುಂಬಾ ದುಃಖದಲ್ಲಿ ಮನೆಗೆ ತೆರಳಿದ ಯುವತಿ, ತನಗಿಂತ ಹೆಚ್ಚಾಗಿ ಪ್ರೀತಿಸುವ ಎಮ್ಮೆಗಳ ಕಳೆದು ಹೋದ ಸಂಗತಿ ಅವಳ ಮನಸ್ಸಲ್ಲಿ ದೊಡ್ಡ ಆ#ಘಾತಕಾರಿ ಸಂಗತಿಯಾಗಿ ಉಳಿಯಿತು. ನಿರಾಶೆಯಲ್ಲಿದ್ದ ರಜನಿ ರಾತ್ರಿಯ ಸಮಯದಲ್ಲಿ ನಾನೇ ತಪ್ಪು ಮಾಡಿದೆ ನಾನು ಎಮ್ಮೆಗಳನ್ನು ಬಿಟ್ಟು ನಾನು ಬದುಕಿ ಏನು ಪ್ರಯೋಜನ ಎಂದು ನೇ#ಣು ಹಾಕಿಕೊಂಡಳು. ಕೆಲವೇ ನಿಮಿಷಗಳಲ್ಲಿ ಮನೆಯವರು ಎಚ್ಚೆತ್ತುಕೊಂಡು ನೋಡಿದಾಗ ಯುವತಿಯ ಶರೀರ ಹಗ್ಗಕ್ಕೆ ಜೋತು ಬಿದ್ದಿತ್ತು ಕೈ ಕಾಲು ಇನ್ನೂ ಅಲುಗಡುತ್ತಿದ್ದವು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು ಅಲ್ಲಿ ಡಾಕ್ಟರ್ ಈಕೆಯನ್ನು ಉಪಚಾರ ಮಾಡಿ ಈಕೆಯ ಜೀವವನ್ನು ಉಳಿಸಿದರು. ಸದ್ಯಕ್ಕೆ ರಜನಿಯ ಪ್ರಕೃತಿ ತುಂಬಾ ವ್ಯವಸ್ಥಿತವಾಗಿದೇ.